

ಶ್ರೀನಿವಾಸಪುರ: ಗ್ರಾಮಗಳಿಗೆ ಗ್ರಾಮಪಂಚಾಯಿತಿಯೇ ಸ್ಥಳೀಯ ಸರ್ಕಾರವಾಗಿದ್ದು, ಗ್ರಾಮಗಳಲ್ಲಿನ ಪ್ರತಿಯೊಂದು ಮೂಲಭೂತ ಸೌಲಭ್ಯಗಳನ್ನು ಕಲ್ಪಸುವಂತಾಗಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎಂದರು.
ತಾಲೂಕಿನ ಹೊದಲಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ನಮ್ಮ ಆಸ್ತಿ, ನಮ್ಮ ಹಕ್ಕು ಅಡಿಯಲ್ಲಿ ಇ-ಸ್ವತ್ತು ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಮಶಾನ ಭೂಮಿಯನ್ನ ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನ ತೆರವುಗೊಳಿಸಲು ಕ್ರಮವಹಿಸಬೇಕು ಹೈಮಾಸ್ಕ್ ದೀಪಗಳನ್ನು ಅವಶ್ಯಕತೆ ಇರುವ ಸ್ಥಳವನ್ನು ಗುರ್ತಿಸಿ ಅಲ್ಲಿ ಆಳವಡಿಸಲು ಸೂಚಿಸಲಾಗಿದೆ. ಕೆಲ ಕಾಲೋನಿಗಳಲ್ಲಿ ಸಿಸಿ ರಸ್ತೆಗಳ ಕಾಮಗಾರಿಗಳನ್ನು ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹೊದಲಿ ಗ್ರಾಮದಲ್ಲಿ ನನ್ನ ಅನುದಾನಕ್ಕೆ ಸಂಬಂದಿಸಿದಂತೆ 35 ಲಕ್ಷರೂ ಅನುದಾನವನ್ನು ನೀಡಲಾಗಿದೆ. ನೀವು ಹೇಳಿದ ಕೆಲಸ ಮಾಡಲು ನಾನು ಇದ್ದೇನೆ. ಆದ್ದರಿಂದ ನೀವು ನನಗೆ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು.
ಎಸ್ಸಿ, ಎಸ್ಟಿ ಸಮುದಾಯದವರಿಗೆ ಈಗಾಗಲೇ 400 ಕೊಳವೆ ಬಾವಿಗಳನ್ನು ಕೊರಿಸಲಾಗಿದೆ. 25 ಗ್ರಾಮಪಂಚಾಯಿತಿಗಳಲ್ಲಿ ಈ ಅಂದೋಲನ ಆಗಬೇಕಿದೆ ಒಂದು ತಿಂಗಳಲ್ಲಿ ಇ-ಸ್ವತ್ತು ಆಗಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ಸ್ವಚ್ಚತೆ , ನೈರ್ಮಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮಪಂಚಾಯಿತಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಈಗಾಗಲೇ 15 ವರ್ಷಗಳ ಹಿಂದೆ ಹೊದಲಿ ಗ್ರಾಮದಲ್ಲಿ ಲೇಔಟ್ ಒಂದನ್ನ ಮಾಡಲಾಗಿದೆ. ಅದರಲ್ಲಿನ 50 ಸೈಟ್ಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಇದೇ ರೀತಿಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮಾಡಲಾಗಿದೆ . ಇಂದು ರಾಜ್ಯ ಸರ್ಕಾರ ಗ್ಯಾರಂಟಿ ಭಾಗ್ಯಗಳ ಸುಳಿಯಲ್ಲಿ ಸಿಕ್ಕಿಕೊಂಡು ಬಳಲುತ್ತಿದ್ದು, ಸರ್ಕಾರ ಗ್ರಾಮೀಣಾಭಿವೃದ್ಧಿಗಾಗಿ ಅನೇಕ ಮೂಲ ಭೂತ ಸೌಲಭ್ಯಗಳನ್ನು ನೀಡಬೇಕು ಎಂದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಪ್ಪ, ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್. ಎನ್, ಮಾತನಾಡಿದರು. ಆರ್ಐ ಸುಬ್ರಮಣಿ, ಗ್ರಾಮ ಆಡಳಿತಾಧಿಕಾರಿ ಸ್ವಾತಿ, ಪಿಡಿಒ ಎಸ್.ಸಂಪತ್ಕುಮಾರ್, ಸದಸ್ಯರಾದ ಕೆ.ಗೋಪಾಲರೆಡ್ಡಿ, ಅಶೋಕ್ಕುಮಾರ್. ಹೆಚ್.ಎಲ್, ಎಂ.ಎಸ್.ಶೋಭ, ಗೀತಾರಾಮಚಂದ್ರ, ಮಂಜುಳ ರಾಮಮೂರ್ತಿ, ಆಂಜನೇಯರೆಡ್ಡಿ, ಗೋವಿಂದಪ್ಪ, ಮುನಿಶಾಮಿ, ಕಾರ್ಯದರ್ಶಿ ಶಿವಶಂಕರ್ರಾಜು, ಕರ ವಸೂಲಿಗಾರ ಅಶೋಕ್, ಗಣಕಯಂತ್ರ ಸಹಾಯಕಿ ವಿನೋದಮ್ಮ, ಪಂಚಾಯಿತಿ ಸಿಬ್ಬಂದಿ ಹಾಗೂ ಜಲಗಾರರು, ಸಾರ್ವಜನಿಕರು ಇದ್ದರು.

