

ಮಂಗಳೂರು ಧರ್ಮಕ್ಷೇತ್ರದ ಮಂಗಳೂರು ದಕ್ಷಿಣ ಸಂತ ಜೋಸೆಫ್ ವಾಜ್ ವಲಯಕ್ಕೆ ನೂತನ ಕಾರ್ಯದರ್ಶಿ ಹಾಗೂ ಇಬ್ಬರು ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ತಾ. 03/03/2026 ರಂದು ಮಂಗಳವಾರ ಸಂಜೆ 5.30 ಗಂಟೆಗೆ ಪರ್ಮನ್ನೂರ್ ಚರ್ಚ್ ಸಭಾಂಗಣದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು.
ಚುನಾವಣೆಯಲ್ಲಿ ವಲಯದ ಕಾರ್ಯದರ್ಶಿ ಮತ್ತು ಇಬ್ಬರು ಪ್ರಮುಖ ಪ್ರತಿನಿಧಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನೂತನ ಪದಾಧಿಕಾರಿಗಳ ವಿವರ:
ಕಾರ್ಯದರ್ಶಿ: ರೋಷನ್ ಡಿ ಸೋಜ (ಮುಡಿಪು ಚರ್ಚ್ ಕಾರ್ಯದರ್ಶಿ)
ಪ್ರತಿನಿಧಿ 1: ಅಲ್ವಿನ್ ಡಿ ಸೋಜ (ಆಯೋಗದ ಸಂಯೋಜಕರು, ಪಾನೀರ್ ಚರ್ಚ್)
ಪ್ರತಿನಿಧಿ 2: ಜ್ಯೋತಿ ಡಿಸೋಜ (ಕಾರ್ಯದರ್ಶಿ, ಪರ್ಮನ್ನೂರ್ ಚರ್ಚ್)
ಚುನಾವಣಾ ಪ್ರಕ್ರಿಯೆಯನ್ನು ಮಂಗಳೂರು ದಕ್ಷಿಣ ವಲಯದ ಶ್ರೇಷ್ಠ ಗುರು ವಂ. ಫಾ. ಸಿಪ್ರಿಯನ್ ಪಿಂಟೋ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವಂ. ಫಾ. ವಿಕ್ಟರ್ ಡಿಮೆಲ್ಲೋ (ಪಾನೀರ್ ಚರ್ಚ್), ವಂ. ಫಾ. ಅಸಿಸ್ಸಿ ರೆಬೆಲ್ಲೋ (ಮುಡಿಪು ಚರ್ಚ್), ವಂ. ಫಾ. ಜಯಪ್ರಕಾಶ್ ಡಿ ಸೋಜ (ರಾಣಿಪುರ ಚರ್ಚ್), ವಂ. ಫಾ. ಜೋಸೆಫ್ ಮಸ್ಕರೇನ್ಹಸ್ (ಫಜೀರ್ ಚರ್ಚ್), ವಂ. ಫಾ. ಮೈಕಲ್ ಡಿ ಸೋಜ (ಅಮ್ಮೆಂಬಳ ಚರ್ಚ್), ವಂ. ಫಾ. ಪೀಟರ್ ಡಿಸೋಜಾ (ಬೋಳಾ ಚರ್ಚ್), ವಂ. ಫಾ. ಅಂಟ್ಯನಿ ಲಸ್ರಾದೋ (ನಿತ್ಯಾದರ್ ಚರ್ಚ್) ಹಾಗೂ ವಂ. ಫಾ. ಜೋನ್ ಡಿ ಸೋಜ (ಎಲ್ಯಾರ್ ಪದವು ಚರ್ಚ್) ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.
ವಲಯದ ವ್ಯಾಪ್ತಿ:
ಮಂಗಳೂರು ದಕ್ಷಿಣ ಸಂತ ಜೋಸೆಫ್ ವಾಜ್ ವಲಯವು ಒಟ್ಟು 10 ಚರ್ಚ್ಗಳನ್ನು ಒಳಗೊಂಡಿದ್ದು, ಅವುಗಳೆಂದರೆ – ಪರ್ಮನ್ನೂರ್, ಪಾನೀರ್, ನಿತ್ಯಾದರ್, ರಾಣಿಪುರ, ಎಲ್ಯಾರ್ ಪದವು, ಫಜೀರ್, ಮುಡಿಪು, ಅಮ್ಮೆಂಬಳ, ಬೋಳಾ ಹಾಗೂ ವಿಜಯಡ್ಕ.



