

ಕುಂದಾಪುರ,ಡಿ.21; ಇಂದು ರವಿವಾರ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಪಂಚಾಯತ್ ಒಣ ತ್ಯಾಜ್ಯ ಕಟ್ಟಡದಲ್ಲಿದ್ದ ದಾಸ್ತಾನು ಮಾಡಿದ್ದ ಒಣ ತ್ಯಾಜ್ಯ ರಾಶಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಆಸುಪಾಸಿನ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿತ್ತು, ಪ್ಲಾಸ್ಟಿಕ್ ಕಸ ಸುಟ್ಟ ದುರ್ವಾಸನೆ ಮತ್ತು ಹೊಗೆ ಇಡೀ ಪೇಟೆಗೆ ಆವರಿಸಿದ್ದು, ವಾಹನಸವಾರರು, ಆಸುಪಾಸಿನವರಿಗೆ, ತಿರುಗಾಡದ ಸ್ಥಿತಿ ನಿರ್ಮಾಣವಾಗಿದ್ದರಿಂದ ಪಂಚಾಯತ್ ಬೇಜವಾಬ್ದಾರಿತನಕ್ಕೆ ಜನರು ಹಿಡಿ ಶಾಪ ಹಾಕಿದ್ದಾರೆ.
ಕಟ್ಟಡದ ಒಳಗೆ ಉರಿಯುತ್ತಿರುವ ಬೆಂಕಿಯ ಜ್ವಾಲೆ ಆವರಿಸದಂತೆ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ನಿರತರಾಗಿದ್ದಾರೆ. ಬೆಂಕಿ ಹೇಗೆ ಹೊತ್ತಿದ್ದು ಎಂದು ತಿಳಿದು ಬರಲಿಲ್ಲ, ಮುಂದಿನ ತನಿಖೆಯಿಂದ ತಿಳಿಯಬೇಕಾಗಿದೆ.






