

ಕುಂದಾಪುರ, ಮಾ.13; ಹಂಗಳೂರು ಪಿಯುಸ್ ನಗರ ಚರ್ಚಿನ ಸಿಲ್ವರ್ ಜುಬಿಲಿ ನವೀಕ್ರತ ಸುಸಜ್ಜಿತ ಹವಾನಿಯಂತ್ರಿತ ಸಭಾಭವನ ಮಾರ್ಚ್ 12 ರಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ.ಜೆರಾಲ್ಡ್ ಐಸಾಕ್ ಲೋಬೊ ರಿಬ್ಬನ್ ಕಟ್ ಮಾಡಿ ಆಶಿರ್ವಚನ ಮಾಡಿ ಲೋಕಾರ್ಪಣೆ ಮಾಡಿದರು.
ಲೋಕಾರ್ಪಣೆ ಮಾಡಿದ ಅವರು ‘ಈ ಭವ್ಯ ಸುಸಜ್ಜಿತ ಸಭಾಭವನವು ಪಿಯುಸ್ ನಗರ ಚರ್ಚ್ ಕುಟುಂಬಿಕರ ಪರಿಶ್ರಮದಿಂದ ಆದ್ಭುತವಾಗಿ ರೂಪುಗೊಂಡಿದೆ, ಇದು ನಮ್ಮದು ಎಂಬ ಭಾವದಿಂದ ಪ್ರತಿಯೊಬ್ಬರು ಶ್ರಮವಹಿಸಿದರ ಪರಿಣಾಮವಾಗಿದೆ. ಮುಂದಿನ 25-50 ವರ್ಷಗಳ ವರೆಗೆ ಈ ಸಭಾಂಗಣ ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ, ಇಂದಿನ ಕಾಲದಲ್ಲಿ ಇಂತಹ ಸಂಭಾಂಗಣಗಳ ಅಗತ್ಯವಿದೆ, ನಮ್ಮ ಉಡುಪಿ ಧರ್ಮಪ್ರಾಂತ್ಯದಲ್ಲಿ ಚರ್ಚ್ ವತಿಯಿಂದ ರೂಪುಗೊಂಡಿರುವ ಇದು ನಾಲ್ಕನೇಯ ಹವಾನಿಯಂತ್ರಿತ ಸಭಾಂಗಣವಾಗಿದೆ ‘ ಎಂದು ಅವರು ತಿಳಿಸಿದರು. ‘ಸುಂದರ ಚರ್ಚ್ನ ಎದುರು ಸಣ್ಣ ಸಭಾಂಗಣವಿತ್ತು ಅದು ಪಾಳು ಬಿದ್ದಂತೆ ಇತ್ತು, 37 ವರ್ಷದ ಹಳೆ ಕಟ್ಟಡವಾಗಿತ್ತು. ನಾನೇ ಮೊದಲು ಸಲಹೆ ನೀಡಿದ್ದೆ, ಇದನ್ನು ನವೀಕರಣಗ್ಳಿಸಿ ಎಂದು, ಅಂದು ಧರ್ಮಗುರುಗಳು ಆಯ್ತು ಮಾದುವ ಅಂತಾ ಭರವಸೆ ನೀಡಿರಲಿಲ್ಲ, ನಂತರ್ ಧರ್ಮಕೇಂದ್ರದವರು ಇದನ್ನು ನವೀಕರಣ ಗೊಳಿಸುವುದಾಗಿ ನನ್ನ ಹತ್ತಿರ ಅನುಮತಿ ಕೇಳಿದ್ದರು, ನಾನು ಸಂತೋಷದಿಂದ ಒಪ್ಪಿ ಕಾಲಕಾಲಕ್ಕೆ ಸಲಹೆ ನೀಡಿ, ಭೇಟಿ ಮಾಡಿ ವಿಕೀಸುತಿದ್ದೆ. ಚರ್ಚ್ ಕುಟುಂಬದ ಸಂಪೂರ್ಣ ಸಹಕಾರದೊಂದಿಗೆ ಬಳಿಕ ಸಭಾಂಗಣ ಸಂಪೂರ್ಣ ಬದಲಾವಣೆಗೊಂಡು ಹವಾನಿಯಂತ್ರಿತ ವಾಗಿ ನವೀಕರಣಗೊಂಡಿದೆ ಎಂದರು. ಮುಖ್ಯ ಸಭಾಂಗಣ, ಮಿನಿ ಹಾಲ್, ಭೋಜನ ಶಾಲೆ, ಗ್ರೀನ್ರೂಮ್, ಪಾರ್ಕಿಂಗ್, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ, ಅತ್ಯಾಧುನಿಕ ಶೌಚಾಲಯ ಒಳಗೊಂಡಿದೆ. ಗುಡುಗು ಸಿಡಿಲು ನಿಯಂತ್ರಕ ಮಾಪನ ಕೂಡ ಅಳವಡಿಸಲಾಗಿದೆ. ಸಭಾಂಗಣದ ಸೊಭಗು ಮತ್ತು ಭವ್ಯತೆಗೆ ಚರ್ಚ್ನ ಭಕ್ತಾಧಿಗಳ ಪೂರ್ಣ ಸಹಕಾರ ಇದ್ದವರು ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ್ದಾರೆ ಬೇರೆಯವರು ತಮ್ಮ ಶಕ್ತಿಗೆ ಅನುಸಾರವಾಗಿ ದಾನ ನೀಡಿದ್ದಾರೆ, ಅವರೆಲ್ಲದವರ ಸಹಕಾರ ಅತ್ಯಮೂಲ್ಯವಾಗಿದ್ದು, ಈ ಸಭಾಂಗಣ ಚರ್ಚ್ ಕುಟುಂಬಗಳ ಏಕತೆಯ ಸೌಧವಾಗಿದೆ’ ಎಂದು ತಿಳಿಸಿದರು
ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೇಮ್ಸ್ ಡಿಮೆಲ್ಲೊ ಈ ಸಭಾಭವನ ಕಾರ್ಯರೂಪಕ್ಕೆ ತರಲು ತುಂಬಾ ಶ್ರಮಿಸಿದ್ದಾರೆ ಇವರ ನಾಯಕತ್ವ ಮತ್ತು ಸ್ನೇಹಪರ ಗುಣದಿಂದಾಗಿ ಜಿಲ್ಲೆಯಲ್ಲೇ ಅತ್ಯಂತ ವೈಭವದ ಸಭಾಂಗಣವಾಗಿದೆ ನಿರ್ಮಾಣಾವಾಗಿದೆ ಎಂದು ವಂ। ಡಾ.ಜೆರಾಲ್ಡ್ ಲೋಬೊ ಅಭಿಪ್ರಾಯಪಟ್ಟರು ಹಾಗೇ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೇಮ್ಸ್ ಡಿಮೆಲ್ಲೊ ಮಾತನಾಡಿ, ಬಿಷಪ್ ಅವರ ಆಶೀರ್ವಾದ, ಚರ್ಚ್ನ ಧರ್ಮಗುರುಗಳ ಅವಿರತ ಪರಿಶ್ರಮ, ಧರ್ಮಕೇಂದ್ರದವರ ಉದಾರ ದಾನ ಸಲಹೆಯಿಂದ ಈ ಸಭಾಂಗಣ ತಲೆ ಎತ್ತಿದೆ ಎಂದು ಹೇಳುತ್ತಾ, ಸಭಾಂಗಣದ ವೈಶಿಷ್ಟತೆಗಳನ್ನು ಜನರ ಮುಂದಿಟ್ಟರು, ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ಪೌಲ್. ರೇಗೊ “ಇಂದಿನ ದಿನಗಳಲ್ಲಿ ಇಂತಹ ಸುಜ್ಜಿತ, ಹವಾನಿಯಂತ್ರಿತ ಸಭಾಂಗಣದ ಅವಶ್ಯಕತೆ ಖಂಡಿತವಾಗಿ ಇದೆ, ಪಿಯುಸ್ ನಗರ ಚರ್ಚ್ ಕುಟುಂಬ ಅಭಿನಂದನೆ ಅರ್ಹರು” ಎಂದು ಶುಭ ಕೋರಿದರು.
ಚರ್ಚ್ನ ಧರ್ಮಗುರು ವಂ।ಅಲ್ಬರ್ಟ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದು “ಮೊದಮೊದಲು ಈ ಸಭಾಂಗಣ ಆಗುತ್ತದೊ, ಆಗುವುದಿಲ್ಲವೋ ಎಂದು ಭಯವಿತ್ತು, ಆದರೆ ನಮ್ಮ ಚರ್ಚ್ ಕುಟುಂಬದ ಸಹಕಾರದಿಂದ ಈ ಭವ್ಯ ಸಭಾಂಗಣ ರೂಪುಗೊಂಡಿದೆ, ಹಲವು ತೊಡಕುಗಳು ಬಂದು, ಎಲ್ಲವನ್ನು ನಿಭಾಯಿಸಿ, ಹಣದ ಕೊರತೆ ಬಂದಾಗ, ಪುನಹ ಚರ್ಚ್ ಕುಟುಂಬಗಳಲ್ಲಿ ವಿನಂತಿಸಿಕೊಂಡಾಗ ಎಲ್ಲರ ಸಹಕಾರದಿಂದ ಎಲ್ಲವೂ ಸರಿಯಾಯ್ತು, ಗರ್ಭಿಣಿಯು ಹೆರಿಗೆಯ ಅಪಾರ ನೋವನ್ನು ಸಹಿಸಿಕೊಂಡು ಮಗು ಹೆತ್ತು ತನ್ನ ಮಡಿಲಲ್ಲಿ ಸೇರಿಕೊಂಡಾಗ ಹೇಗೆ ಸಂತೋಷವಾಗುತ್ತೊ, ಹಾಗೆ ಇವತ್ತು ನನಗೆ ಸಂತೋಷವಾಗಿದೆ’ ಎಂದು ತಿಳಿಸಿದರು.
ವೇದಿಕೆಯಲ್ಲಿ ಸೈಂಟ್ ಅನ್ನಾ ಕಾನ್ವೆಂಟ್ ಮುಖ್ಯಸ್ಥೆ ಧರ್ಮಭಗಿನಿ ಸಿಸ್ಟರ್ ವೆರೊನಿಕಾ ಮಿನೆಜಸ್ ಉಪಸ್ಥಿತರಿದ್ದರು. ಸಭಾಂಗಣದ ನವೀಕರಣಕ್ಕೆ ಸಹಕರಿಸಿದ ದಾನಿಗಳನ್ನು, ಸಭಾಂಗಣ ನಿರ್ಮಿಸುವಲ್ಲಿ ದುಡಿದ ಸಹ ಕಂಟ್ರ್ಯಾಕ್ಟರ್ ಗಳನ್ನು, ನವೀಕರಣಕ್ಕಾಗಿ ದುಡಿದ ಚರ್ಚ್ನ ನಾನಾ ಆಯೋಗಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಸಭಾಂಗಣ ನಿರ್ಮಿಸುವಲ್ಲಿ ನಾಯಕತ್ವ ವಹಿಸಿದ ಚರ್ಚ್ನ ಧರ್ಮಗುರು ವಂ।ಅಲ್ಬರ್ಟ್ ಕ್ರಾಸ್ತಾರವರನ್ನು ಧರ್ಮಪ್ರಾಂತ್ಯದ ವತಿಯಿಂದ ಗೌರವಿಸ ಲಾಯಿತು. ಚರ್ಚ್ನ ಸರ್ವ ಆಯೋಗಗಳ ಸಂಚಾಲಕಿ ಪ್ರಮೀಳಾ.ಡೆಸಾ ಸ್ವಾಗತಿಸಿದರು. ಅಕ್ಸಾಂಡರ್ ಲೂವಿಸ್ ಮತ್ತು ಜ್ಯೋತಿ ಡಿ. ಆಲ್ಮೇಡ, ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಮಂಡಳಿ ಕಾರ್ಯದರ್ಶಿ ರೇಷ್ಮಾಡಿಸೋಜ ವಂದಿಸಿದರು.
































































































