

ಕುಂದಾಪುರ; ಕುಂದಾಪುರದ ಇತ್ತೀಚೆಗೆ ಸೈಂಟ್ ಮೇರಿಸ್ ಪ್ರೌಢಶಾಲಾ ಇನ್ಟರಾಕ್ಟ್ ಕ್ಲಬ್ ವತಿಯಿಂದ “ನನ್ನ ಸಾಧನೆಯ ಮೆಟ್ಟಿಲುಗಳತ್ತ ನನ್ನ ಅನುಭವಗಳು” ಎಂಬ ಶೀರ್ಷಿಕೆಯಡಿ, ಕುಂದಾಪುರದ ಜನಪ್ರಿಯ ಹಾಡುಗಾರ್ತಿ ಕುಮಾರಿ ಧಾರಿಣಿಯವರನ್ನು ಅತಿಥಿಗಳಾಗಿ ಆಗಮಿಸಿದ್ದರು. ಹೋಲಿ ರೋಸರಿ ಶಾಲೆಯಲ್ಲಿ ವಿಧ್ಯಾರ್ಜನೆಗೈದ ಧಾರಿಣಿಯವರು, ಎಸ್. ಎಸ್. ಎಲ್. ಸಿ ಹಾಗೂ ಪಿ.ಯು.ಸಿ ಯಲ್ಲಿ 97% ಗಳಿಸಿದ್ದು, ಬ್ಯಾಡ್ಮಿಂಟನ್ನಲ್ಲೂ 5 ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುತ್ತಾರೆ.
100ಕ್ಕಿಂತಲೂ ಹೆಚ್ಚು ಜಿಲ್ಲಾಮಟ್ಟದ ಪ್ರಶಸ್ತಿ, ‘ವಾಯ್ಸ್ ಆಫ್ ಕೋಸ್ಟಲ್ ಬೀಟ್ಸ್’ ‘ವಾಯ್ಸ್ ಆಫ್ ಕರಾವಳಿ’ ‘ಸ್ವರ ಸಾಧಕ್’ ‘ಫೋನ್ ಇನ್ ಸಂಗೀತ ತಾರೆ’ ಎಂಬ ಬಿರುದುಗಳು ಹಾಗೂ ಆಯುಷ್ ಟಿ ವಿ ಯ ಸ್ಟಾರ್ ಸಿಂಗರ್ ಪ್ರಶಸ್ತಿ, ಪಿ. ನಾಗೇಂದ್ರನಾಥ್ ಮ್ಯೂಸಿಕ್ ಪ್ರಶಸ್ತಿ, ಅಂತರರಾಷ್ಟ್ರೀಯ ಮಟ್ಟದ ಕಲಾ ಸೌರಭ ಪ್ರಶಸ್ತಿ, ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ಗಳಿಸಿದ ಖ್ಯಾತಿ ಇವರದಾಗಿದೆ. ವಿದ್ಯಾರ್ಥಿಗಳಿಗಳಲ್ಲಿ ಧಾರಿಣಿಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು.



