

ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT), ‘ಸಾವಿಷ್ಕಾರ್ 2026’ ಎಂಬ ಭವ್ಯ ರಾಷ್ಟ್ರೀಯ ಮಟ್ಟದ ಅಂತರಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವವು ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ “ಬ್ಯಾಂಡ್ ಸ್ಟ್ರಿಂಗ್ಸ್” (Band Strings) ತಂಡದ ಸಂಗೀತ ರಸಮಂಜರಿ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಈ ಸಂಗೀತ ಸಂಜೆಯಲ್ಲಿ ಪ್ರಸಿದ್ಧ ಗಾಯಕರಾದ ಜಸ್ ಕರಣ್ ಸಿಂಗ್, ಸಂದೇಶ್, ಪಲ್ಲವಿ, ರಾಜಗೋಪಾಲ್, ಗಣೇಶ್ ಕಾರಂತ್ ಮತ್ತು ಶಮಾ ಅವರು ತಮ್ಮ ಸುಮಧುರ ಧ್ವನಿಯ ಮೂಲಕ ಕಾರ್ಯಕ್ರಮಕ್ಕೆ ಕಳೆ ನೀಡಿದರು.
ತಾಂತ್ರಿಕ ಕೌಶಲ್ಯಗಳ ಜೊತೆಗೆ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ಪ್ರೋತ್ಸಾಹಿಸಲು ಈ ವೇದಿಕೆಯು ಸಹಕಾರಿಯಾಯಿತು.
ಈ ಎರಡು ದಿನಗಳ ಕಾಲ ನಡೆದ ಉತ್ಸವವು ಸಂಗೀತ, ಕಲೆ ಮತ್ತು ತಾಂತ್ರಿಕತೆಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಸಂಭ್ರಮಿಸಿದರು.

