

ಕೋಟಾ; ಡಾ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟಾ ತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ನವೆಂಬರ್ 30.ರಂದು ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ 5ನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ವನ್ನು ಬಾಲ ಪ್ರತಿಭೆ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಅರ್ನೋನ್ ಡಿ ಅಲ್ಮೆಡಾ ಗೆ ಪ್ರಧಾನ ಮಾಡಲಾಯಿತು..
ಅರ್ನೋನ್ ತನ್ನ ಚಿಕ್ಕ ವಯಸಿನಲ್ಲಿ ಬೇರೆ ಬೇರೆ ಚಟುವಟಿಕೆ ಗಳಲ್ಲಿ ಭಾಗವಹಿಸಿ ಬೆಳ್ಳಿ ಹಾಗು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ
ಕರಾಟೆ ಯಲ್ಲಿ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಯನ್ನು ಪಡೆದಿರುತ್ತಾನೆ ಪ್ರಸ್ತುತ ಕರಾಟೆಯಲ್ಲಿ ಕೆ ಡಿ ಎಫ್ ಕಿರಣ ಕುಂದಾಪುರ ಇವರಿಂದ ತರಬೇತಿ ಪಡೆಯುತ್ತಿದ್ದಾನೆ. ಇವನು ವಿಲ್ಸನ್ ಡಿ ಅಲ್ಮೆಡ ಜ್ಯೋತಿ ಡಿ ಮೇಲ್ಲೋ ದಂಪತಿಯ ಪುತ್ರನಾಗಿದ್ದಾನೆ.
ಹೀಗೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ತೋರಿಸಿ ಹಲವಾರು ಪ್ರಶಸ್ತಿ, ಪದಕಗಳನ್ನು ಪಡೆದು ಕೊಂಡಿರುವ ಈತನಿಗೆ ಶಾಲೆಯ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.




