

ಕೋಲಾರ:- ಲಯನ್ಸ್ ಕ್ಲಬ್ ಕೋಲಾರ, ಶ್ರೀಸಾಯಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ಲಿ. ಆಶ್ರಯದಲ್ಲಿ ಬೇಸಿಗೆಯ ತಾಪಮಾನದಿಂದ ಕಂಗೆಟ್ಟ ಜನತೆಗೆ ಉಚಿತ ಮಜ್ಜಿಗೆ,ಪಾನಕ ವಿತರಣೆ ಕಾರ್ಯಕ್ರಮಕ್ಕೆ ನಗರದ ಅಂತರಗಂಗೆ ರಸ್ತೆಯ ಲಯನ್ಸ್ ಕ್ಲಬ್ ಮುಂಭಾಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಚಾಲನೆ ನೀಡಿದರು.
ಮಜ್ಜಿಗೆ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಲಯನ್ಸ್ ಕ್ಲಬ್ ಹಾಗೂ ಅದರ ಸದಸ್ಯರು,ಪದಾಧಿಕಾರಿಗಳ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು ಎಂದು ತಿಳಿಸಿ, ಬಿಸಿಲಿನ ಬೇಗೆಯಿಂದ ನೊಂದ ಪಾದಾಚಾರಿಗಳ ದಾಹ ತೀರಿಸುವ ಮಹತ್ಕಾರ್ಯಕ್ಕೆ ಧನ್ಯವಾದ ಎಂದರು.
ಮಳೆ ಬಾರದ ಹಿನ್ನಲೆಯಲ್ಲಿ ತಾಪಮಾನ ಹೆಚ್ಚುತ್ತಿದೆ, ಜನತೆ ಬೀದಿಗೆ ಬರಲು ಹೆದರುವಂತಾಗಿದೆ ಎಂದ ಅವರು, ಇಂತಹ ಸಂದರ್ಭದಲ್ಲಿ ದಾಹ ತಣಿಸುವ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು ಎಂದು ತಿಳಿಸಿ, ಇಂತಹ ಕಾರ್ಯಗಳಿಗೆ ಜನರ ಸಹಕಾರವೂ ಅಗತ್ಯ ಎಂದರು.
ನಗರದಲ್ಲಿ 37 ಡಿಗ್ರಿವರೆಗೂ ಉಷ್ಣಾಂಶ ದಾಖಲಾಗುತ್ತಿದೆ, ಓಡಾಡುತ್ತಿದ್ದರೂ ಬಿಸಿ ಗಾಳಿ ಕಾಡುತ್ತಿದೆ, ವಾಹನಗಳಲ್ಲಿ ಸಂಚರಿಸುವುದೇ ಕಷ್ಟವಾಗಿರುವಾಗ ನಡೆದು ಸಾಗುವ ಮಂದಿಯ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಇಂತಹ ಪಾದಚಾರಿಗಳ ನೆರವಿಗೆ ಬಂದಿರುವ ಲಯನ್ಸ್ ಕ್ಲಬ್ ಪದಾಧಿಕಾರಿಗಳು ದಾಹ ತೀರಿಸುವ ಅತ್ಯಂತ ಪುಣ್ಯದ ಕೆಲಸ ಮಾಡಿದ್ದಾರೆ ಎಂದರು.
ನಗರಸಭೆ ಮಾಜಿ ಸದಸ್ಯ ಸಲಾಲುದ್ದೀನ್ ಬಾಬು ಮಾತನಾಡಿ, ಲಯನ್ಸ್ ಕ್ಲಬ್ ಆಶ್ರಯದಲ್ಲಿ ಇಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದು, ಇದೀಗ ಕುಡಿಯಲು ನೀರು,ಮಜ್ಜಿಗೆ ಒದಗಿಸುವ ಪ್ರಯತ್ನ ನಡೆಸಿದ್ದಾರೆ, ಇಂತಹ ಸಾಮಾಜಿಕ ಕಾಳಜಿ ಇತರ ಸಂಸ್ಥೆಗಳಿಗೂ ಆದರ್ಶವಾಗಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರಭಾ ಆನೂರ್ ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ತಾಪಮಾನ ಹೆಚ್ಚಳದಿಂದಾಗಿ ಜನ ಅನುಭವಿಸುತ್ತಿರುವ ಸಂಕಷ್ಟ ನೋಡಿದ್ದೇವೆ ಆದ್ದರಿಂದ ಮೇ.4 ರಿಂದ ಮೇ.31 ರವರೆಗೂ ಈ ಮಾರ್ಗದಲ್ಲಿ ಸಂಚರಿಸುವ ಜನರಿಗೆ ಉಚಿತ ಮಜ್ಜಿಗೆ, ಪಾನಕ ವಿತರಿಸಲು ಕ್ರಮವಹಿಸಿದ್ದೇವೆ ಲಯನ್ಸ್ ಕ್ಲಬ್ ಮುಂಭಾಗವೇ ದಿನಕ್ಕೆ 250 ಮಂದಿಯAತೆ ಸರಾಸರಿ 28 ದಿನಕ್ಕೆ 7 ಸಾವಿರ ಮಂದಿಗೆ ಉಚಿತ ಮಜ್ಜಿಗೆ ವಿತರಿಸುತ್ತಿದ್ದೇವೆ ಎಂದರು.
ಈ ಮಹತ್ಕಾರ್ಯಕ್ಕೆ ಲಯನ್ಸ್ ಕ್ಲಬ್ನ ಸದಸ್ಯರು ಸಹಕಾರ ನೀಡಿದ್ದು, 30 ಸಾವಿರ ರೂಗಳನ್ನು ಮಜ್ಜಿಗೆ ವಿತರಣೆಗೆ ಖರ್ಚು ತಗುಲುವ ಅಂದಾಜು ಇದೆ ಎಂದು ತಿಳಿಸಿದರು.
ಇದರ ಜತೆಗೆ ಜನತೆಗೆ ಕುಡಿಯುವ ನೀರು, ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸುವ ಕಾರ್ಯವನ್ನು ಆರಂಭಿಸುತ್ತಿದ್ದು, ಲಯನ್ಸ್ ಕ್ಲಬ್ ತನ್ನ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಲಿದೆ ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಸುನಿತಾ, ಖಜಾಂಚಿ ಮಂಜುಳಾ ಅನಂತಪ್ಪ, ಲಯನ್ಸ್ ಕ್ಲಬ್ ಸದಸ್ಯರಾದ ಲಕ್ಷ್ಮಿನಾರಾಯಣ, ಬಿಂದು ವೆಂಕಟೇಶ್, ಅನಂತಪ್ಪ, ಅಚೈಯ ವರವೀಂದ್ರ, ಪಾರ್ಥಸಾರಥಿ, ಬಿ.ಎಲ್.ವೆಂಕಟೇಟ್, ಮಂಜುನಾಥ್, ಸಿ.ವಿ.ವಿಷ್ಣು ಹಾಗೂ ಸಾಯಿ ಸೌಹಾರ್ದ ಸೊಸೈಟಿಯ ಸದಸ್ಯರು ಹಾಜರಿದ್ದರು.

