HOLY ROSARY CHURCH, KUNDAPUR – 450 th JUBILEE SOUVENIR 2021

ಮರವಂತೆ ಬೀಚ್ : ಸಮುದ್ರ ಪಾಲಾದ ಯುವಕನ ಶವ ಪತ್ತೆ


ಕುಂದಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್‌ನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಸಮುದ್ರ ಪಾಲಾದ ಯುವಕನ ಶವ ಬುಧವಾರ ಬೆಳಿಗ್ಗೆ ಕಂಡು ಬಂದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕು ಮೇವಂಡಿ ಗ್ರಾಮದ 23 ವರ್ಷ ಪ್ರಾಯದ ಪೀರ್ ನದಾಫ್ ಮೃತ ಯುವಕ. ಮೃತ ದೇಹವು ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆ ಬಳಿ ಪತ್ತೆಯಾಗಿದೆ.
ನದಾಫ್ ಕಳೆದ ನಾಲ್ಕು ವರ್ಷಗಳಿಂದ ಊರಿನ ತನ್ನ ಸ್ನೇಹಿತರ ಜತೆ ಪಡುಬಿದ್ರಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ನದಾಫ್ ಸಹಿತ ಮೂವರು ಸ್ನೇಹಿತರು ಟ್ಯಾ0ಕರ್ ಒಂದರಲ್ಲಿ ಊರಿಗೆ ಹೊರಟಿದ್ದರು.ಮರವಂತೆ ಬೀಚ್‌ಗೆ ಬಳಿ ಬಂದಾಗ ಸೆಲ್ಫಿ ತೆಗೆಯುವ ಹುಚ್ಚಿನಿಂದ ಸಮುದ್ರಕ್ಕಿಳಿದಿದ್ದ ವೇಳೆ ನದಾಫ್ ಸಮುದ್ರ ಪಾಲಾಗಿದ್ದ ಸ್ಥಳೀಯರು ಈಜುಗಾರ ಜತೆ ಸೇರಿ ಅವನ ಪತ್ತೆಗೆ ಸಾಕಷ್ಟು ಶ್ರಮಿಸಿದರೂ ಪ್ರತಿ ಕೂಲ ಹವಾಮಾನದಿಂದಾಗಿ ಸಾಧ್ಯವಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಅಂಬಿಕಾ ಖಾರ್ವಿ ಮಹಿಳೆ ಮನೆಯ ಬಳಿ ಸಮುದ್ರದ ಹತ್ತಿರ ಹೋಗುತ್ತಿರುವಾಗ ಸಮುದ್ರದಲ್ಲಿ ತೇಲಾಡುತ್ತಿರುವ ಮೃತ ದೇಹ ನೋಡಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ಹಾಗೂ ಜೀವ ರಕ್ಷಕ ಈಜು ತಜ್ಞ ದಿನೇಶ್ ಖಾರ್ವಿ ತಂಡ, ಆಂಬ್ಯುಲೆನ್ಸ್ ಡ್ರೈವರ್ ಮೃತ ದೇಹವನ್ನು ನೀರಿನಿಂದ
ಮೇಲಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಕುಂದಾಪುರ ಸರಕಾರಿ ತಾಲೂಕು ಆಸ್ಪತ್ರೆಗೆ ರವನಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯ ಛಾಯಚಿತ್ರಕಾರ ಭಾರತ್ ಸ್ಟುಡೀಯೊ ಮಾಲೀಕ ರೊಬರ್ಟ್ ಡಿಸೋಜಾ ನಿಧನ (78)


ಕುಂದಾಪುರ, ಜು.19: ಕುಂದಾಪುರದ ಹಿರಿಯ ಛಾಯಚಿತ್ರಕಾರ ಭಾರತ್ ಸ್ಟುಡೀಯೊ ಮಾಲೀಕ ರೊಬರ್ಟ್ ಡಿಸೋಜಾ (78) ಅಲ್ಪ ಕಾಲದ ಅಸ್ವಸ್ಥೆಯಿಂದ ಇಂದು ಜು.19 ರಂದು ಸ್ವಗ್ರಹದಲ್ಲಿ ನಿಧನದಾರು. ಇವರು ಕುಂದಾಪುರ ತಾಲೂಕಿನ ಛಾಯಚಿತ್ರಕಾರ ಸಂಘದ ಗೌರವ ಅಧ್ಯಕ್ಷರಾಗಿದ್ದರು. ಇವರು ಪತ್ನಿ ಡೆಲ್ಫಿನ್, ಮೂವರು ಪುತ್ರರರಾದ ವೆಸ್ಲಿ, ವೆನಿಲ್ (ಧರ್ಮಗುರುಗಳು) ವೆಲ್ಚನ್ ಸೊಸೆಯಂದಿರಾದ ಡೋರಿನ್, ರೊಸಿ, ಮೊಮ್ಮಕ್ಕಳಾದ ಡೆರ್ವಿನ್,ಇಲಾಯ್ನೆ ಮತ್ತು ಅವೌರರಾ ಇವರನ್ನು ಮತ್ತು ಬಂಧುಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ೪ ಗಂಟೆಗೆ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ನಡೆಯಲಿದೆ

Passed Away Mr. Robert D’souza (Bharath Studio) (78) The funeral will be held on 20-7-23 evening

Passed Away ; Mr. Robert D’souza (Bharath Studio) (78)

Birth: 23-04-1945

Marriage: 13-05-1975

Death: 19-07-23

H/o Delphine D’souza

F/o Wesli/ Dorin, Fr. Venil, Velchan/ Rosie

Grandchildren: Derwin, Elaine, Aurora

Funeral cortège leaves the residence on 20-7-23 at 3.30 pm to Holy Rosary Church, Kundapur for mass at 4 pm.

Contact : 9008519384

ಯಕ್ಷಗಾನಕ್ಕೂ ಕುಂದಾಪ್ರ ಕನ್ನಡಕ್ಕೂ ಅವಿನಾಭಾವ ಸಂಬಂಧ


ಬೀಜಾಡಿ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಹಿತಿ ಎ.ಎಸ್ .ಎನ್ ಹೆಬ್ಬಾರ್
ಬೀಜಾಡಿ: ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ, ಪ್ರೀತಿ ಇರಬೇಕು.ಯಕ್ಷಗಾನಕ್ಕೂ ಕುಂದಾಪ್ರ ಕನ್ನಡಕ್ಕೂ ಅವಿನಾಭಾವ ಸಂಬಂಧವಿದೆ. ಯಕ್ಷಗಾನದ ಹಾಸ್ಯ ಕಲಾವಿದರು ಹಿಂದಿನಿಂದಲೂ ಕುಂದಾಪ್ರ ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಅವರು ಸೋಮವಾರ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್,
ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಇವರ ಸಹಯೋಗದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ 4ನೇ ವರ್ಷ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಸಮಾರಂಭದಲ್ಲಿ ಆಶಯದ ಮಾತುಗಳನ್ನಾಡಿದರು.
ಕುಂದಾಪ್ರ ಕನ್ನಡ ಭಾಷೆಯ ಅಧ್ಯಯವಾಗಬೇಕು. ಈ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೇ ನಾವು ಅನುದಿನವು ಕುಂದಾಪ್ರ ಕನ್ನಡವನ್ನು ಮಾತನಾಡಬೇಕು ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಕೃಷಿಕ ಬೀಜಾಡಿ ನಾರಾಯಣ ಆಚಾರ್ ಅವರನ್ನು ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್ ಧಿಂಸಾಲ್,ಬೀಜಾಡಿ-ಗೋಪಾಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ನಾಗರಾಜ ಬಿ.ಜಿ ಭತ್ತ ಕುಟ್ಟುವ ಹಾಡನ್ನು ಹಾಡಿದರು. ರೋಟರಿ ಕುಂದಾಪುರ ರಿವರ್‍ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ ಮೊಗವೀರ, ಕಾರ್ಯದರ್ಶಿ ಗಿರೀಶ್ ಕೆ.ಎಸ್., ರೋಟರಿ ಕುಂದಾಪುರ ರಿವರ್‍ಸೈಡ್ ಕಾರ್ಯದರ್ಶಿ ಡಾ.ವಿಲಾಶ್‍ಕೃತಿಕ್ ಉಪಸ್ಥಿತರಿದ್ದರು. 4ನೇ ವರ್ಷದ ಕುಂದಾಪುರ ಕನ್ನಡ ದಿನಾಚರಣೆಯ ಅದೃಷ್ಟವಂತರಾಗಿ ಹರೀಶ್ ಮೊಗವೇರ, ಕುಂದಾಪ್ರ ಕನ್ನಡದ ಅತೀ ಹೆಚ್ಚು ದೈವ ದೇವರ ಹೆಸರನ್ನು ಹೇಳಿದ ಕೃಷ್ಣ ಗೋಳಿಬೆಟ್ಟು, ಕುಂದಾಪ್ರ ಭಾಗದಲ್ಲಿ ಆಚರಿಸುವ ಅತೀ ಹೆಚ್ಚು ಹಬ್ಬಗಳ ಹೆಸರನ್ನು ಹೇಳಿದ ಶಾರದಾ ಗಾಣಿಗ ಬಹುಮಾನ ಪಡೆದರು. ಅನುಪ್‍ಕುಮಾರ್ ಬಿ.ಆರ್ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಪಾಂಡುರಂಗ ವಂದಿಸಿದರು.

ನ್ಯಾಕ್ ಪೀರ್ ತಂಡವು ಜುಲೈ 14 ಮತ್ತು 15 ರಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಭೇಟಿ ನೀಡಿತು

ನ್ಯಾಕ್ ಪೀರ್ ತಂಡವು ಜುಲೈ 14 ಮತ್ತು 15 ರಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಭೇಟಿ ನೀಡಿತು. ತಂಡದ ಅಧ್ಯಕ್ಷರಾಗಿ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಅಶೋಕ್ ಬೊಯ್ಟಿ, ತಂಡದ ಸದಸ್ಯ ಸಂಯೋಜಕರಾಗಿ ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಶಹೀದ್ ರಸೂಲ್ ಮತ್ತು ಅಸ್ಸಾಂನ ಟನ್ಷುಕಿಯಾದ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಬಾದಲ್ ಕುಮಾರ್ ಸೇನ್ ಇದ್ದರು. ಸದಸ್ಯರನ್ನು ಸಂಸ್ಥೆಗೆ ಸ್ವಾಗತಿಸಲಾಯಿತು, ಅಲ್ಲಿ ಅವರಿಗೆ ಸಾಂಸ್ಥಿಕ ಮುಖ್ಯಾಂಶಗಳು ಮತ್ತು ವಿವಿಧ ಇಲಾಖೆಗಳಿಂದ ನ್ಯಾಕ್ ನ ಮೌಲ್ಯಮಾಪನ ಮಾನದಂಡಗಳಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಪ್ರಸ್ತುತಪಡಿಸಲಾಯಿತು.
ತಂಡವು ಕಾಲೇಜಿನ ಎಲ್ಲಾ ವಿಭಾಗಗಳ ಸೌಲಭ್ಯಗಳು, ಕ್ಯಾಂಪಸ್ ಮೂಲಸೌಕರ್ಯಗಳು, ಸಂಘಗಳಿಗೆ ಭೇಟಿ ನೀಡಿದರು. 14 ರಂದು ಸಂಜೆ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.

15ರಂದು ಕಾಲೇಜಿನಲ್ಲಿ ನ್ಯಾಕ್ ಪೀರ್ ತಂಡದವರು ನಿರ್ಗಮನ ಸಭೆ ನಡೆಸಿದರು.
ತಂಡದ ಸದಸ್ಯರು ತಮ್ಮ ಅವಲೋಕನಗಳ ಆಧಾರದ ಮೇಲೆ ಸಂಸ್ಥೆಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ವಿವರಿಸಿದರು. ಸುಧಾರಣೆಗೆ ಸಲಹೆಗಳನ್ನು ನೀಡಲಾಯಿತು.
ನಿರ್ಗಮನ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಕಾಲೇಜಿನ ನ್ಯಾಕ್ ಸಂಯೋಜಕರಾದ ಶಶಿಕಾಂತ್ ಹತ್ವಾರ್, ಐಕ್ಯೂಎಸಿ ಸಂಯೋಜಕರಾದ ಡಾ.ವಿಜಯಕುಮಾರ್ ಕೆ.ಎಂ. ಅವರು ಉಪಸ್ಥಿತರಿದ್ದರು

ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಅವರಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ದಾನ

ಕೋಲಾರ ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಸಮವಸ್ತ್ರ ನೀಡಿದರು.
ಕೋಲಾರ: ಪ್ರತಿಯೊಬ್ಬರೂ ಮಕ್ಕಳಲ್ಲಿ ದೇವರನ್ನು ಕಾಣಬೇಕು. ಅವರ ಶೈಕ್ಷಣಿಕ ಅಭಿವೃದ್ಧಿಗೆ ಕೈಲಾದ ನೆರವು ನೀಡಬೇಕು ಎಂದು ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೇಳಿದರು.
ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದುವ ಹೆಚ್ಚಿನ ಸಂಖ್ಯೆಯ ಮಕ್ಕಳು ಬಡ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರಿಗೆ ಸರ್ಕಾರದಿಂದ ಕೆಲವು ಸೌಲಭ್ಯಗಳು ದೊರೆಯುತ್ತವೆ. ಅವುಗಳ ಜತೆಗೆ ದಾನಿಗಳು ಕೈ ಜೋಡಿಸಿದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಾಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ವೆಂಕಟಶಿವಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಎಸ್.ಆರ್.ಧರ್ಮೇಶ್ ತಮ್ಮ ವೇತನದ ಸ್ವಲ್ಪ ಭಾಗವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿದ್ದಾರೆ. ಪ್ರತಿ ತಿಂಗಳೂ ರೂ.10 ಸಾವಿರ ಪಕ್ಕಕ್ಕಿಟ್ಟು ಮಕ್ಕಳ ಅಗತ್ಯಗಳನ್ನು ಖರೀದಿಸಿ ಕೊಡುತ್ತಿದ್ದಾರೆ. ಅವರ ಸಮಾಜ ಸೇವೆ ಹಾಗೂ ಬಡವರ ಬಗ್ಗೆ ಇರುವ ಕಳಕಳಿ ಸ್ತುತ್ಯಾರ್ಹ ಎಂದು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ, ಪುಸ್ತಕ ಓದಬೇಕು. ತಾವು ಓದಿದ ಶಾಲೆ, ಶಿಕ್ಷಕರು ಹಾಗೂ ಪೋಷಕರಿಗೆ ಒಳ್ಳೆ ಹೆಸರು ತರಬೇಕು. ದಾನಿಗಳು ನೀಡುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ವೆಂಕಟಶಿವಪ್ಪ, ಆರ್.ನಾರಾಯಣಪ್ಪ, ಶ್ರೀನಿವಾಸಪ್ಪ ಮುಖ್ಯ ಶಿಕ್ಷಕ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಗೋಪಾಲ್ ಶಿಕ್ಷಕಿ ಆರ್.ನಿಮಾಲ ಇದ್ದರು.

ಕೋಲಾರ : ಬಾಲ ಕಾರ್ಮಿಕ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡಲು ಜನ ಜಾಗೃತಿ ಕಾರ್ಯಕ್ರಮ

ಕೋಲಾರ : ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಜುಲೈ 17 , 2023 ರಿಂದ 24 , 2023 ರವರೆಗೆ ಆಟೋ ಪ್ರಚಾರ ಮೂಲಕ ಬಾಲ ಕಾರ್ಮಿಕ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡಲು ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಈ ಸಂಬಂಧ ಇಂದು ಅಕ್ರಂ ಪಾಷ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು , ಬಾಲಕಾರ್ಮಿಕ ಯೋಜನಾ ಸೊಸೈಟಿ , ಕೋಲಾರ ಜಿಲ್ಲೆ , ಕೋಲಾರ ಹಾಗೂ ಶ್ರೀಮತಿ ಪದ್ಮ ಬಸವಂತಪ್ಪ , ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ , ಜಿಲ್ಲಾ ಪಂಚಾಯಿತಿ , ಕೋಲಾರ ರವರು , ಜಿಲ್ಲಾಡಳಿತ ಭವನ , ಕೋಲಾರ ಇಲ್ಲಿ ಆಟೋ ಪ್ರಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು .

ಈ ಸಂದರ್ಭದಲ್ಲಿ ಶ್ರೀಮತಿ ಶಬಾನಾ ಅಜ್ಜಿ , ಮಾನ್ಯ ಕಾರ್ಮಿಕ ಅಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ , ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ , ಕೋಲಾರ ಜಿಲ್ಲೆ , ಕೋಲಾರ ಹಾಗೂ ಶ್ರೀಮತಿ ರಾಜೇಶ್ವರಿ , ಕಾರ್ಮಿಕ ನಿರೀಕ್ಷಕರು , ಕೋಲಾರ ವೃತ್ತ , ಕೋಲಾರ ರವರು ಹಾಗೂ ಸಿಬ್ಬಂದಿಯವರು ಹಾಜರಿದ್ದರು .

ಕಲ್ಲೂರು ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿದ್ದ ನವನಾಗ ದೇವತಾ ವಿಗ್ರಹಕ್ಕೆ ಮಂಡಲ ಪೂಜೆ

ಶ್ರೀನಿವಾಸಪುರ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಭಾನುವಾರ ನೂತನವಾಗಿ ಪ್ರತಿಷ್ಠಾಪಿಸಲಾಗಿದ್ದ ನವನಾಗ ದೇವತಾ ವಿಗ್ರಹಕ್ಕೆ ಮಂಡಲ ಪೂಜೆ ಏರ್ಪಡಿಸಲಾಗಿತ್ತು.
ಪೂಜಾ ಕಾರ್ಯಕ್ರಮದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನವನಾಗ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀನಿವಾಸಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ನಾಗ ದೇವತೆ ದರ್ಶನ ಪಡೆದರು.
ಗ್ರಾಮದ ಹಿರಿಯ ಬಚ್ಚಿರೆಡ್ಡಿ ಮಾತನಾಡಿ, ಗ್ರಾಮದ ಪುರಾತನ ಚೌಡೇಶ್ವರಿ ದೇವಾಲಯ ಪ್ರಸಿದ್ಧಿ ಪಡೆದಿದೆ. ಹಾಗೆಯೇ ನವನಾಗ ದೇವತೆ ದೇವಾಲಯವೂ ನಾಗರಿಕರ ಗಮನ ಸೆಳೆದಿದೆ. ಹೆಚ್ಚಿನ ಸಂಖ್ಯೆಯ ಜನರು ಬಂದು ದರ್ಶನ ಪಡೆದು ಹೋಗುತ್ತಾರೆ. ಗ್ರಾಮ ಒಂದು ಪುಣ್ಯಕ್ಷೇತ್ರವಾಗಿ ಪರಿಣಮಿಸಿದೆ. ಗ್ರಾಮದ ದೇವಾಲಯಗಳಲ್ಲಿ ಲೋಕಕಲ್ಯಾಣಾರ್ಥ ನಿಗದಿತ ಸಮಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ರಮೇಶ್ ಬಾಬು, ನಾರಾಯಣಸ್ವಾಮಿ, ಹರೀಶ್, ಲಕ್ಷ್ಮೀನಾರಾಯಣ್, ಕಿಶೋರ್ ಬಾಬು, ವಿಜಯ್ ಕುಮಾರ್, ರಾಜೇಶ್, ಹರೀಶ್ ಇದ್ದರು
.

ಸಂತ ಆಗ್ನೆಸ್ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರನ್ನು ಸನ್ಮಾನ ಮತ್ತು ಕಾರ್ಮೆಲ್ ಮಾತೆಯ ಹಬ್ಬದ ಆಚರಣೆ

ಮಂಗಳೂರು: ಶೈಕ್ಷಣಿಕ ಕೈಂಕರ್ಯದಲ್ಲಿ ಅಗಣಿತ ಜ್ಞಾನ ದೀವಿಗೆಯನ್ನು ಬೆಳಗಿಸಿದ ನಿವೃತ್ತ ಗುರುಗಳಿಗೆ ಸನ್ಮಾನಿಸುವ ಶುಭಗಳಿಗೆ ಸಂತ ಆಗ್ನೆಸ್ ಪ್ರೌಢಶಾಲೆಯಲ್ಲಿ ದಿನಾಂಕ 15-07-2023ರಂದು ಕಾರ್ಮೆಲ್ ಮಾತೆಯ ಹಬ್ಬದಂದು ನೆರವೇರಿತು. ಪ್ರಸ್ತಕ ವರ್ಷ ಅಪೋಸ್ತಲಿಕ್ ಕಾರ್ಮೆಲ್ ವಿದ್ಯಾಸಂಸ್ಥೆಯ ಸಂಸ್ಥಾಪಕಿಯಾಗಿರುವ ವಂದನೀಯ ಮದರ್ ವೆರೋನಿಕಾರವರ ಜನ್ಮದಿನದ ದ್ವಿಶತಮಾನೋತ್ಸವ. ಆ ಪ್ರಯುಕ್ತ ತ್ಯಾಗ ಮತ್ತು ಸಮರ್ಪಣಾ ಭಾವದಿಂದ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ 8 ಮಂದಿ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಗಿನಿ ಮರಿಯಾ ರೂಪ ಎ.ಸಿಯವರು ಉಪಸ್ಥಿತರಿದ್ದರು.

Honoring Retired Teachers and Non-Teachers and Feast of Our Lady of Carmel at Saint Agnes High School

On 15th Saturday, at 11.00 a. m the students of class 10 B of St. Agnes High School celebrated the feast of our Lady of Mount Carmel. On the occasion of the bicentennial birth anniversary of the venerable Mother Veronica of the Passion founder of the Apostolic Carmel Institution, the retired teachers of the school were honoured on the same day.

The celebration commenced with a prayer service focused on the virtues of the Blessed Vergin Mary which created a reflective atmosphere with a haven of spirituality.

The energetic semi classical welcome dance captured the camaraderie setting, the tone for the day’s celebration. One of the highlights was the skit on values of life especially for the teens. The students showcased importance of the ethics in the form of a fashion show.

The fusion dance performance captivated the gathering, seamlessly blending classical and hip-hop. .

The celebration also included the Miracle of the Scapular, the significant aspect of the devotion to Our Lady of Mount Carmel. Students depicted the miraculous intervention attributed to the scapular through a touching performance, bringing to life the story of Simon Stock and the spiritual protection associated with it..

On the same day, Dr. Sr. Maria Roopa A. C, Joint Secretary of St. Agnes Institutions felicitated the dedicated service and contributions of retired teachers, who had devoted their careers to educating generations .They were honored with a shawl , a memento,flowers and fruit. Mrs. Juliana Fernandes spoke a few words, reflecting on her teaching experience. The chief guest highlighted contributions of Mother Veronica, the founder of Apostolic Carmel .The felicitation of retired teachers in school served as a fitting tribute to their lifelong dedication and commitment to education the cultural program was compered by Melissa and Ganavi. Iral proposed the vote of thanks. The felicitation ceremony was compered by Mrs. Dimple Quadros and Tr. Prathima read the credentials of the retired teachers. The staff and support staff had delicious meal where in they had good time catching up each renewing old memories.