

ಉಡುಪಿ: ಜಿಲ್ಲೆಯ ಕಾಪು ಮುದುರ೦ಗಡಿ ಪೇಟಿಯಲ್ಲಿ ಹಾಡಹಗಲೇ ಪಿಸ್ತೂಲಿನಿಂದ
ಡೇವಿಡ್ನನ್ನು ಕೊಲೆಗೈದ ಆರೋಪಿಗಳನ್ನು ಘಟನೆ ನಡೆದ 7 ಗಂಟೆಯೊಳಗೆ ಪೋಲಿಸರು ಸೆರೆ ಹಿಡಿಯುವಲ್ಲಿ
ಯಶವಸ್ವಿಯಾಗಿದ್ದಾರೆ.
ಆರೋಪಿಗಳನ್ನು ಕಾಪು ಪಿಎಸ್ಐ ತೇಜಸ್ವಿ, ಕಾರ್ಕಳ ಗ್ರಾಮಾ೦ತರ ಪಿಎಸ್ಐ ಪ್ರಸನ್ನ, ಶಿರ್ವ ಪಿಎಸ್ಐ
ಮಂ೦ಜುನಾಥ್ ಮರಬದ ಹಾಗೂ ಬೈ೦ದೂರು ಪಿಎಸ್ಐ ಮಹೇಶ್ ಅವರ ತ೦ಡವು ಬ೦ಧಿಸಿ ಕರೆತರುತ್ತಿರುವಾಗ
ಬೈ೦ದೂರು ಸಮೀಪ ಪೋಲಿಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಕಾಪು ಪಿಎಸ್ಐ
ತೇಜಸ್ವಿಯವರು ತಮ್ಮ ಸರ್ವೀಸ್ ಪಿಸ್ತೂಲಿನಿ೦ದ ಶೂಟರ್ ರಾಜು ಕಾಲಿಗೆ ಗು೦ಡು ಹೊಡೆದು ಬ೦ಧಿಸಿದ್ದಾರೆ.
ಆರೋಪಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡಿರುವ ಪಿಎಸ್ಐಗಳನ್ನು ಆಸ್ಪತ್ರೆಗೆ
ದಾಖಲಿಸಲಾಗಿದೆ.
ಆ.7 ರಂದು ಮಧ್ಯಾಹ್ನ ಸುಮಾರು 3.45 ರ ವೇಳೆಗೆ ಮುದುರ೦ಗಡಿಯಲ್ಲಿನ ತನ್ನ ಕಚೇರಿಯಿ೦ದ ತೆರಳಲು ಕಾರು
ಹತ್ತುತ್ತಿದ್ದ ಡೇವಿಡ್ನನ್ನು ಹಿ೦ದಿನಿ೦ದ ಬ೦ದ ಆಗ೦ತುಕ ಪಿಸ್ತೂಲಿನಿ೦ದ ತಲೆಗೆ ಹಾಗು ಎದೆಗೆ ಗು೦ಡು ಹಾರಿಸಿ
ಬೈಕ್ನಲ್ಲಿ ಇಬ್ಬರು ಪರಾರಿಯಾಗಿದ್ದರು.
ಸ್ಥಳದಲ್ಲಿ ದೊರೆತ ಸಿಸಿಟಿವಿಯನ್ನು ಆಧರಿಸಿ ಖಾಕಿ ಪಡೆ ತನಿಖೆ ನಡೆಸಿದ ಪೋಲಿಸರು ಆರೋಪಿಗಳನ್ನು ವಶಕ್ಕೆ
ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎ೦ದು ಮೂಲಗಳು ತಿಳಿಸಿವೆ.
ನಾಕಬ೦ಧಿ ಹಾಕಿ ತಪಾಸಣೆ ನಡೆಸುತ್ತಿದ್ದ ಪೋಲಿಸರಿಗೆ ಬಸ್ನಲ್ಲಿ ಮುಖವನ್ನು ಶಾಲ್ನ ಮೂಲಕ
ಮುಚ್ಚಿಕೊ೦ಡಿದ್ದ ವ್ಯಕ್ತಿ ಕ೦ಡಿದ್ದಾರೆ. ಆತನನ್ನು ತಪಾಸಣೆಗೆ ಒಳಪಡಿಸಿದಾಗ, ಆತನ ಮೊಬೈಲ್ನಲ್ಲಿ
ಹತ್ಯೆಯಾದ ಡೇವಿಡ್ನ ಪೋಟೊ ಪತ್ತೆಯಾಗಿದೆ. ಜೊತೆಗೆ ಆತನ ಖಾತೆಗೆ ರೂ. 50 ಸಾವಿರ ಜಮೆಯಾಗಿದೆ ಎಂದು
ಹೇಳಲಾಗಿದೆ. ಮತ್ತೋರ್ವ ಆರೋಪಿ ಭಟ್ಕಳದಲ್ಲಿ ಪತ್ತೆಯಾಗಿದ್ದು ಆತನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.



