

ನಮ್ಮ ಪರಿಸರದ ಅವಿಸ್ಮರಣೀಯ ಸ್ಥಳ ಮತ್ತು ಮಣ್ಣಿನ ಸಾರವನ್ನು ಅರ್ಥೈಸುವುದರೊಂದಿಗೆ ಸಂಸ್ಕೃತಿಯ ಪ್ರತೀಕವನ್ನು ಬಿಂಬಿಸುವ “ನಮನ” ಚಿತ್ರಕಲಾ ಪ್ರದರ್ಶನವು ವಿಶೇಷವಾಗಿದ್ದು; ಕಲಾಭ್ಯಾಸಗೈಯುವ ವಿದ್ಯಾರ್ಥಿಯರಿಗೆ ಕಲಾ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಆಯ್ದ 30 ವಿದ್ಯಾರ್ಥಿಯರಿಂದ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಉದ್ಘಾಟನಾ ಸಮಾರಂಭ:-
ದಿನಾಂಕ 10.04.2026 ಶುಕ್ರವಾರ ಸಂಜೆ 04.30ಕ್ಕೆ ಕಾರ್ಕಳ ಬೈಲೂರು ಹಾಲಿನ ಡೈರಿ ಮೇಲ್ಗಡೆಯ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ನಡೆಯಲಿಕ್ಕಿದೆ. ಕಾರ್ಕಳದ ಮಾನ್ಯ ಶಾಸಕರಾದ ಶ್ರೀ ವಿ. ಸುನೀಲ್ ಕುಮಾರ್, ಬಹು ಯಕ್ಷಗಾನ ಮೇಳಗಳ ಸಂಚಾಲಕರಾದ ಶ್ರೀ ಪಿ. ಕಿಶನ್ ಹೆಗ್ಡೆ, ನೀರೆ ಬೈಲೂರು ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಗುತ್ತುಮನೆ, ಕಣಜಾರು ಲೂರ್ಡ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಪ್ರಾಂಶುಪಾಲರಾದ ಜಾಸ್ಮಿನ್ ಪಿಂಟೋ, ಬೈಲೂರಿನ ಉಧ್ಯಮಿಯರಾದ ಶ್ರೀ ರಮೇಶ್ ಕಿಣಿ ಮತ್ತು ಉದಯಕುಮಾರ್ ಹೆಗ್ಡೆ, ಯರ್ಲಪಾಡಿ, ತಾಲೂಕು ಕ್ರಿಕೆಟ್ ಅಸೋಸಿಯೇಶನ್ ಕಾರ್ಕಳದ ಅಧ್ಯಕ್ಷರಾದ ಶಕೀರ್ ಹುಸೇನ್ ಅತಿಥಿ ಅಭ್ಯಾಗತರಾಗಿರಲಿದ್ದಾರೆ.
ಭಾಗವಹಿಸುವ ಕಲಾ ವಿದ್ಯಾರ್ಥಿಗಳು.:-
ತ್ರಿವರ್ಣ ಕಲಾ ತರಗತಿಯ 18 ವಷ಼ðದೊಳಗಿನ (ಕಿರಿಯರ ವಿಭಾಗ) ಆಯ್ದ 30 ಕಲಾವಿದ್ಯಾರ್ಥಿಯರ ಈ ಕಲಾಪ್ರದರ್ಶನದಲ್ಲಿ ಅದ್ವಿತ್ ಕುಮಾರ್ ಆರ್, ಆದ್ಯಾ ಸುರೇಶ್, ಅಶುತೋಷ್ ಎಂ. ನಾಯಕ್, ಎ. ನಿಯತಿ ಯನ್. ಪೈ, ಆರಾಧ್ಯ ಎಸ್, ಆರಾಂಶ್, ಎಸ್ ಪೂಜಾರಿ, ಆತ್ರಾಡಿ ಕಾವ್ಯರಾಜ್ ಹೆಗ್ಡೆ, ದೇವಾಂಗಣ ಯನ್. ಆರ್, ದೇವಿಕಾ ಉಡುಪ, ಗ್ರೀಷ್ಮಾ ಎಸ್, ಜೋರ್ಡನ್ ಕೋರ್ಡ, ಕೃತಿ ಕೆ. ದೇವಾಡಿಗ, ಪ್ರಣತಿ ಬಿ. ಶೆಟ್ಟಿ, ಪ್ರತ್ವಿಜ್ ಪಿ. ಶೆಟ್ಟಿ, ಪೃತ್ಯೂಷ ಎಸ್ ಕಿಣಿ, ರಿಷು ಜೆ. ಶೆಟ್ಟಿ, ಸಾಕ್ಷಿ ಎನ್. ಸಾಲ್ಯಾನ್, ಸಾಕ್ಷಿತ್ ಎಸ್, ಶೆಟ್ಟಿ, ಸಾನ್ವಿ ಎಲ್. ಪೂಜಾರಿ, ಸಾನ್ವಿ ಪಾಲನ್, ಸಧ್ವಿನ್ ಢಿ. ಶೆಟ್ಟಿ, ಸಂಜನಾ ಎಸ್. ಸಮಂತ್, ಸಾತ್ವಿಕ್ ಕೆ. ಆರ್, ಶ್ರೇಯನ್ ಪೂಜಾರಿ, ಸ್ಮೃತಿ ತುಂಗಾ ಪಿ, ಸ್ಪರ್ಶ್ ಸುಕೇಶ್ ಪೂಜಾರಿ, ಶ್ರೀಲತಾ ಶೆಣೈ, ತನುಶ್ರೀ, ತೇಜಸ್ ದೇವಾಡಿಗ ಮತ್ತು ವಿಜೇತಾ ಕೆ. ಎಸ್. ತಮ್ಮ ನೆಲದ ಮತ್ತು ಸಂಸ್ಕೃತಿಯ ಅಭಿಮಾನವನ್ನು ಕೃತಿಯ ಮೂಲಕ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಅಭಿವ್ಯಕ್ತಪಡಿಸಿದ್ದಾರೆ.
ರಚಿಸಿರುವ ಕಲಾಕೃತಿಗಳು:-
ಪಂಚ ಗಂಗಾವಳಿ, ಥೀಂ ಪಾರ್ಕ್, ಮೀನುಗಾರರು, ಕೋಟಿಲಿಂಗೇಶ್ವರ, ಅನಂತ ಶಯನ, ಸಿಧ್ದಿವಿನಾಯಕ, ಗೋ ಶಾಲಾ, ತೈಯಂ, ಬೇಸಾಯ, ಟೀ ಎಸ್ಟೇಟ್, ಪ್ರೇಯರ್, ಕಾಂತಾರ, ಸಮುದ್ರ ಸ್ನಾನ, ಪಾರ್ಧನ, ಹುಲಿ ವೇಷ, ಬ್ರಹ್ಮಲಿಂಗೇಶ್ವರ, ಕಂಬಳ, ಬಸದಿ, ಕಟ್ಟೆ ಪೂಜೆ, ಬಲಿ, ಕೋಟೆ ಆಂಜನೇಯ, ಜಾತ್ರೆ, ವಿನಾಯಕ, ಸುರಪಾನ, ಗೊಂಬೆಯಾಟ, ಬಾಹು ಬಲಿ, ಕೋಳಿ ಅಂಕ, ನಂದಾ ದೀಪ, ಭಕ್ತಿ, ಆನೆಕೆರೆ, ರಥಬೀದಿ, ಜೈನ ಟೆಂಪಲ್ ಮತ್ತು ಡೊಳ್ಳು ಕುಣಿತ ಎಂಬ ಕಲಾಕೃತಿಗಳು 18ಘಿ18 ಇಂಚಿನ ಅಕ್ರಾಲಿಕ್ ಕ್ಯಾನ್ವಾಸ್, ಚಾರ್ಕೋಲ್, ಮಿಶ್ರ ಮಾಧ್ಯಮದ ಶೇಡಿಂಗ್ಸ್ನ ಒಟ್ಟು 33 ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ.
ಕಲಾಪ್ರದರ್ಶನದ ವಿಶೇಷತೆಗಳು:-
- ತ್ರಿವರ್ಣ ಕಲಾ ಕಾರ್ಕಳ ಬೈಲೂರು, ಮಣಿಪಾಲ, ಕುಂದಾಪುರ ಮತ್ತು ಆನ್ಲೆöÊನ್ ತರಗತಿಯಲ್ಲಿ ವಿದ್ಯಾಭ್ಯಾಸಗೈಯುವ 7 ರಿಂದ 18 ವಯೋಮಿತಿಯ ಆಯ್ದ 30 ವಿದ್ಯಾರ್ಥಿಯರ 33 ಕಲಾಕೃತಿಗಳು.
- ಕಲಾವಿದ, ಮಾರ್ಗದರ್ಶಕ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ತ್ರಿವರ್ಣ ಕಲಾ ಕೇಂದ್ರದ ವಿದ್ಯಾರ್ಥಿಯರ 31ನೇ ಕಲಾಪ್ರದರ್ಶನ.
- ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕ ವೀಕ್ಷಕರಿಂದ ಅತ್ತುತ್ತಮ ಕಲಾಕೃತಿಯನ್ನು ಆಯ್ಕೆ ಮಾಡಿ ಬಹುಮಾನ ಗೆಲ್ಲಿಸುವ ಮತ್ತು ಸಾರ್ವಜನಿಕರಿಗೂ ಒಂದು ಬಹುಮಾನ ಗೆಲ್ಲುವ ಅವಕಾಶ.
ದಿನಾಂಕ 11.04.2026 ಶನಿವಾರ 12.04.2026ನೇ ಆದಿತ್ಯವಾರದವರೆಗೆ ಬೆಳಿಗ್ಗೆ 09.00ರಿಂದ ಸಂಜೆ 7.00ರ ತನಕ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಿಲಾಗಿದೆ.





ಹರೀಶ್ ಸಾಗಾ, ಮಾರ್ಗದರ್ಶಕ, ತ್ರಿವರ್ಣ ಆರ್ಟ್ ಕ್ಲಾಸ್ಸಸ್ & ಗ್ಯಾಲರಿ

