

ಶ್ರೀನಿವಾಸಪುರ : ನಾವು ಆರಾಧಿಸುವ ಪೂಜಿಸುವ ಪರಮಾತ್ಮನಿಗೆ ಅರ್ಪಿಸುವ ವಸ್ತುವಿನಲ್ಲಿ ಅಥವಾ ಪದಾರ್ಥಗಳಲ್ಲಿ ಪರಮಾತ್ಮನ ವಿಶೇವ ಶಕ್ತಿ ಇದೆಯೆಂದರಿತು ಅಂತಹ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಗೌರವಭಾವದಿಂದ ಕಾಣಬೇಕು ಎಂದು ಬಿಲಿಜ ಸಮುದಾಯದ ತಾಲೂಕು ಅಧ್ಯಕ್ಷ ಬಿ.ಎಂ.ರಾಮಚಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಬಲಿಜ ಸಮುದಾಯದವತಿಯಿಂದ ಕೈವಾರದಲ್ಲಿ ನಡೆಯುವ ಗುರು ಪೂರ್ಣಿಮ ಕಾರ್ಯಕ್ರಮಗಳ ಅಂಗವಾಗಿ ನಡೆದ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್ ಮಾತನಾಡಿ ಗುರುವಿನ ಸೇವೆಗಾಗಿ ಎಲ್ಲಾ ಸಮುದಾಯದವರು ತನು, ಮನ,ಧನ ನೀಡಬಹುದು. ವಿಶೇಷವಾಗಿ ಮೂರು ದಿನಗಳ ನಡೆಯುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಾಗವಹಿಸಲಿದ್ದು ಭಕ್ತರಿಗೆ ಅನ್ನಸಂರ್ತಪಣೆ ಇದ್ದು, ಗುರುವಿನ ಸೇವೆಗೆ ನೀಡುವ ಅಕ್ಕಿ ಹಾಗು ಇತರೆ ಪದಾರ್ಥಗಳನ್ನು ಮುಳಬಾಗಿಲು ವೃತ್ತದ ಬಳಿ ಜೆಸಿಬಿ ಮಂಜು ರವರ ಅಂಗಡಿ ಬಳಿ ಭಾನುವಾರ ಮಧ್ಯಾಹ್ನದ ಒಳಗೆ ಸೇರಿಸಬೇಕು ಎಂದು ಮನವಿ ಮಾಡಿದರು. ಜೆಸಿಬಿ ಮಂಜು ಮೊ.ಸಂ. 9448664420
ಸಮುದಾಯದ ಮುಖಂಡರಾದ ಎಲ್.ವಿ.ಗೋವಿಂದಪ್ಪ, ಶ್ರೀನಿವಾಸ್, ಕೆ.ವಿ.ಸುರೇಂದ್ರ, ಹೇಮಂತ್, ಶ್ರೀನಾಥ್, ಪ್ರಸಾದ್, ನರೇಶ್, ಹೊಗಳಗೆರೆ ಹರಿ, ಕಾರ್ರವಿ, ಗೋವಿಂದಪ್ಪ, ಜೆಸಿಬಿ ಮಂಜು ಇದ್ದರು.

