

ಕುಂದಾಪುರ; 27.06.2026 ರಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಸಾಲಿನ ಶಿಕಕ ರಕ್ಷಕ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ವಿದ್ಯಾರ್ಥಿನಿಯರು ಸ್ವಾಗತ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.
ಹೋಲಿ ರೋಜರಿ ಹಾಗೂ ಸಂತಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಸ್ಥಳೀಯ ಹೋಲಿ ರೋಜರಿ ಚರ್ಚಿನ ಪ್ರಧಾನ ಧಮಗುರುಗಳಾದ ಅ। ವಂ। ಪೌಲ್ ರೇಗೋರವರು ಸಭೆಯ ಅಧ್ಯಕತೆಯನ್ನು ವಹಿಸಿ “ಇಂದಿನ ಮಕ್ಕಳು ನಾಳಿನ ಪ್ರಜೆಗಳು, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಸಮಯವನ್ನು ನೀಡಿ” ಎಂದು ಸಂದೇಶ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಇಶಾನಿ ಮೆಡಿಕಲ್ ಸೆಂಟರ್ ನ ವೈದ್ಯಾಧಿಕಾರಿಯಾಗಿರುವ ಡಾ.ಸೋನಿ ಡಿಕೋಸ್ತಾ ‘ಪೋಷಕರು ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಮಕ್ಕಳಲ್ಲಿ ಪೋಷಕರು ತಮ್ಮ ಕಷ್ಟ ಸುಖವನ್ನು ಅರ್ಥೈಸಬೇಕು, ಹಾಗೇಯೆ ಮಕ್ಕಳ ಭಾವನೆಯನ್ನು ಅರ್ಥ ಮಾಡಿಕೊಂಡು, ಅವರ ಮೇಲೆ ಒತ್ತಡ ಹೇರಬಾರದು ಯಾವ ರೀತಿಯ ಆಹಾರವನ್ನು ನೀಡಬೇಕು, “ಮಕ್ಕಳ ಮೇಲೆ ಭರವಸೆಯಿಡಿ ಕುರುಡು ನಂಬಿಕೆ ಇಡಬೇಡಿ” ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯರಾಗಿರುವ ವಂ।ಧರ್ಮಗುರು ರೋಲ್ವಿನ್ ಫೆರ್ನಾಂಡಿಸ್ ರವರು ಶಾಲಾ ನಿಯಮ ಹಾಗೂ ಶಾಲೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿದರು. ಶಿಕ್ಷಕ ಶ್ರೀಯುತ ಲೂವೀಸ್ ಪ್ರಶಾಂತ್ ರೆಬೆರೋ ಹಿಂದಿನ ವರ್ಷದ ಶಿಕ್ಷಕ-ರಕ್ಷಕ ಸಭೆಯ ವರದಿ ವಾಚಿಸಿದರು. ನಿಮಿಷಾ ಗೊನ್ಸಾಲ್ವಿಸ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಶಿಕ್ಷಕಿ ರಮ್ಯಾ ಹೆಗ್ಡೆ ಶಾಲಾ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ವರದಿಯನ್ನು ಮುಂದಿಟ್ಟರು. ಶಿಕ್ಷಕಿ ಪ್ರಿನ್ಸಿನಾ ಮತ್ತು ಶಿಕ್ಷಕಿ ಕುಮಾರಿ ಎಲಿಟಾ ಅತಿಥಿಗಳ ಪರಿಚಯವನ್ನು ಮಾಡಿ ಸ್ವಾಗತಿಸಿದರು. ಶಿಕ್ಷಕಿ ದಿವ್ಯಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಾರ್ಗದರ್ಶಿಕಿಯಾದ ಶಿಕ್ಷಕಿ ನೀತಾ ಡಿಸೋಜಾ ವಂದಿಸಿದರು. ಸಭೆಗೆ ಸುಮಾರು 345 ಮಂದಿ ಪೋಷಕರು ಹಾಜರಿದ್ದರು.




















