

ಶ್ರೀನಿವಾಸಪುರ : ಮನುಷ್ಯನು ದಿನನಿತ್ಯದ ಜಂಜಾಟಗಳಲ್ಲಿ ತೊಡಗಿರುತ್ತಾನೆ . ಅವನಿಗೆ ಮಾನಸಿಕವಾಗಿ ಒಂದಿಲ್ಲದೊಂದು ಸಮಸ್ಯೆಗಳು ಇದ್ದೇ ಇರುತ್ತದೆ. ಎಷ್ಟೇ ಮಾನಸಿಕ ಒತ್ತಡಗಳು ಇದ್ದರೂ ಸಹ ದೇವಾಲಯಗಳಿಗೆ ಬಂದು ಹೋದರೆ ಮನಸ್ಸು ಸಂತಸಗೊಳ್ಳುತ್ತದೆ . ಮಾನಸಿಕವಾಗಿ ಸದೃಡವಾಗಿ ಇರಬಹುದು ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಎಂದರು. ತಾಲೂಕಿನ ಕೊತ್ತಪೇಟ ಗ್ರಾಮಕ್ಕೆ ಬುಧವಾರ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಗ್ರಾಮದ ನೂತನವಾಗಿ ನಿರ್ಮಿಸಲಾದ ಗಂಗಮ್ಮ ದೇವಿಯ ದೇವಾಲಯಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದು ಮಾತನಾಡಿದರು.
ದೇವಸ್ಥಾನಕ್ಕೆ ಸಂಬಂದಿಸಿದಂತೆ ಸಮುದಾಯಭವನವನ್ನು ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು. ಗುರುಗಳಾದ ದಿವಗಂತ ಕೊಂಡಾಜಿ ರವರ ಸಮಾಧಿಗೆ ನಮಸ್ಕಾರ ಮಾಡಿ ಅವರ ಕಾರ್ಯಗಳ ಬಗ್ಗೆ ಕೊಂಡಾಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಕಾರ್ಯಾಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಕೋಡಿಪಲ್ಲಿ ಸುಬ್ಬಿರೆಡ್ಡಿ , ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್, ಜಗದೀಶ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ಭಾಸ್ಕರ್ , ಸಾಕಪಲ್ಲಿ ರಘು, ಕೊತ್ತಪೇಟೆ ನರಸಿಂಹಪ್ಪ ಹಾಗು ಗ್ರಾಮಸ್ಥರು ಇದ್ದರು.


