✍️ವರದಿ :-ಈಶ್ವರ್ ಸಿ ನಾವುಂದ

ಭಕ್ತಾಭಿಮಾನಿಗಳ ಗಮನಕ್ಕೆ ,
ಕಟ್ಟು-ಸುಳ್ಸೆ ಗ್ರಾಮಸ್ಥರು ,ಪರ ಊರ ನಂಬಿದ ಭಕ್ತರು,
ದೈವಸ್ಥಾನದ ಮಹಾಪೋಷಕರು ಹಾಗೂ ಎಲ್ಲಾ ದಾನಿಗಳಲ್ಲಿ ಸವಿನಯ ವಿಜ್ಞಾಪನೆ……
ನೂತನ ಆಡಳಿತ ಮಂಡಳಿಯ ನಿರ್ಣಯದಂತೆ ಕ್ಷೇತ್ರ ಸಾನಿದ್ಯದ ಒಪ್ಪಿಗೆಯೊಂದಿಗೆ ದೈವಸ್ಥಾನದಲ್ಲಿ ಮುಂಬರುವ ಹೂವಿನ ಪೂಜೆಯ ಒಳಗಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
ದೈವಸ್ಥಾನದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದರೊಂದಿಗೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಹಲವಾರು ಅಗತ್ಯ ಕಾರ್ಯಗಳು ಆಗಬೇಕಾಗಿರುವುದರಿಂದ ತಾವೆಲ್ಲರೂ ನಮ್ಮೊಂದಿಗೆ ತನು ಮನ ಧನ ದೊಂದಿಗೆ ಸಹಕರಿಸಬೇಕೆಂದು ತಮ್ಮಲ್ಲಿ ವಿಜ್ಞಾಪಿಸುತ್ತೇವೆ.
ಅಭಿವೃದ್ಧಿ ಕಾರ್ಯಗಳ ವಿವರ………
1.ಶೌಚಾಲಯ ಮತ್ತು ಸ್ನಾನಗ್ರಹದ ನಿರ್ಮಾಣ
ಪುರುಷ ಮಹಿಳೆಯರಿಗೆ ಪ್ರತ್ಯೇಕ ವಿಭಾಗ.
2.ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವ ಸ್ಥಳದಲ್ಲಿ ಮೇಲ್ಚಾವಣಿಗೆ
ಶೀಟ್ ಅಳವಡಿಕೆ.
3.ತೆರವುಗೊಂಡಿರುವ ಕಾಂಪೌಂಡ್ ಗೋಡೆಯ ಪುನರ್ ನಿರ್ಮಾಣ ಹಾಗೂ ಗೇಟ್ ಅಳವಡಿಕೆ.
4.ಅಡುಗೆ ಮನೆಯ ನೆಲದ ಟೈಲ್ಸ್ ಬದಲಾವಣೆ ಹಾಗೂ ಸಣ್ಣ ಪ್ರಮಾಣದ ಮೇಲ್ಚಾವಣಿ ರಿಪೇರಿ ಕಾರ್ಯ.
5.ಶಾಶ್ವತ ಕೈ ತೊಳೆಯುವ ಘಟಕದ ನಿರ್ಮಾಣ.
ಹಾಗೂ ಇನ್ನಿತರ ಸಣ್ಣ ಪ್ರಮಾಣದ ರಿಪೇರಿ ಕಾರ್ಯಗಳು.
ಈ ಮೇಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗಾಗಿ ಅಂದಾಜು ಐದು ಲಕ್ಷ ವೆಚ್ಚವಾಗಲಿದ್ದು ತಾವೆಲ್ಲರೂ ಹಿಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ನೀಡಿದ ಸಹಕಾರದ ಮಾದರಿಯಲ್ಲಿ ಕೈಜೋಡಿಸಬೇಕೆಂದು ಆಡಳಿತ ಮಂಡಳಿಯ ವಿನಮ್ರ ಮನವಿ.
ವಿಶೇಷ ಸೂಚನೆ-
ಶೌಚಾಲಯದ ಸಂಪೂರ್ಣ ಕಾಮಗಾರಿಯನ್ನು ಕೊಡುಗೆಯಾಗಿ ನೀಡುವ ಮಹಾದಾನಿಗಳು ಇದ್ದಲ್ಲಿ ಅವರ ಹೆಸರಿನೊಂದಿಗೆ ಕ್ಷೇತ್ರ ಸಾನಿಧ್ಯಕ್ಕೆ ಕೊಡುಗೆಯನ್ನ ನೀಡಬಹುದು.
ಹಾಗೂ ಕಾಮಗಾರಿಗಳನ್ನು ಪೂರ್ಣವಾಗಿ ನಿರ್ವಹಿಸಲು ದಾನಿಗಳು ಲಭ್ಯರಿರದಿದ್ದಲ್ಲಿ ಕಟ್ಟಡ ಕಾಮಗಾರಿಗಳಿಗೆ ಬೇಕಾಗುವ ಕಲ್ಲು, ಸಿಮೆಂಟ್, ಮರಳು,ಕಬ್ಬಿಣ ಬಣ್ಣದ ವ್ಯವಸ್ಥೆ,ಟೈಲ್ಸ್, ಸಿಂಟೆಕ್ಸ್ ,ಪೈಪ್ ಲೈನ್ ವ್ಯವಸ್ಥೆ ,ವಿದ್ಯುತ್ ವ್ಯವಸ್ಥೆ ಕಮೋಡ್ಗಳು ಮುಂತಾದವಕ್ಕೆ ವೈಯಕ್ತಿಕವಾಗಿ ಧನ ಸಹಾಯವನ್ನು ಮಾಡಬಹುದು.
ಶ್ರೀ ಕುಪ್ಪಣ್ಣ ಹೈಗುಳಿ ಜಟ್ಟಿಗ ಮತ್ತು ಸಪರಿವಾರ ದೈವಸ್ಥಾನದ ಭಕ್ತರಿಗಾಗಿ ಮಾಡಲ್ಪಡುವ ಈ ಎಲ್ಲಾ ನವೀಕರಣ ಕಾರ್ಯದ ಮಹತ್ತರ ಸೇವೆಗೆ ತಾವು ನಮ್ಮೊಂದಿಗೆ ಕೈಜೋಡಿಸಿ ನಮ್ಮ ದೇವಸ್ಥಾನವನ್ನು ಇನ್ನಷ್ಟು ಸುಂದರಗೊಳಿಸಲು ತನು ಮನ ಧನದ ಸೇವೆಯನ್ನು ಒದಗಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
ಈಗಾಗಲೇ ದೈವಸ್ಥಾನದ ಹೆಸರಿನಲ್ಲಿ ಕೆನರಾ ಬ್ಯಾಂಕ್ ಹೆಮ್ಮಾಡಿ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದ್ದು ನಗದು ರೂಪದಲ್ಲಿ ಸಹಾಯ ಮಾಡುವವರು ಶ್ರೀ ಕ್ಷೇತ್ರದ ಖಾತೆಗೆ ಜಮಾ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ನಗದು ಜಮಾ ಮಾಡಿದ ಗ್ರಾಮಸ್ಥರು ಹಣ ಪಾವತಿಯಾದ ಸ್ಕ್ರೀನ್ ಸೇವರ್ ನೊಂದಿಗೆ ದೈವಸ್ಥಾನದ ಕಾರ್ಯದರ್ಶಿಯವರ ಮೊಬೈಲ್ ಸಂಖ್ಯೆಗೆ ತಮ್ಮ ಹೆಸರು ಹಾಗೂ ಸಂಪರ್ಕ ಸಂಖ್ಯೆಯನ್ನು ವಿಳಾಸ ಸಹಿತವಾಗಿ ನೀಡುವುದು.
ನಗದು ವ್ಯವಹಾರದ ಪಾರದರ್ಶಕತೆಯನ್ನು ನಿರ್ವಹಿಸಲು ಇದು ಅತ್ಯಗತ್ಯ.
ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ……..
ಹೆಚ್ಚಿನ ಮಾಹಿತಿಗಾಗಿ…..
ಶ್ರೀ ಸುಧಾಕರ.ಎನ್. ದೇವಾಡಿಗ.
ಅಧ್ಯಕ್ಷರು.
Mob-7259638286.
ಆಡಳಿತ ಮಂಡಳಿ
ಶ್ರೀ ಕುಪ್ಪಣ್ಣ ಹೈಗುಳಿ ಜಟ್ಟಿಗ ಮತ್ತು ಸಪರಿವಾರ ದೈವಸ್ಥಾನ ಕಟ್ಟು-ಸುಳ್ಸೆ.
ವಿಶ್ವನಾಥ.
ಕಾರ್ಯದರ್ಶಿಗಳು.
7760417157.
( ಸ್ಕ್ರೀನ್ ಸೇವರ್ ಈ ಮೇಲಿನ ನಂಬರಿಗೆ ಕಳುಹಿಸಿ).




