

ಶ್ರೀನಿವಾಸಪುರ : ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡದೇ ಅಧ್ಯಯನ ಮಾಡಬೇಕು .ಅಧ್ಯಯನವನ್ನು ಇಷ್ಟಪಟ್ಟು ಮಾಡಬೇಕು. ಯಾವುದೇ ಕೆಲಸವನ್ನು ಇಷ್ಟವಿಲ್ಲದೇ ಮಾಡಿದರೆ ಅದು ಫಲನೀಡುವುದಿಲ್ಲ. ಹಾಗಾಗಿ ಅಧ್ಯಯನದಲ್ಲಿ ಶ್ರದ್ಧೆ, ಛಲ, ಸಮಯಪಾಲನೆ ಸೇರಿದಂತೆ ಶಿಸ್ತುಬದ್ದ ಜೀವನ ನಡೆಸುವ ಮೂಲಕ ಯಶಸ್ಸುಗಳಿಸಬೇಕು ಎಂದು ದಾನಿ ಕಾಣಿಪಾಕಂ ದೇವಾಲಯದ ಉಪಪ್ರಧಾನ ಅರ್ಚಕ ಎಸ್.ಎಸ್.ಗಣೇಶ್ ಗುರುಕುಲ್ ಹೇಳಿದರು.
ತಾಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಡಶಾಲೆಯ 136 ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಲೇಖನಿ ಸಾಮಾಗ್ರಿಗಳನ್ನು , ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ನಾನು ವಿದ್ಯಾಬ್ಯಾಸ ಮಾಡಿರುವ ಶಾಲೆಗೆ ನನ್ನಿಂದಾಗುವ ಸಹಾಯ ಹಸ್ತವನ್ನು ನೀಡಲಾಗುತ್ತಿದೆ ಎನ್ನುತ್ತಾ, ಮುಂದಿನ ದಿನಗಳಲ್ಲಿ ಶಾಲಾಭಿವೃದ್ದಿಗೆ ಹಾಗು ರಂಗಮಂದಿರದ ನಿರ್ಮಾಣಕ್ಕೆ ಸಹಾಯ ಹಸ್ತವನ್ನು ನೀಡುವುದಾಗಿ ಭರವಸೆ ನೀಡಿದರು.
ದಾನಿ ಪ್ರಧಾನ ಅರ್ಚಕ ಎಸ್.ಎಸ್.ಬಾಲಸುಬ್ರಮಣ್ಯಂ , ದಾನಿ ಕುಟುಂಬದವರಾದ ಸಿ.ವಸಂತ, ಶಾಲೆಯ ಮುಖ್ಯ ಶಿಕ್ಷಕಿ ಕೆ.ವಿ.ಶಾರದ , ಎಸ್ಡಿಎಂಸಿ ಅಧ್ಯಕ್ಷ ಅಪ್ಪಿರೆಡ್ಡಿ, ಉಪಾಧ್ಯಕ್ಷ ನರಸಿಂಹಪ್ಪ, ಶಿಕ್ಷಕ ಬಾಲಕೃಷ್ಣ , ಗ್ರಾಮಸ್ಥರು ಇದ್ದರು.

