

ಕುಂದಾಪುರ; 2026-27 ರ ಸಾಲಿನ ಶೈಕ್ಷಣಿಕ ವರ್ಷದ ಚುನಾಯಿತ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಮತ್ತು ವಿವಿಧ ಸಂಘಗಳ ಉದ್ಘಾಟನ ಸಮಾರಂಭ ನಡೆಯಲಿದೆ ಜೂನ್ 25 ರಂದು ಕುಂದಾಪುರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಆಗಮಿಸಿದ ರಾಜೇಶ್ ಇವರು ದೀಪ ಬೆಳಗುವುದರ ಮೂಲಕ ಮಾತನಾಡುತ್ತಾ ಪ್ರಜಾಸತ್ತಾತ್ಮಕ, ನಾಯಕತ್ವದ ಗುಣಗಳನ್ನು ಬೆಳೆಸಲು ಶಾಲಾ ಸಂಸತ್ತು ಅತ್ಯಗತ್ಯ. ಸಂಸತ್ತು ಎಂಬುದು ಮಕ್ಕಳ ಪ್ರಾಧಿನಿಧಿಕ ರಚನೆಯಾಗಿದ್ದು ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಕರ್ತವ್ಯ ಪ್ರಜ್ಞೆಯೊಂದಿಗೆ ಎಲ್ಲಾ ಕಾರ್ಯಕ್ರಮಗಳನ್ನು ಮಾಡಬೇಕು ಎಂದರು. ಶಿಕ್ಷಕ ಮೈಕಲ್ ಫುಟಾರ್ಡೊ ಸಹಕರಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.









