

ಶ್ರೀನಿವಾಸಪುರ : ಅತಿಸಣ್ಣ, ಸಣ್ಣ ಕುಟುಂಬಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಂಪುಕೋಟೆಯಲ್ಲಿ ನಡೆದ ಸಭೆಯಲ್ಲಿ ದೇಶದ ಜನತೆಗೆ ಈ ಬಾರಿ ದಸರಾ ಹಬ್ಬಕ್ಕೆ ಒಳ್ಳೇಯ ಸುದ್ದಿಯನ್ನು ಕೊಡುತ್ತೇನೆ ಎಂದು ಹೇಳಿದ್ದರು ಅವರ ಮಾತಿನಂತೆ ನಡೆದುಕೊಂಡಿದ್ದು, ಅದರಂತೆ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಸುಂಕವನ್ನು ಇಳಿಸಿರುವುದು ಸ್ವಾಗತರ್ಹ ಎಂದು ಸಂಸದ ಮಲ್ಲೇಶ್ಬಾಬು ಬಣ್ಣಿಸಿದರು.
ಪಟ್ಟಣದಲ್ಲಿನ ಮುಳಬಾಗಿಲು ವೃತ್ತದಿಂದ ಕೆಎಸ್ಆರ್ಟಿ ಬಸ್ಸ್ ನಿಲ್ದಾಣದವರೆಗೂ ಮಂಗಳವಾರ ಬಿಜೆಪಿ , ಜೆಡಿಎಸ್ ಪಕ್ಷಗಳ ಮೈತ್ರಕೂಟದಿಂದ ಹಮ್ಮಿಕೊಳ್ಳಲಾದ ಉಳಿತಾಯ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೆ.22 ರಂದು ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಸುಂಕವನ್ನು ಕಡಿಮೆ ಮಾಡುವುದರ ವಿರೋಧ ಪಕ್ಷದವರಿಗೆ ತಕ್ಕ ಉತ್ತರವನ್ನ ನೀಡಿದ್ದಾರೆಂದರು. ಎಲ್ಲಾ ದಿನಸಿ ಪದಾರ್ಥಗಳಿಗೆ ಜಿಎಸ್ಟಿ 5 % ಒಳಗೆ ಬಂದಿದೆ. ಹಾಗು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳಿಗೆ , ಆರೋಗ್ಯ ವಿಮೆಗಳ ಮೇಲೆ ಜಿಎಸ್ಟಿಯಿಂದ ತೆಗೆದು ಹಾಕಿದ್ದಾರೆ, ರೈತರು ಬಳಸುವ ಡ್ರಿಪ್ ಇರಿಗೇಷನ್ ಪರಿಕರಗಳಿಗೆ 5%, ಟ್ರ್ಯಾಕ್ಟರ್ ಬಡಿಭಾಗಳಿಗೆ , ಸಿಮೆಂಟ್, ಇಟ್ಟಿಗೆಳಿಗೂ ಕಡಿಮೆ ಮಾಡಿದ್ದಾರೆ. ಹಾಲು ಮೊಸರು ಹೊರತುಪಡಿಸಿ ಇತರೆ ಡೇರಿ ಪದಾರ್ಥಗಳ ಮೇಲೂ ಜಿಎಸ್ಟಿ ಕಡಿಮೆ ಮಾಡಿದ್ದಾರೆ.
ಬಿಜೆಪಿ ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿgವರು ಮುಂದಿನ ದಿನಗಳಲ್ಲಿ ಜಿಎಸ್ಟಿಯಲ್ಲಿ ಸುಧಾರಣೆ ತರಲಾಗುವುದು ಎಂದಿದ್ದರು. ಅದರಂತೆ 365 ಅಗತ್ಯವಸ್ತುಗಳ ಮೇಲೆ ಜಿಎಸ್ಟಿ ಸುಂಕವನ್ನು 18% ನಿಂದ 5% ಇಳಿಸಿದ್ದಾರೆ.25% ಜಿಎಸ್ಟಿ ಇದ್ದ ಪದಾರ್ಧಗಳಿಗೆ 18 % ಗೆ ಇಳಿಸಿದ್ದಾರೆ. ಎಲ್ಐಸಿ ವಿಮೆಗೂ ಜಿಎಸ್ಟಿ ತೆಗದುಹಾಕಿರುವುದು ಸ್ವಾಗತರ್ಹ ಎಂದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್ ನಾರಾಯಣಸ್ವಾಮಿ ಮಾತನಾಡಿ ಕೇಂದ್ರ ಸರ್ಕಾರ ಜಿಎಸ್ಟಿ ಬದಲಾವಣೆ ತಂದಿರುವುದು ಸ್ವಾಗತರ್ಹ ಎಂದರು.
ಕೇಂದ್ರ ಸರ್ಕಾರ ಜಿಎಸ್ಟಿ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಸಿಹಿಹಂಚಿ ಸಂಭ್ರಮಾಚರಣೆಯನ್ನ ಹಮ್ಮಿಕೊಳ್ಳಲಾಯಿತು. ತಾ.ಪಂ.ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಆರ್.ಎನ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಶೆಟ್ಟಿಹಳ್ಳಿ ನಾಗಭೂಷಣ್, ಮುಖಂಡರಾದ ಲಕ್ಷ್ಮಣಗೌಡ, ಚಂದ್ರಶೇಖರ್, ನಾಗರಾಜ್, ನಾರಾಯಣಸ್ವಾಮಿ, ನಾಗೇಶ್, ಶಿವಪ್ರಕಾಶ್, ಶಿವಾರೆಡ್ಡಿ, ಅಂಬರೀಶ್, ಶೇಕ್ಶಫಿ ಹಾಗು ಕಾರ್ಯಕರ್ತರು ಇದ್ದರು.


