

ಪಡುಕೋಣೆ ;ದಿನಾಂಕ. 8. 8. 26 ಮತ್ತು 9.8.26 ರಂದು ಶನಿವಾರ ಅಪರಾಹ್ನ 4.00 ಘಂಟೆಗೆ ಸರಿಯಾಗಿ ಸೌಪರ್ಣಿಕ ನದಿಯ ತೀರದಲ್ಲಿರುವ ಪಡುಕೋಣೆ ಚರ್ಚಿಗೆ ನೂತನ ಧರ್ಮಾಧ್ಯಕ್ಷರಾದ ಅತೀ ವಂದನೀಯ ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾರವರು ತಮ್ಮ ಅಧಿಕ್ರತ ಭೇಟಿ ಮಾಡಿದರು.
ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊರವರು ಅವರನ್ನು ಅಲಂಗಿಸಿ ಮಲ್ಲಿಗೆ ಹಾರವನ್ನು ಹಾಕಿ ಗೌರವ ಪೂರ್ವಕವಾಗಿ ಸ್ವಾಗತಿಸಿದರು. ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೋಸೆಫ್ ಸಿರಿಲ್ ಡಿ’ಸಿಲ್ವಾರವರು ಹೂ ಗುಚ್ಛವನ್ನು ನೀಡಿದರು. ಯುವತಿಯರು ತಾಂಬೂಲ, ಬೆಲ್ಲ ನೀರು ನೀಡಿ ಧೂಪ ದೀಪ ಪನ್ನೀರು ಸಿಂಪಡಿಸಿ, ಹೂವನ್ನು ಅರ್ಪಿಸಿ ಆರತಿಯನ್ನು ಬೆಳಗಿಸಿದರು. ಸುಪೀರಿಯರ್ ಸಿ! ಪಾವನಾರವರು ಹೂವನ್ನು ಅಪಿ೯ಸಿದರು. ಬಾಲಕಿಯರು ಬಿಳಿಯ ಸಮವಸ್ತ್ರವನ್ನು ಧರಿಸಿ ತಟ್ಟೆಯಲ್ಲಿ ಹೂವಿನ ಎಸಳುಗಳನ್ನು ಚೆಲು ತ್ತಾಕ್ರೈಸ್ತ ಶಿಕ್ಷಣ ಬೋಧನೆಯ ಶಿಕ್ಷಕರು, ಪಾಲನಾ ಮಂಡಳಿಯ ಸದಸ್ಯರು ಚರ್ಚಿನ ದೇವಪ್ರಜೆಗಳು ಎಲ್ಲರೂ ಸಾಲಾಗಿ ಚರ್ಚಿನ ಒಳಗಡೆ ಆಗಮಿಸಿದರು. ದೇವ ಪೀಠದ ಮಕ್ಕಳು, ಧರ್ಮಗುರುಗಳು, ಧರ್ಮಾಧ್ಯಕ್ಷರು ಜೊತೆಯಲ್ಲಿ ಧೂಪವನ್ನು ಉರಿಸುತ್ತಾ ಚರ್ಚಿನ ಒಳಗಡೆ ಆಗಮಿಸಿದರು.
ಧರ್ಮಾಧ್ಯಕ್ಷರು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಪಾಲನಾ ಮಂಡಳಿ ಯ ಸದಸ್ಯರಿಗೆ ಆರ್ಶೀವದಿಸಿದ ಉರಿಯುವ ಮೇಣದ ಬತ್ತಿಯ ಜೊತೆ ಪ್ರಾರ್ಥನೆ ಮಾಡಿದರು. ನಂತರ ಸಮಾಧಿ ಭೂಮಿಯಲ್ಲಿ ಪ್ರಾರ್ಥನೆ ನಡೆಸಿ ಆರ್ಶೀವದಿಸಿದರು. ಮರುದಿನ ಮುಂಜಾನೆ ಚರ್ಚ್ ನಲ್ಲಿದ್ದ ಭಕ್ತರಿಗೆ ಬೋಧನೆಯನ್ನು ನೀಡಿ, ಸಮಯ ನಂತರ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಬಲಿಪೂಜೆಯಲ್ಲಿ ಭಕ್ತಾಧಿಗಳಿಗೆ ಆ ದಿನದ ಶುಭ ರ್ವಾತೆಯನ್ನು ಬೋಧಿಸಿ, ಎಲ್ಲವನ್ನು ದೇವರು ಸೃಷ್ಟಿ ಸಿದ್ದು, ದೇವರಿಗೆ ಎಲ್ಲವೂ ತಿಳಿದಿದೆ. ಯಾರಿಗೆ ಏನು ಬೇಕು ಎನ್ನುವ ಬಗ್ಗೆ ನಾವು ದೇವರನ್ನು ಪ್ರಾರ್ಥಿಸುವ ಮೊದಲೇ ಅವರು ತಿಳಿದಿರುತ್ತಾರೆ. ದೇವರಿಗೆ ಅಸಾಧ್ಯವಾದದ್ದು ಯಾವುದು ಇಲ್ಲ. ನಮ್ಮಲ್ಲಿರುವ ಪ್ರತಿಯೊಂದು ವಸ್ತು ವು ದೇವರು ನಮಗೆ ನೀಡಿದ ವರದಾನ ಶುದ್ಧವಾದ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿರಿ. ಪ್ರತಿಯೊಬ್ಬರನ್ನು ದೇವರು ಪ್ರೀತಿಸುತ್ತಾರೆ. ದೇವರಲ್ಲಿ ವಿಶ್ವಾಸ ವಿಡಿ., ದೇವರ ಅನುಗ್ರಹ ನಿಮಗೆ ಎಂದೆಂದಿಗೂ ಲಭಿಸುವುದು ಎಂದು ಸಂದೇಶವನ್ನು ನೀಡಿದರು. ಬಲಿಪೂಜೆಯ ನಂತರ ಧರ್ಮಾಧ್ಯಕ್ಷರನ್ನು ಧಮ೯ ಗುರುಗಳು, ಪಾಲನಾ ಮಂಡಳಿಯ ಮುಖ್ಯಸ್ಥರು, ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಫಲಪುಷ್ಪದೊಂದಿಗೆ, ಸ್ಮರಣಿ ಸಂಚಿಕೆ ನೀಡಿ ಗೌರವಿಸಿದರು. ಚರ್ಚಿನ ಪಾಲನಾ ಮಂಡಳಿಯವರ ಜೊತೆ ಚರ್ಚೆ ಸಮಾಲೋಚನೆ ನಡೆಸಿದರು. ವಿವಿಧ ಸ೦ಘಗಳೊಂದಿಗೆ ಪ್ರತ್ಯೆ ಪ್ರತೇಕವಾಗಿ ಆ ಸಂಘದ ವರದಿಗಳನ್ನು ಆಲಿಸಿ ಅವರಿಗೆ ಹಿತನುಡಿಗಳನ್ನು ಬೋಧಿಸಿದರು. ಹಾಗೆಯೇ ಅನಾರೋಗ್ಯಸ್ಥರ ಮನೆಗಳಿಗೆ ಭೇಟಿ ನೀಡಿದರು. ಹಾಗೂ ಒಂದು ವಾಳೆ ನಲ್ಲಿ ಸಭೆಯನ್ನು ನಡೆಸಿ ವಾಳೆಯ ಸದಸ್ಯರೊಂದಿಗೆ ಪ್ರಾರ್ಥನೆ ಕೂಟದಲ್ಲಿ ಭಾಗವಹಿಸಿದರು. ಸಮಯ 5.00 ಘಂಟೆಗೆ ಸರ್ವರು ಸೇರಿ ಧರ್ಮಾಧ್ಯಕ್ಷರ ವರನ್ನು ಗೌರವದಿಂದ ಶುಭ ಹಾರೈಸಿದರು.












































