

ಮಂಗಳೂರು; ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೌತಮ್ ಕಟ್ಟರ್ ಎಂಬುವವರು ಸಂತ ಫ್ರಾನ್ಸಿಸ್ ಕ್ಷೇವಿಯರ್ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯು ಸಮಸ್ತ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅಖಿಲ ಭಾರತ ಕ್ರೈಸ್ತ ಒಕ್ಕೂಟ(AICU) ಕರ್ನಾಟಕ ರಾಜಾಧ್ಯಕ್ಷ ಅಲ್ವಿನ್ ಡಿಸೋಜ ತೀವ್ರ ಖಂಡನೆ ವ್ಯಕ್ತ ಪಡಿಸಿದ್ದಾರೆ.

ಏಪ್ರಿಲ್ 2026 ರಲ್ಲಿ ಗೋವಾದ ವಾಸ್ಕೋದಲ್ಲಿ ನಡೆದ ಭಗವಾನ್ ಪರಶುರಾಮ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೌತಮ್ ಕಟ್ಟರ್, ಗೋವಾಚೊ ಸಾಯ್ಭ್ (Lord of Goa) ಎಂದೇ ಗೌರವಿಸಲ್ಪಡುವ ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರನ್ನು ‘ಉಗ್ರಗಾಮಿ’ ಎಂದು ಕರೆದಿದ್ದರು ಎನ್ನಲಾಗಿದೆ. ಈ ಹೇಳಿಕೆಯು ಗೋವಾ ಸೇರಿದಂತೆ ದೇಶದ ವಿವಿಧೆಡೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ “ಭಾರತ ಮತ್ತು ಜಪಾನ್ ಸೇರಿದಂತೆ ಸುಮಾರು 50 ರಾಷ್ಟ್ರ ಗಳಲ್ಲಿ ಶಾಂತಿ ಮತ್ತು ಧರ್ಮ ಪ್ರಚಾರ ಮಾಡಿದ ಮಹಾನ್ ಮಿಷನರಿ ಸಂತ ಫ್ರಾನ್ಸಿಸ್ ಕ್ಷೇವಿಯರ್. ಅವರನ್ನು ಅವಮಾನಿಸುವುದು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂಚಾಗಿದೆ. ಇಂತಹ ಹೇಳಿಕೆಗಳು ಕ್ರೈಸ್ತ ಸಮುದಾಯಕ್ಕೆ ಅತೀವ ದುಃಖವನ್ನು ತಂದಿವೆ,” ಎಂದು ಕಿಡಿಕಾರಿದ್ದಾರೆ.1506 ಏಪ್ರಿಲ್ 7 ರಂದು ಡೊನ್ ಜುವಾವ್ ದೆ ಜೆಸೊ ಮತ್ತು ಮರಿಯಾ ದೆ ಅಲ್ಪಿಲ್ ಕ್ವೆತಾ ದಂಪತಿಗಳಿಗೆ ಪ್ರಾನ್ಸಿಸ್ ಪುತ್ರನಾಗಿ ಜನಿಸಿದರು. ತಾನೊಬ್ಬ ಶ್ರೇಷ್ಠ ತತ್ವಶಾಸ್ತ್ರಜ್ಣ್ಯ ಹಾಗೂ ಪವಿತ್ರ ಸಭೆಯಲ್ಲಿ ಉನ್ನತ ಹುದ್ದೆಗಳಿಸುವ ಅಕಾಂಕ್ಷಿಯಾಗಿದ್ದರು. ಸಂತ ಇಗ್ನೇಷಿಯಸ್ ಲೋಯೆಲಾರವರ ಬೋಧನೆಯಿಂದ ಜಗವ ಜಯಿಸಿ ಆತ್ಮವ ಕಳೆದರೆ ಏನು ಫಲ ಎಂಬ ಪವಿತ್ರ ಪುಸ್ತಕದ ಮಾತಿಗೆ ಪ್ರೇರಣೆಯಾದರು.
1542 ಮೇ 6 ರಂದು ಭಾರತದ ಪೋರ್ಚುಗೀಸ್ ವ್ಯಾಪಾರ ಕೇಂದ್ರ ಗೋವಾಕ್ಕೆ ಬಂದು ಇಳಿದು ಅಲ್ಲಿಯ ಭಾಷೆ ಕಲಿತು, ರೋಗಿಗಳ ದೀನ ದಲಿತರ ಬಡವರ ನಿರಾಶಿತರ, ನಿರ್ಗತಿಕರ, ಸೇವೆ ಸಲ್ಲಿಸಿ ಅವರ ಪ್ರೀತಿ, ವಿಶ್ವಾಸ, ಪ್ರಶಂಸೆಗೆ ಪಾತ್ರರಾದರು.
ಕ್ಯಾಂಟಾನಾನಿನ ಸಾಂನ್ಸಿಯಾದಲ್ಲಿ 1552 ಡಿಸೆಂಬರ್ 3 ರಂದು ಘೋರ ಜ್ವರಕ್ಕೆ ಬಲಿಯಾಗಿ ನಿಧನರಾದರು. ಅವರ ಪಾರ್ಥೀವ ಶಾರೀರವು ದಪನ ಮಾಡಿ ಎರಡು ತಿಂಗಳಾದರೂ ಕೊಳೆಯದೆ ಹಾಗೆಯೇ ಇದ್ದ ಕಾರಣ 1553 ರಲ್ಲಿ ಗೋವಾಕ್ಕೆ ತಂದು ತದ ನಂತರ ಗೋವಾದ ಬೊಮ್ ಜೀಸಸ್ ಬಾಸಲಿಕಾದಲ್ಲಿ ಇರಿಸಲಾಗಿದೆ. ಫಾ.ಫ್ರಾನ್ಸಿಸ್ ರವರ ಶರೀರ ಕೊಳೆಯದೇ ಇದ್ದ ಕಾರಣ ಅಂದಿನ ಜೆಜ್ವಿತ್ ಮೇಳದ ಶ್ರೇಷ್ಠ ಗುರು ಕ್ಲೊಡಿಯಾ ಅಕ್ವಾವಿಯಾ ಇವರ ಆದೇಶದ ಮೇರೆಗೆ ಅವರ ಬಲ ಕೈಯನ್ನು ಕತ್ತರಿಸಿ ರೋಮ್ ದೇಶಕ್ಕೆ ಕೊಂಡು ಹೋಗಿ ಜೀಸಸ್ ಚರ್ಚಿನಲ್ಲಿ ಗೌರವದಿಂದ ಇಡಲಾಗಿದೆ. ಇದು ಕೊಳೆಯದೇ ಇರುವುದೇ ಒಂದು ಅದ್ಭುತ ಪವಾಡ.
1622 ಮಾರ್ಚ್ 12 ರಂದು ಜಗದ್ಗುರು ಪೋಪ್ ಗ್ರೆಗರಿ 15 ಇವರು ಫಾ.ಪ್ರಾನ್ಸಿಸರನ್ನು ಸಂತ ಪದವಿಗೇರಿಸಿ ಸಂತರೆಂದು ಘೋಷಿಸಿದರು.
447 ವರ್ಷಗಳಿಂದ ಈ ಮಹಾನ್ ಸಂತರ ಶರೀರವು ಕೊಳೆಯದೇ ಇರುವುದು ಒಂದು ಅದ್ಭುತ ಪವಾಡವಾಗಿದೆ. ಪ್ರಪಂಚದಲ್ಲಿ ಭಾರತದ ಆಪೋಸ್ತಲ್ ಎಂದು ಕರೆಯಲ್ಪಟ್ಟ ಇವರನ್ನು ಗೋವಾದ ಜನರು ಗೊಂಯ್ಚೊ ಸಾಯ್ಭ್ (Lord of Goa) ಎಂದು ಕರೆಯುತ್ತಾರೆ.ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಗೌತಮ್ ಕಟ್ಟರ್ ವಿರುದ್ಧ ಗೋವಾ ಸರ್ಕಾರ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಾರ್ವಜನಿಕವಾಗಿ ಇಡೀ ಕ್ರೈಸ್ತ ಸಮುದಾಯದ ಕ್ಷಮೆಯಾಚಿಸಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಈ ವಿಚಾರವಾಗಿ ಗೋವಾದಲ್ಲಿ ಕಾಂಗ್ರೆಸ್ ನಾಯಕ ಯೂರಿ ಅಲೆಮಾವೊ ಹಾಗೂ ಎಎಪಿ ಅಧ್ಯಕ್ಷ ವಾಲ್ಮೀಕಿ ನಾಯಕ್ ಸೇರಿದಂತೆ ಹಲವು ಗಣ್ಯರು ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆಯನ್ನು ಗೋವಾ ಕ್ರೈಂ ಬ್ರಾಂಚ್ಗೆ ವರ್ಗಾಯಿಸಲಾಗಿದ್ದು, ವಿವಾದದ ಕಿಚ್ಚು ಹಬ್ಬುತ್ತಿದೆ.
ಸಂತ ಫ್ರಾನ್ಸಿಸ್ ಜೇವಿಯರ್ ಅವರನ್ನು ಗೋವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಐಕಾನ್ ಎಂದು ಪರಿಗಣಿಸಲಾಗುತ್ತಿದ್ದು, ಇಂತಹ ಹೇಳಿಕೆಗಳು ಶಾಂತಿಪ್ರಿಯ ಗೋವಾ ಜನರಲ್ಲಿ ಅಸಮಾಧಾನ ಮೂಡಿಸಿವೆ.



