

ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಹೊಗಳಗೆರೆ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ 2025-26ನೇ ಸಾಲಿಗೆ 2 ವರ್ಷದ ತೋಟಗಾರಿಕೆ ಡಿಪ್ಲೊಮಾ ಕೋರ್ಸ್ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಕೋರ್ಸ್ ತೋಟಗಾರಿಕೆ ಕ್ಷೇತ್ರದಲ್ಲಿ ಪರಿಣತಿ ಗಳಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದ್ದು, ಉದ್ಯೋಗ ಮತ್ತು ಸ್ವಾವಲಂಬನೆಯ ದೃಷ್ಟಿಯಿಂದ ಕೂಡ ಲಾಭಕಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 15, 2025
ಹೆಚ್ಚಿನ ಮಾಹಿತಿಗಾಗಿ ಹೀಗಿರುವವರನ್ನು ಸಂಪರ್ಕಿಸಬಹುದು:
ಡಾ. ಬಿ. ಆಂಜನೇಯರೆಡ್ಡಿ: 98441 88834
ಡಾ. ಜಗದೀಶ್ (ಸಹಾಯಕ ಪ್ರಾಧ್ಯಾಪಕ): 99005 31453

