Panaji; ‘Friends of 3L’ distributes raincoats and school kits to primary school children by students


ಪಣಜಿ: ಇಲ್ಲಿನ ಫಾರ್ಮಸಿ ಕಾಲೇಜು ಹತ್ತಿರದ ರಾಮದಾಸ್ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ‘ಫ್ರೆಂಡ್ಸ್ ಆಫ್ 3L’ (ಕನಿಷ್ಠ 3 ಸೌಲಭ್ಯ ವಂಚಿತರಿಗೆ ಸಹಾಯ ಹಸ್ತ ನೀಡುವ ಸ್ನೇಹಿತರು)ಸಂಘಟನೆಯ ವತಿಯಿಂದ ವಿದ್ಯಾರ್ಥಿಗಳಿಗೆ ಶನಿವಾರ ಅಗತ್ಯ ಶಾಲಾ ಪರಿಕರಗಳು ಹಾಗೂ ರೇನ್ಕೋಟ್ಗಳನ್ನು ವಿತರಿಸಲಾಯಿತು.
ಸಂಘಟನೆಯ ಪರವಾಗಿ ಉಪಸ್ಥಿತರಿದ್ದ ಶ್ರೀ ಡೆಲ್ಫಿಮ್ ಗ್ರಾಸಿಯಸ್ ಅವರು ವಿದ್ಯಾರ್ಥಿಗಳಿಗೆ ಈ ಸಾಮಗ್ರಿಗಳನ್ನು ಹಸ್ತಾಂತರಿಸಿದರು. ಮುಂಗಾರು ಮಳೆಯಿಂದ ರಕ್ಷಣೆ ಪಡೆಯಲು ಒಂದನೇ ತರಗತಿಯ ಮಕ್ಕಳಿಗೆ ರೇನ್ಕೋಟ್ಗಳನ್ನು ನೀಡಲಾಯಿತು. ಇದರೊಂದಿಗೆ ಶಾಲೆಗೆ ಹೊಸದಾಗಿ ದಾಖಲಾದ 6 ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್, ಲೇಖನ ಸಾಮಗ್ರಿ (ಸ್ಟೇಷನರಿ) ಹಾಗೂ ಒಂದು ಜೊತೆ ಶಾಲಾ ಸಮವಸ್ತ್ರವನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಕಳೆದ 2025-26ರ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡಿದ 5 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹಕವಾಗಿ ಲೇಖನ ಸಾಮಗ್ರಿಗಳನ್ನು ನೀಡಿ ಗೌರವಿಸಲಾಯಿತು.
ಪ್ರಾಥಮಿಕ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು 3L ಮಿಷನ್ನ ಸಂಯೋಜಕರಾದ ಪ್ರತಾಪ್ ನಾಯ್ಕ್ SJ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Panaji; ‘Friends of 3L’ distributes raincoats and school kits to primary school children by students

PANAJI: Students of the ‘Friends of 3L’ (at least 3 friends who lend a helping hand to the underprivileged) group on Saturday distributed essential school utilities and academic rewards to the pupils of Government Primary School, Ramdas, located near the Pharmacy College in the capital city.
The items were distributed by Mr. Delfim Gracias, who represented the student group at the event.
The distribution drive focused on supporting new admissions, protecting young children from the monsoons, and recognizing academic merit. As part of the initiative, first-standard students received raincoats. Additionally, six newly enrolled students were equipped with high-quality school bags, stationery kits, and pairs of school uniforms.
The group also recognized academic excellence by presenting stationery sets to five top-performing students for their outstanding performance during the previous 2025–26 academic year.
According to a press note issued by Pratap Naik SJ, Coordinator of the 3L Mission, the initiative aligns with the mission’s ongoing efforts to support primary education and encourage young learners.




