

ಕುಂದಾಪುರ; ಸಿ.ಎಸ್.ಐ ಕ್ರಪಾ ವಿದ್ಯಾಲಯ ನರ್ಸರಿ ಶಾಲೆಯಲ್ಲಿ ಗುಲಾಬಿ ಬಣ್ಣದ ದಿನಾಚರಣೆ ನ. 27 ರಂದು ಶಾಲಾ ಎಲ್.ಕೆ.ಜಿ ಮತ್ತು ಯು.ಕೆ.ಜಿ.ಪುಟಾಣಿ ಮಕ್ಕಳಿಗೆ ಗುಲಾಬಿ ಬಣ್ಣದ ದಿನಾಚರಣೆಯನ್ನು ಆಚರಿಸಲಾಯಿತು. ಸಿ.ಎಸ್.ಐ.ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾರವರು ಆಗಮಿಸಿದ ಅತಿಥಿಗಳಿಗೆ ಹಾಗೂ ಹಾಗೂ ಎಲ್ಲಾ ಪುಟಾಣಿ ಮಕ್ಕಳಿಗೆ ಸ್ವಾಗತವನ್ನು ಕೋರಿದರು.
ಮುಖ್ಯ ಅತಿಥಿಗಳಾದ ವಂ। ಇಮ್ಯಾನುವೆಲ್ ಜಯಕರ್ ರವರು ಪುಟಾಣಿ ಮಕ್ಕಳಿಗೆ ಗುಲಾಬಿ ಬಣ್ಣ ಎಂದರೆ ತುಂಬಾ ಇಷ್ಟ’ ಎಂದು ಹೇಳಿ ಮಕ್ಕಳಿಗೆ ಶುಭಕೋರಿದರು. ಶಾಲಾ ಪ್ರಾಂಶುಪಾಲರು ಮಾತನಾಡಿ ಪುಟಾಣಿಗಳು ಗುಲಾಬಿ ಬಟ್ಟೆಯಲ್ಲಿ ಮುದ್ದಾಗಿ ಕಾಣುತ್ತಾರೆ’ ಎಂದು ಹೇಳಿ ಅಭಿನಯಗೀತೆಯನ್ನು ಮಾಡಿ ಮನೋರಂಜಿಸಿದರು.
ಪುಟಾಣಿಗಳು “ಗುಲಾಬಿ ಬಣ್ಣದ” ಗೀತೆಯನ್ನು ಹಾಡಿದರು.ಹಾಗೂ ಯು.ಕೆ.ಜಿ ಯ ಆರ್ವಿ ಮತ್ತು ಆಜ್ಮಾ, ಗುಲಾಬಿ ಬಣ್ಣದ ಬಗ್ಗೆ ಭಾಷಣವನ್ನು ಮಾಡಿದರು. ಪ್ರಾಂಶುಪಾಲೆ ಅನಿತಾ ಡಿಸೋಜಾ, ಸಹಶಿಕ್ಷಕಿಯರಿಗೆ ,ಅಂಗನವಾಡಿ ಶಿಕ್ಷಕಿ ವಿದ್ಯಾಲಕ್ಶ್ಮಿ ಹಾಗೂ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರಾದ ಸದಾನಂದ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸಿ.ಎಸ್.ಐ ಅಂಗನವಾಡಿ ಶಿಕ್ಷಕಿ ಹಾಗೂ ಶಾಲಾಭಿವ್ರದ್ಧಿ ಸಮಿತಿಯ ಸದಸ್ಯರಾದ ಸದಾಶಿವ ಉಪಸ್ಥಿತರಿದ್ದರು ಸಿ.ಎಸ್.ಐ.ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಸ್ವಾಗತಿಸಿದರು. ಶಿಕ್ಷಕಿ ರೇಖಾ ಆಲ್ಮೇಡ ಅರ್ಪಿಸಿದರು. ಶಿಕ್ಷಕಿ ವಿಲ್ಮಾ ಶೈಲೇಟ್ ನಿರೂಪಿಸಿದರು.





