

ಉಡುಪಿ; ಗೃಹಲಕ್ಷ್ಮಿ ಹಣದ ಬಗ್ಗೆ ತಕರಾರು ಎತ್ತುತ್ತಿರುವ ಬಿಜೆಪಿಯವರು ರೈತರಿಗೆ ಪಿ.ಎಂ ಕಿಸಾನ್ ಹಣ ತಿಂಗಳಿಗೆ ಸರಿಯಾಗಿ ಬರುತ್ತಿದೆಯಾ, ಗ್ಯಾಸ್ ಸಬ್ಸಿಡಿ ಇದರ ಬಗ್ಗೆ ನೋಡಿಕೊಳ್ಳಬೇಕು
ರೈತರಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ರದ್ದು ಮಾಡಿ ಗೊಬ್ಬರ ಮತ್ತು ಕೃಷಿ ಉಪಕರಣಗಳ ಬೆಲೆಯನ್ನು ಗಗನಕ್ಕೇರಿಸಿದ ಬಿಜೆಪಿ ಪಿ.ಎಂ ಕಿಸಾನ್ ಎಂಬ ಯೋಜನೆಯ ಮೂಲಕ ರೈತರ ಖಾತೆಗೆ ಹಣ ಹಾಕುತ್ತೇವೆ ಅಂತ ಪ್ರಚಾರ ಪಡೆದುಕೊಂಡು ಬಿಜೆಪಿ ಪಕ್ಷದವರು ಯೋಜನೆ ಜಾರಿಯಾದಾಂದನಿಂದ ರೈತರ ಖಾತೆಗೆ ಸರಿಯಾಗಿ ಹಣ ಹಾಕುತ್ತಿದ್ದಾರೆಯೇ ಅಂತ ಕಾರ್ಕಳ ಬಿಜೆಪಿಯ ಮಹಿಳಾ ಮೋರ್ಚ ದ ಪದಾಧಿಕಾರಿಗಳು ಸದಸ್ಯರು ಮೊದಲು ನೋಡುವುದು ಒಳ್ಳೆಯದು. ಚುನಾವಣೆ ಸಮೀಪ ಇರುವಾಗ ಎಷ್ಟು ಹಣ ಬರುತ್ತದೆ ಚುನಾವಣೆ ಇಲ್ಲದಾಗ ಹಣ ಬರುತ್ತಿದೆಯಾ ಅಂತ ನೋಡಬೇಕಾದದ್ದು ನೀವುಗಳು ಅಲ್ಲದೆ ನೀವು ಕರ್ನಾಟಕದ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಭರವಸೆ ನೀಡಿದ ಗ್ಯಾರಂಟಿ ಯನ್ನು ಟೀಕಿಸಿ ಅದೇ ಬಾಯಿಯಲ್ಲಿ ನಂತರ ಇತರರ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಗ್ಯಾರಂಟಿಯನ್ನುಜಾರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟು ನಂತರ ಆ ಭರವಸೆಯನ್ನು ಏನು ಮಾಡಿದ್ದೀರಿ ಜನರಿಗೆ ಹೇಗೆ ಮೋಸ ಮಾಡಿದ್ದೀರಿ ಅಂತ ಸ್ವಲ್ಪ ಅರಿತುಕೊಂಡು ನಂತರ ನಮ್ಮ ಕರ್ನಾಟಕದಲ್ಲಿ ಯಶಸ್ವಿಯಾಗಿ ಜನರ ಜನಮನ ಗೆದ್ದ ಗೃಹಲಕ್ಷ್ಮಿ ಯೋಜನೆಯ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದರಿಂದ ಏನು ಪ್ರಯೋಜನವಿಲ್ಲ ಚುನಾವಣಾ ಸಮಯದಲ್ಲಿ ಜಾರಿ ಮಾಡಲು ಸಾಧ್ಯವೇ ಇಲ್ಲ ರಾಜ್ಯದಿವಾಳಿಯಾಗುತ್ತದೆ ಅಂತ ಮನೆ ಮನೆ ಪ್ರಚಾರ ಮಾಡಿದ ಇದೇ ಬಿಜೆಪಿಯವರು ಚುನಾವಣೆ ಮುಗಿದು ಕಾಂಗ್ರೆಸ್ ಸರಕಾರ ರಚಿಸಿ ಒಂದು ತಿಂಗಳು ಕೂಡ ಆಗದೆ ಇದ್ದರೂ ಕೂಡ ಗ್ಯಾರಂಟಿಯನ್ನು ಅನುಷ್ಠಾನಗೊಳಿಸಲು ಒತ್ತಾಯಿಸಿದರು. ಇವರು ಒತ್ತಾಯಿಸದೆ ಇದ್ದರೂ ಕೂಡ ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತ ವಾಗಿತ್ತು. ಗ್ಯಾರಂಟಿ ಜಾರಿಯಾದ ನಂತರ ಹಲವು ಸುಳ್ಳುಗಳು ಹೇಳುವ ಮತ್ತು ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತವಾಗಿದ್ದ ಬಿಜೆಪಿ ಈ ಬಾರಿ ಒಂದೆರಡು ತಿಂಗಳು ವಿಳಂಬವಾದ ಕಾರಣವನ್ನು ಇಟ್ಟುಕೊಂಡು ಸರಕಾರದ ಯೋಜನೆಗೆ ಕೆಟ್ಟ ಹೆಸರು ತರುವ ಕೆಲಸದಲ್ಲಿ ನಿರತವಾಗಿದೆ. 1/2 ತಿಂಗಳು ಹಣ ಬರದೇ ಇದ್ದರೆ ಮುಂದಿನ ತಿಂಗಳಲ್ಲಿ ಸರಕಾರ ನೇರವಾಗಿ ನಿಮ್ಮ ಖಾತೆಗೆ ಹಣ ಹಾಕುತ್ತೇವೆ ಅಂತ ಸಚಿವೆ ಹಲವು ಬಾರಿ ಸ್ಪಷ್ಟೀಕರಣ ನೀಡಿದರು ಈ ಬಾರಿ ಪುನಃ ಇಂತಹ ಕ್ಷುಲ್ಲಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯದ ಮಹಿಳೆಯರ ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ.

