

(ಚಿತ್ರ ಸಾಂದಾರ್ಭಿಕ)
ಕುಂದಾಪುರ; ಚಲಿಸುತ್ತಿದ್ದ ಬೈಕಿನ ಮೇಲೆ ಚಿರತೆಯೊಂದು ನಡೆಸಿದ ಪರಿಣಾಮ ಬೈಕ್ ಆಯತಪ್ಪಿ ರಸ್ತೆಗೆ ಉರುಳಿಬಿದ್ದು ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕೋಟೇಶ್ವರ ಸಮೀಪ ಕಟ್ಕೆರೆಯಲ್ಲಿ ಅ. 4ರಂದು ರಾತ್ರಿ ಸಂಭವಿಸಿದೆ.ಕೋಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುಂದಾಪುರ ಗಾಯಗೊಂಡವರು. ಅವರು ಕಾರ್ಯ ನಿಮಿತ್ತ ತೆರಳಿ ಹೊರಗೆ ಹೋಗಿದ್ದವರು ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದಾಗ ರಸ್ತೆ ಅಂಚಿನಿಂದ ಬೈಕ್ ಮೇಲೆ ಏಕಾಏಕಿ ಚಿರತೆ ದಾಳಿ ಮಾಡಿತು. ಪ್ರವೀಣ್ ಬೈಕನ್ನು ನಿಯಂತ್ರಿಸಲು ಯತ್ನಿಸಿದರೂ ಸಾಧ್ಯವಾಗದೆ ರಸ್ತೆಗೆ ಉರುಳಿತು. ಚಿರತೆ ಹತ್ತಿರದ ಕಾಡು ಸೇರಿದೆ. ಗಂಭೀರ ಗಾಯಗೊಂಡಿರುವ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಹೆದ್ದಾರಿಯಲ್ಲಿ ಕಾಡುಪ್ರಾಣಿ ಗಳಿಂದ ಎದುರಾಗುವ ಸಮಸ್ಯೆಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲಿಗೆ ಸಮೀಪ ಅಸೋಡು ಹಾಗೂ ಕಾಳಾವರದ ಕಕ್ಕೇರಿ ಪರಿಸರದಲ್ಲಿ ಚಿರತೆ ಸಂಚರಾದಿಂದ ಆ ಭಾಗದ ನಿವಾಸಿಗಳಲ್ಲಿ ಇನ್ನಷ್ಟು ಆತಂಕ ಉಂಟುಮಾಡಿದೆ.
ಕಕ್ಕೇರಿ ನಿವಾಸಿ ಚಂದ್ರಶೇಖರ ನಾವಡ ಅವರ ಮನೆಯ ಹಾಡಿಯಲ್ಲಿ ಹಗಲು ಹೊತ್ತಿನಲ್ಲಿ ಚಿರತೆ ಸಂಚರಿಸುವುದನ್ನು ಅವರು ಕಂಡಿದ್ದು, ಕಳೆದ ಸುಮಾರು ದಿನಗಳ ಹಿಂದೆ ಕಾಳಾವರ ಸಮೀಪದ ಓಸ್ವಲ್ಡ್ ಕರ್ವಾಲ್ಲೊ ಇವರ ತೋಟದ ಹಟ್ಟಿಯಲ್ಲಿದ್ದ ಕರುವನ್ನು ಈ ಚಿರತೆ ಅರ್ದ ತಿಂದು ಮುಗಿಸಿದೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಪಂದಿಸಿದ ಇಲಾಖೆ ಆ ಭಾಗದಲ್ಲಿ ಚಿರತೆ ಹಿಡಿಯಲು ಬೋನ್ ವ್ಯವಸ್ಥೆ ಮಾಡಲಾಗಿದೆ, ಎಂದು ತಿಳಿದು ಬಂದಿದೆ.

