

ಐ ಎಮ್ ಜೆ ಇನ್ಸ್ಟಿಟ್ಯೂಶನ್ಸ್ ಮೂಡ್ಲಕಟ್ಟೆಯಲ್ಲಿ ಇಪ್ಪತ್ತೊಂದನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲನೇ ದಿನ ಕಾಲೇಜಿನಲ್ಲಿ ಮೂರ್ತಿ ಸ್ಥಾಪನೆ, ಪೂಜಾ ಕಾರ್ಯಗಳು ನಡೆದಿದ್ದು , ಎರಡನೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ದೆ ನಡೆಸಲಾಯಿತು. ಮೂರನೆಯ ದಿನ ಗಣಹೋಮ , ಐಎಮ್ ಜೆ ಐ ಎಸ್ ಸಿ ವಿದ್ಯಾರ್ಥಿಗಳಿಂದ ಕುಣಿತಭಜನೆ ಆಯೋಜಿಸಲಾಗಿತ್ತು. ತದನಂತರ ವೈಭವದ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಕಾಲೇಜಿನ ಮುಖ್ಯಸ್ಥರಾದ ಶ್ರಿ ಸಿದ್ದಾರ್ಥ ಜೆ ಶೆಟ್ಟಿ, ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ ರಾಮಕೃಷ್ಣ ಹೆಗ್ಡೆ, ಎಲ್ಲ ಕಾಲೇಜಿನ ಪ್ರಾಂಶುಪಾಲರು, ಪ್ರಮುಖ ಆಯೋಜಕರಾದ ಪ್ರೊಫೆಸರ್ ಬಾಲನಾಗೇಶ್ವರ್ , ಭೋದಕ ಭೋದಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡರು.

