

ಶ್ರೀನಿವಾಸಪುರ : ಪಟ್ಟಣದಲ್ಲಿ ರೋಗ ರುಜನಿಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ಒಂದು ರೀತಿಯಲ್ಲಿ ವೈದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಹೇಳುತ್ತಾ, ಪಟ್ಟಣದ ಸ್ವಚ್ಚತೆಯಲ್ಲಿ ಪೌರಕಾರ್ಮಿಕರ ಕಾರ್ಯ ಬಹು ಮುಖ್ಯವಾದದು ಎಂದು ಪುರಸಭೆ ಮುಖ್ಯಾಧಿಕಾರಿ ನಾಗರಾಜ್. ವಿ ಹೇಳಿದರು.
ಪಟ್ಟಣ ಪುರರಸಭೆವತಿಯಿಂದ ಶನಿವಾರ ಸಿ&ಡಿ ತ್ಯಾಜ್ಯ ವಿಲೇವಾರಿ ಅಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಅದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪುರಸಭೆ ವ್ಯಾಪ್ತಿಯ ಅಮಾನಿ ಕರೆಕಟ್ಟೆಯ ಮೇಲೆ ಸ್ಥಳ ನಿಗಧಿಪಡಿಸಲಾಗಿದ್ದು, ಸಾರ್ವಜನಿಕರು ಮನೆಗಳನ್ನು ದುರಸ್ತಿ ಮಾಡುವ ವೇಳೆ ಅಲ್ಲಿ ಬೀಳುವ ಗಲೀಜುನ್ನು ನಿಗಧಿಪಡಿಸಿರುವ ಸ್ಥಳದಲ್ಲಿಯೇ ಹಾಕಬೇಕು .ಪಟ್ಟಣದಲ್ಲಿ ಎಲ್ಲೆಂದರೆ ಅಲ್ಲಿ ಗಲೀಜು ಹಾಕಬಾರದೆಂದು ಹೇಳುತ್ತಾ, ಸಾರ್ವಜನಿಕರು ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪಟ್ಟಣದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಲಿದ್ದು , ಪುರಸಭೆಯ ಅದೇಶವನ್ನು ನಿರಕಾರಿಸಿದವರ ಮೇಲೆ ಕ್ರಿಮಿನಿಲ್ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಯೋಜನಾ ನಿರ್ದೇಶಕರ ಕಚೇರಿ ಅಭಿಯಂತರಾದ ಶ್ರೀನಿವಾಸ್, ಹರ್ಷವರ್ದನ್, ಪುರಸಭೆ ಪರಿಸರ ಅಬಯಂತರ ಲಕ್ಷೀಶ, ಆರೋಗ್ಯ ನಿರೀಕ್ಷಕ ಟಿ.ವಿ.ಸುರೇಶ್, ಪೌರಕಾರ್ಮಿಕರ ಪ್ರಮುಖ್ ಬಾಲಕೃಷ್ಣ ಇದ್ದರು.

