

ಕುಂದಾಪುರ, ಫೆ.11: ಹಿರಿಯ ಸಾಹಿತಿ, ಲೇಖಕ ಹಾಗೂ ಅಂಕಣಕಾರ ಕೋ. ಶಿವಾನಂದ ಕಾರಂತ ವಯೋಸಹಜ ಕಾಯಿಲೆಯಿಂದ ಕಾಯಿಲೆಯಿಂದ ಇಂದು ಸಂಜೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಕುಂದಾಪುರ ಸಮೀಪದ ಕೋಣಿಯವರಾದ ಶಿವಾನ೦ದ ಕಾರ೦ತರು 1946ರ ಆಗಸ್ಟ್ 30ರ೦ದು ಜನಿಸಿದ್ದರು. ಲೇಖಕ, ಸಾಹಿತಿಯಾಗಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅವರು ಸಕ್ರಿಯರಾಗಿದ್ದರು. ಕುಂದಾಪುರದ ‘ಕುಂದಪ್ರಭ’ ಪತ್ರಿಕೆಯಲ್ಲಿ ಅವರು 3 ದಶಕಗಳ ಕಾಲ ಅಂಕಣಕಾರರಾಗಿ ಜನಪ್ರಿಯರಾಗಿದ್ದರು.
ಅವರು ದಿ.ವೆಂಕಟ ಸೀತಾರಾಮ ಕಾರಂತ ಮತ್ತು ದಿ.ಲಕ್ಷ್ಮಿ ದೇವಿ ಪುತ್ರರಾಗಿದ್ದರು. ಅವರು ಬಿ.ಅರ್.ರಾವ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರ ಬೋರ್ಡ್ ಹೈಸ್ಕೂಲ್ ನಲ್ಲಿ ಪ್ರೌಢ ಶಾಲಾ ಶಿಕ್ಷಣ, ಪದವಿ ಶಿಕ್ಷಣ ಭಂಡಾರಕಾರ್ಸ್ ಕಾಲೇಜು ಕುಂದಾಪುರ ಮತ್ತು ಸ್ನಾತಕೋತ್ತರ ಪದವಿ ಧಾರವಾಡ ವಿ.ವಿ. ದಿಂದ ಪಡೆದಿದ್ದರು.
ಗಂಗೊಳ್ಳಿ ಎಸ್.ವಿ ಪಿಯು ಕಾಲೇಜನಲ್ಲಿ ಉಪನ್ಯಾಸಕರಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಭಾಷಣಕಾರರಾಗಿ, ನಾಟಕ ನಿರ್ದೇಶಕರಾಗಿಯೂ ಅವರು ಗುರುತಿಸಿಕೊ೦ಡಿದ್ದರು.
ಇಲ್ಲಿಯವರೆಗೆ 10ಕ್ಕೂ ಹೆಚ್ಚುಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಪ್ರಮುಖವಾದವುಗಳು ಅಪ್ರಮೇಯ, ಅನಾಮಿಕ, ಅನಿಮಿಷ, ಅರಿವಿನ ಆನ೦ದ, ಸಂಜೆಗತ್ತಲಲ್ಲಿ ಬಕುಳವೃಕ್ಷ, ಕಲ್ಪನೆಯ ಕಡಲು, ಹಳೆ ತಲೆಮಾರಿನವರು ಮೊದಲಾ ದವು. 2023ರಲ್ಲಿ ಗಂಗೊಳ್ಳಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅವರು ಆಕಾಶವಾಣಿ ಚಿಂತನ ಸಂಪನ್ಮೂಲ ವ್ಯಕ್ತಿಯಾಗಿದ್ದರು, ಮೈಲಾರೇಶ್ವರ ಯುವಕ ಸಂಘದಲ್ಲಿ ಸಕ್ರಿಯರಾಗಿ, ನಾಟಕ ನಿರ್ದೇಶನ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು. ಅವರೊಬ್ಬ ಉತ್ತಮ ವಾಗ್ಮಿಯಾಗಿದ್ದು, ಅವರ ಮಾತು ತುಂಬ ಆಕರ್ಷಣವಾಗಿದ್ದು, ಅವರ ಕಂಠ ಕಂಚಿನ ಕಂಠವಾಗಿತ್ತು. ಅಭಿನಂದನ ಪತ್ರ, ಅಭಿನಂದನ ಭಾಷಣ ಮಾಡುವಲ್ಲಿ ಅವರು ಎತ್ತಿದ ಕೈ. ಅವರು ಕುಂದಾಪುರ ಸಾಂಸ್ಕೃತಿಕ ರಾಯಭಾರಿ ಆಗಿದ್ದರು ಎಂದರೆ ತಪ್ಪಗಲಾರದು.
ಅವರು ಪತ್ನಿ ಕುಸುಮಾ ಕಾರಂತ ಮತ್ತು ಪುತ್ರಿ ವೀಣಾ ಕಾದಂಬರಿ, ನೆಂಟರು, ಆಪ್ತರು, ಅಪಾರ ಶಿಸ್ಯ ವ್ರಂದದವರನ್ನುಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನದಿಂದ ಸಾಹಿತ್ಯ ಲೋಕಕ್ಕೆ ಮತ್ತು ಸಾಂಸ್ಕ್ರತಿಕ ತುಂಬಲಾರದ ನಶ್ಟ ಉಂಟಾಗಿದೆ.
ಕಾರಂತರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಸ ಕಿರಣ್ ಕುಮಾರ್ ಕೊಡ್ಲಿಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,, ಹಾಗೂ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ 7ರಿಂದ 8.30 ತನಕ ಕುಂದಾಪುರ ಭಗವಾನ್ ಬಿಲ್ಡಿಂಗ್ ರಸ್ತೆಯ ಮನೆಯಲ್ಲಿ ,ನಂತರ ಬೆಳಿಗ್ಗೆ 10.30ರ ತನಕ ಗುಜ್ಜಾಡಿ ಮನೆಯಲ್ಲಿ ಇಡುತ್ತಾರೆಂದು ತಿಳಿಸಿದ್ದಾರೆ.
ಜನನುಡಿ ಸುದ್ದಿ ಸಂಸ್ಥೆ ಕೂಡ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ ಮತ್ತು ಅವರಿಗೆ ಗೌರವ ಪೂರ್ವಕ ಶ್ರದಾಂಜಲಿ ಅರ್ಪಿಸುತ್ತದೆ.

