

ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮಾ.ಯುವರಾಜ್ ಡಿ. ಕುಂದರ್ ಇವರು ಸೆ.16 ರಿಂದ 19 ರವರೆಗೆ
ಪುದುಚೇರಿಯಲ್ಲಿ ಜರಗಿದ ದಕ್ಷಿಣ ವಲಯ ಜ್ಯೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಯ ಟ್ರಯಥ್ಲಾನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.
ಯುವರಾಜ್ ಅವರ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ. ಅಲ್ಮೇಡಾ ಎಸ್. ಜೆ ಶಿಕ್ಷಕ ವೃಂದ ಹಾಗೂ ಸಹಪಾಠಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಸಾಧಿಸಿ ಸಂಸ್ಥೆಗೆ, ಹೆತ್ತವರಿಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತರಲಿ ಎಂದು ಹಾರೈಸಿದ್ದಾರೆ.
Yuvaraj D. Kunder of St Aloysius Gonzaga School Wins Silver at South Zone Junior Athletics Championship
Mangaluru: Yuvaraj D. Kunder, a Class IX student of St Aloysius Gonzaga School, Mangaluru, won the silver medal in Triathlon B at the South Zone Junior Athletics Championship 2026, held in Puducherry from September 16 to 19.
His achievement brought pride to the school and reflects his dedication, perseverance and sporting talent. The school congratulated Yuvaraj on his commendable performance and wished him continued success in his sporting endeavours.

