

ಕುಂದಾಪುರ, ಸೆ. 28.: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಅವರ ಪೋಷಕ ಸಂತ ವಿನ್ಸೆಂಟ್ ಪಾವ್ಲರ (ಸೆ.28 ರಂದು) ದಿನಾಚರಣೆಯನ್ನು ಆಚರಿಸಿತು.
ಚರ್ಚಿನ ಧರ್ಮಗುರುಗಳಾದ ಅ|ವಂ|ಪೌಲ್ ರೇಗೊ ಕ್ರತ್ಞತಾ ಬಲಿದಾನವನ್ನು ಅರ್ಪಿಸಿದರು. ವೈಶಂತಿಕ ಸಭೆಯ ಸದಸ್ಯರು ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅ|ವಂ|ಪೌಲ್ ರೇಗೊ ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರು ಸಮಾಜಕ್ಕೆ ಅಮೂಲ್ಯ ಸೇವೆಯನ್ನು ನೀಡುತಿದ್ದಾರೆ, ಸಂತ ವಿನ್ಸೆಂಟ್ ಪಾವ್ಲರು ದೇವರ ವಾಕ್ಯವನ್ನು ಮನಗಂಡು ಅವರು ನಿರ್ಗತಿಕರಿಗೆ, ರೋಗಿಗಳಿಗೆ, ಅನಾಥರಿಗಾಗಿ ಸಹಾಯ ಹಸ್ತ ನೀಡಿ, ಆಸ್ಪತ್ರೆಯನ್ನು ಕಟ್ಟಿಸಿ ಸೇವೆ ನೀಡಿ, ಬಡವರಿಗಾಗಿ ಜೀವ ಸೆವಿಸಿದ ಮಹಾತ್ಮರು, ಅವರ ಆದರ್ಶದಂತೆ ಕುಂದಾಪುರದ ವೈಶಂತಿಕ ಸಭೆ ಬಹಳ ಉತ್ತಮ ರೀತಿಯಲ್ಲಿ ಬಡವರ ಸೇವೆ ಮಾಡುತ್ತೀದೆ, ನಿಮ್ಮ ಸಭೆಯ ಕೆಲಸ ಮೆಚ್ಚುಗೆಗೆ ಪಾತ್ರವಾದುದು, ಅದಕ್ಕಾಗಿ ನಾವೆಲ್ಲ ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರಿಗೆ ಪ್ರೋತ್ಸಾಹಿಸಬೇಕು, ಅದಕ್ಕಾಗಿ “ಬಡವರಲ್ಲಿ ನಾವು ಶ್ರೀಮಂತರಾಗೋಣ” ಎಂದು ಕರೆ ಕೊಟ್ಟು ಶುಭ ಕೋರಿದರು.
ಕಾರ್ಯಕ್ರಮಕ್ಕೆ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯಿನಿ ಭಗಿನಿ ಪ್ರೇಮಿಕಾ ವೈಶಂತಿಕ ಸಭೆಯವರ ಸೇವೆ ಸಹಾಯವನ್ನು ಶ್ಲಾಘಿಸಿದರು. ಸಭೆಯ ಅಧ್ಯಕ್ಷರಾದ ಇಗ್ನೆಶಿಯಸ್ ಡಿಕುನ್ಹಾ ಸ್ವಾಗತಿಸಿದರು, ಕಾರ್ಯದರ್ಶಿ ಡೊಮಿನಿಕ್ ಬ್ರಗಾಂಜಾ ವರದಿಯನ್ನು ವಾಚಿಸಿದರು. ಖಚಾಂಚಿ ಕೆನ್ಯೂಟ್ ರೋಚ್ ಖರ್ಚು ವೆಚ್ಚಗಳನ್ನು ಮುಂದಿಟ್ಟರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವೇದಿಕೆಯಲ್ಲಿದ್ದರು. ಫಾತಿಮಾ ವಾಜ್ ನಿರೂಪಿಸಿದರು. ಡಾ।ಸೋನಿ ಡಿಕೋಸ್ತಾ ವಂದಿಸಿದರು.



























