

ಮಂಗಳೂರು; ಕಂಪ್ಯೂಟರ್ ಕ್ಲಬ್ ಎಂದರೆ ತಂತ್ರಜ್ಞಾನದಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಒಂದು ವೇದಿಕೆ. ಇದು ತಂತ್ರಜ್ಞಾನದ ಬಗ್ಗೆ ಕಲಿಯಲು, ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ಸಹಪಾಠಿಗಳೊಂದಿಗೆ ಸಹಕರಿಸಲು ಒಂದು ಅವಕಾಶ. ಕಂಪ್ಯೂಟರ್ ಕ್ಲಬ್ನಲ್ಲಿ, ವಿದ್ಯಾರ್ಥಿಗಳು ಕಂಪ್ಯೂಟರ್ ಪ್ರೋಗ್ರಾಮಿಂಗ್, ಗೇಮ್ ಡೆವಲಪ್ಮೆಂಟ್, ವೆಬ್ ಡಿಸೈನಿಂಗ್ ಮುಂತಾದ ವಿಷಯಗಳ ಬಗ್ಗೆ ಕಲಿಯಬಹುದು. ಅಲ್ಲದೆ, ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಬಹುದು. ಈ ಕ್ಲಬ್ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದಾಗಿ ಶಾಲಾ ಹಿರಿಯ ಶಿಕ್ಷಕಿಯಾದ ಶ್ರೀಮತಿ ಲವೀನ ಡಿಕುನ್ನರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುಉದ್ದೇಶಿಸಿ ಹೇಳಿದರು.
ಕ್ಲಬಿನ ಸದಸ್ಯರು ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಲಬಿನ ಮಂತ್ರಿ ಸಮಕ್ಷ್, ಕಂಪ್ಯೂಟರ್ ಶಿಕ್ಷಕರಾದ ಮತ್ತು ಕ್ಲಬ್ನ ಮೇಲ್ವಿಚಾರಕರಾದ ದಿವ್ಯಶ್ರೀ ಮತ್ತು ಸರಿತಾ ಉಪಸ್ಥಿತರಿದ್ದರು. ಕ್ಲಬ್ನ ಸದಸ್ಯರಾದ ಆರನ್ ಕಾರ್ಯಕ್ರಮ ನಿರೂಪಿಸಿ, ಪ್ರಿಯೋಲ ವಂದಿಸಿದರು.









