

ಉಡುಪಿ; ಜನಸಂಖ್ಯಾ ಸ್ಫೋಟದಂತೆ ಅನೇಕ ಸಮಸ್ಯೆ ಎದುರಿಸುತ್ತಿರುವ ಭಾರತದಲ್ಲೂ ಮಾದಕ ವಸ್ತುಗಳ ಹಾವಳಿ ಕಳವಳ ಉಂಟುಮಾಡುತ್ತಿದೆ. ಡ್ರಗ್ಸ್ ಚಟಕ್ಕೆ ಅಂಟಿದವರನ್ನು ಸಾಮಾನ್ಯ ಮನುಷ್ಯರಂತೆ ಮಾಡುವುದು ಅಷ್ಟು ಸುಲಭವಲ್ಲ. ಈ ಅನಿಷ್ಟ ಅಭ್ಯಾಸ ಚೆನ್ನಾಗಿ ಬೇರೂರಿದ ಮೇಲೆ ಕ್ಯಾನ್ಸರನ್ನು ಸಂಪೂರ್ಣವಾಗಿ ವಾಸಿ ಮಾಡುವುದು ಎಷ್ಟು ಕಷ್ಟವೋ ಡ್ರಗ್ಸ್ ವ್ಯಸನವನ್ನು ಸರಿಪಡಿಸುವುದು ಅಷ್ಟೇ ಕಷ್ಟ ಎಂದು ರೊ| ಗುರುರಾಜ ಕೋತ್ವಾಲ್ ಅವರು ಅಭಿಪ್ರಾಯಪಟ್ಟರು.ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ, ರೋಟರಿ ಕ್ಲಬ್ ಕುಂದಾಪುರ, ಸನ್ರೈಸ್ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ರಾಷ್ಟಿçÃಯ ಸೇವಾ ಯೋಜನೆ ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ “ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಮಾಹಿತಿ ಶಿಬಿರ” ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಅನಿತಾ ನರೇಂದ್ರ ಕುಮಾರ್, ಜೇಸಿಐ ತರಬೇತಿದಾರರು ಹಾಗೂ ಸುಜ್ಞಾನ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಇವರು ಮಾತನಾಡಿ ಆಫೀಮು, ಗಾಂಜ, ಕೊಕೇನ್ ಮುಂತಾದ ವಸ್ತುಗಳನ್ನು ಅತೀ ಚಿಕ್ಕ ವಯಸ್ಸಿನಲ್ಲಿ ಬಳಸುತ್ತಾ ತಮ್ಮ ಅಮ್ಯೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವುದು ನಮ್ಮ ದೇಶದ ದೌರ್ಭಾಗ್ಯ. ಮಾದಕ ವಸ್ತುಗಳು ನಮ್ಮನ್ನು ಅಪೋಶನಗೈಯುವ ಮಟ್ಟಿಗೆ ಬೆಳೆದುಬಿಟ್ಟಿವೆ. ಅವುಗಳ ಕದಂಬ ಬಾಹುಗಳಿಂದ ನಾವು ಹೊರಬರಬೇಕಾಗಿದೆ ಎಂದು ತಿಳಿಸಿ, ಡ್ರಗ್ಸ್ ಚಟದಿಂದ ದೂರ ಮಾಡಲು ಮೊದಲು ಒಳ್ಳೆಯ ಅಭ್ಯಾಸಗಳು ವಿದ್ಯಾರ್ಥಿ ದೆಸೆಯಿಂದಲೇ ಕಲಿತಾಗ ಮಾತ್ರ ಯಾವುದೇ ಚಟಕ್ಕೆ ಬಲಿಯಾಗಲು ಸಾಧ್ಯವಿಲ್ಲ ಎಂದರು. ಭಾರತದ ಭವಿಷ್ಯ ನಿಂತಿರುವುದೇ ಯುವ ಶಕ್ತಿಯ ಮೇಲೆ. ಅಲ್ಲದೇ ಪ್ರಪಂಚ ಎನ್ನುವ ಹೂಗಿಡದಿಂದ ನಾಳೆಯ ಅರಳುವಮೊಗ್ಗನ್ನು ಮಾತ್ರ ತೋಟಗಾರರಂತೆ ಬಳಸಿಕೊಳ್ಳಬೇಕೇ ಹೊರತು ಇದ್ದಿಲು ಮಾಡುವವನ ಹಾಗೆ ಬುಡಕ್ಕೆ ಪೆಟ್ಟು ಹಾಕಬಾರದು ಎಂದು ಕರೆ ನೀಡಿದರು.
ಸಭಾಧ್ಯಕ್ಷತೆಯನ್ನು ಚಂದ್ರಶೇಖರ ಶೆಟ್ಟಿ, ಉಪಪ್ರಾಂಶುಪಾಲರು, ಪ್ರೌಢ ಶಾಲಾ ವಿಭಾಗ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇವರು ನಿರ್ವಹಿಸಿ ಬಹುಪಾಲು ಡ್ರಗ್ಸ್ ವ್ಯಸನಿಯವರಲ್ಲಿ ಒಂದಲ್ಲ ಒಂದು ರೀತಿಯ ವ್ಯಕ್ತಿತ್ವ ಅಭಾವ ಮತ್ತು ತನ್ನ ಆಲೋಚನೆಗಳ ಮೇಲೆ ಹತೋಟಿ ಕಳೆದುಕೊಂಡು ಅದು ಹಿಂಸಾಚಾರಕ್ಕೆ ಎಡೆಮಾಡಿಕೊಡುತ್ತದೆ ಎಂದು ಎಚ್ಚರಿಸಿದರು. ಅಲ್ಲದೇ ಮಾದಕ ದ್ರವ್ಯ ವ್ಯಸನದ ವಿರುದ್ಧ ಪ್ರತಿಜ್ಞೆ ಭೋದಿಸಿದರು.
ವೇದಿಕೆಯಲ್ಲಿ ರೊ| ಭವಾನಿ ಶಂಕರ್, ಕಾರ್ಯದರ್ಶಿ ರೋಟರಿ ಕ್ಲಬ್ ಕುಂದಾಪುರ ಸನ್ರೈಸ್, ದಿನೇಶ್ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೋಟೇಶ್ವರ ಉಪಸ್ಥಿತರಿದ್ದು, ರಾಷ್ಟಿçÃಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ರಮಾನಂದ ನಾಯಕ್ ಗಣ್ಯರನ್ನು ಸ್ವಾಗತಿಸಿ, ಪೂಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕು| ಧನ್ಯ ಬೆಳ್ಮಣ್ ನಿರೂಪಿಸಿ, ರಮೇಶ್ ವಕ್ವಾಡಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಹಾಗೂ ಸಹ ಸಿಬ್ಬಂದಿಗಳು ಮತ್ತು ರಾಷ್ಟಿçÃಯ ಸೇವಾ ಯೋಜನೆಯ ಸುಮಾರು 130 ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು.

