




ಅಂತರರಾಷ್ಟ್ರೀಯ ಒಲಿಂಪಿಯಾಡ್ನಲ್ಲಿ ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳ ಸುರಿಮಳೆ
ಎಸ್ಓಎಫ್ ವತಿಯಿಂದ ನಡೆಸಲಾದ ಗಣಿತ, ವಿಜ್ಞಾನ, ಇಂಗ್ಲಿಷ್, ಸಾಮಾನ್ಯ ಜ್ಞಾನ, ಹಿಂದಿ ಮತ್ತು ಕಂಪ್ಯೂಟರ್ ವಿಷಯಗಳ ಅಂತರರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ನ 252 ವಿದ್ಯಾರ್ಥಿಗಳು ಭಾಗವಹಿಸಿ, ಅದರಲ್ಲಿ 98 ಗೋಲ್ಡ್ ಮೆಡಲ್ಗಳನ್ನು ಗೆದ್ದು ಅಪೂರ್ವ ಸಾಧನೆ ಮೆರೆದಿದ್ದಾರೆ. ಈ ಸಾಧನೆ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣೆ ಮತ್ತು ಸಂಸ್ಥೆಯ ಶ್ರೇಷ್ಠ ಶಿಕ್ಷಣ ಪದ್ಧತಿಯ ಪ್ರತಿಬಿಂಬವಾಗಿದೆ.
ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ನಲ್ಲಿ ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಒಲಿಂಪಿಯಾಡ್ ಪರೀಕ್ಷೆಗಳಿಗಾಗಿ ವ್ಯವಸ್ಥಿತ ತರಬೇತಿ ನೀಡಲಾಗುತ್ತಿದ್ದು, ಅದರಿಂದಲೇ ಇಂತಹ ಅದ್ಭುತ ಫಲಿತಾಂಶಗಳು ಸಾಧ್ಯವಾಗಿವೆ. ವಿದ್ಯಾರ್ಥಿಗಳಲ್ಲಿನ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸುವಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ತಮಗೆ ತಾವು ಸಾಬೀತುಪಡಿಸಿಕೊಳ್ಳುವ ದಿಶೆಯಲ್ಲಿ ಈ ಫಲಿತಾಂಶ ಮಹತ್ವದ ಮೈಲಿಗಲ್ಲಾಗಿದೆ.


ಶ್ರೀನಿವಾಸಪುರ : ಮೂರು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಸೋಮವಾರ ಭಾರೀ ಸಂಭ್ರಮಾಚರಣೆ ನಡೆಯಿತು. ಪಟ್ಟಣದ ಇಂದಿರಾಭವನ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಮಿಠಾಯಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಆರ್.ಎನ್. ಚಂದ್ರಶೇಖರ್, ಮೊದಲನೆಯದಾಗಿ ಮೂರು ರಾಜ್ಯಗಳ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೂರು ರಾಜ್ಯಗಳು ಬಿಜೆಪಿ ಪಕ್ಷದ ತಕ್ಕೆಗೆ ಬಂದಿರುವುದು ಶುಭ ಸೂಚನೆಯಾಗಿದೆ. ಪಟ್ಟಣದಲ್ಲಿ ಎಲ್ಲಾ ಕಾರ್ಯಕರ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ ಸಂಭ್ರಮಾಚರಣೆ ಹಮ್ಮಿಕೊಂಡಿದ್ದೇವೆ.
ಮುಂದಿನ ದಿನಗಳಲ್ಲಿ ಮೂರು ರಾಜ್ಯಗಳಲ್ಲೂ ನಮ್ಮ ಪಕ್ಷದ ಮುಖ್ಯಮಂತ್ರಿಗಳನ್ನು ಕಾಣಲಿದ್ದೇವೆ, ಎಂದು ಹೇಳಿದರು. ಅವರು ಮುಂದುವರೆದು, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಸಂಸ್ಕೃತಿ ಹಾಗೂ ಸನಾತನ ಧರ್ಮವನ್ನು ಕಾಪಾಡುವುದಲ್ಲದೆ, ಎಲ್ಲಾ ಸಮುದಾಯಗಳನ್ನು ಒಗ್ಗಟ್ಟಿನಲ್ಲಿ ಸಾಗಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪುದುಚೇರಿ ಹಾಗೂ ಅಸ್ಸಾಂನಲ್ಲಿ ಮೂರನೇ ಬಾರಿ ವಿಜಯೋತ್ಸವ ಆಚರಿಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಪಕ್ಷದ ಸಾಧನೆಗೆ ಅಲ್ಲಿನ ಮತದಾರರ ಬೆಂಬಲ ಮುಖ್ಯ ಕಾರಣವಾಗಿದೆ, ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಗುಟೂರು ಚಲಪತಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶೆಟ್ಟಿಹಳ್ಳಿ ನಾಗಭೂಷಣ್, ರಾಜ್ಯ ರೈತ ಮೋರ್ಚಾ ಸದಸ್ಯ ಲಕ್ಷಣಗೌಡ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಈ. ಶಿವಣ್ಣ, ಎಸ್ಸಿ ಮೋರ್ಚಾ ಮುಖಂಡ ನಾರಾಯಣಸ್ವಾಮಿ, ಬಿ.ಎಲ್.ಎ.1 ನಾಗರಾಜ್ ಸೇರಿದಂತೆ ಗಟ್ಟಹಳ್ಳಿ ನಾಗೇಶ್, ಕೇಶವ, ಹೆಬ್ಬಟ್ಟ ಪ್ರಕಾಶ್, ಆವಲಕುಪ್ಪ ವೆಂಕಟರಮಣ, ವೆಂಕಟಾಚಲಪತಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.


ಮೂಡ್ಲಕಟ್ಟೆ ಎಂ.ಐ.ಟಿ ಕುಂದಾಪುರದ ಸಾವಿಷ್ಕರ್-2026 ಎರಡನೇ ದಿನದ ಸಂಜೆಯ ಕಾರ್ಯಕ್ರಮದಲ್ಲಿ ಖ್ಯಾತ ಅಂತರಾಷ್ಟ್ರೀಯ ಮಟ್ಟದ ಸಂಗೀತ ನಿರ್ದೇಶಕರಾದ ಶ್ರೀ ರವಿ ಬಸ್ರೂರು ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಐ ಎಂ ಜೆ ವಿದ್ಯಾಸಂಸ್ಥೆಗಳ ಚೇರ್ಮನ್ ರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ, ಐ ಎಂ ಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್ ಎನ್ ಭಟ್ ಹಾಗೂ ಎಂ ಐ ಟಿ ಕುಂದಾಪುರದ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬೈಂದೂರು: ಸಾಧಿಸಿದರೆ ಸಬಲವನ್ನೇ ನುಂಗಬಹುದು ಎನ್ನುವ ಮಾತಿಗೆ ಬೈಂದೂರಿನ ಯಡ್ತರೆ ಗ್ರಾಮದ ಆಶಾ ವೀಣಾ ಡಾಯಸ್ ಅನ್ವಯಿಸುತ್ತಾರೆ. ಶಾಲಾ ಜೀವನದಲ್ಲಿ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಯಲ್ಲಿ ತೋರಿದ ಪ್ರತಿಭೆಗೆ ಸೋಪಾನವೆಂಬಂತೆ , ಉತ್ತಮ ಸಂಯೋಜಕೀ ಪುರಸ್ಕಾರ, 2025-26 ನೇ ಸಾಲಿನ ಐಬಿಬಿಎಸ್ ಬೆಸ್ಟ್ ಟೀಚರ್ ಅವಾರ್ಡ್ ಹಾಗೂ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಇವರು ನಡೆಸಿದ ಆಶುಭಾಷಣ ಸ್ಪರ್ಧೆಯಲ್ಲಿ ಟಾಪ್ ಟೆನ್ನರ ವಿಜೇತೆಯಾಗಿ ಆಯ್ಕೆ.
ಅಂಚೆಕಾಡಿನ ಮನಸ್ಸಿದ್ದರೆ ಮಾರ್ಗ ಮತ್ತು ನಿರ್ಮಲ ಪ್ರೀತಿ ಕಥಾ ಸ್ಪರ್ಧೆಗೆ ದ್ವಿತೀಯ ಸ್ಥಾನ ಗಳಿಸಿದ ಬಹುಮುಖ ಪ್ರತಿಭೆ. ಸಾಹಿತ್ಯ ಕಲೆ ಸಂಸ್ಕೃತಿಯ ಕಣಜವಾಗಿರುವ ಡಯಾಸ್ ಹೈಸ್ಕೂಲು ಹಂತದಲ್ಲಿಯೇ ಇದಕ್ಕಾಗಿ ರಾಜ್ಯ ಜಿಲ್ಲಾ ತಾಲೂಕು ಹಾಗೂ ವಲಯ ಹಂತದಲ್ಲಿ ಪ್ರಶಸ್ತಿ ಗಳಿಸಿದವರು. ಅನೇಕ ಸಂಘ ಸಂಸ್ಥೆಗಳು ಏರ್ಪಡಿಸಿದ ಸುಮಾರು 120ಕ್ಕೂ ಅಧಿಕ ಭಾಷಣ ಸ್ಪರ್ಧೆಯಲ್ಲಿ ಹಾಗೂ ಮೂವತ್ತಕ್ಕೂ ಅಧಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಹೆಗ್ಗಳಿಕೆ ಇವರದ್ದು. ಇಷ್ಟೇ ಅಲ್ಲದೆ ಅನೇಕ ಏಕಪಾತ್ರ ಅಭಿನಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.. ಇವರು ಕಷ್ಟ ಸ್ನೇಹ ಮತ್ತು ಪ್ರೀತಿ ಎಂಬ ಪುಟ್ಟ ಕವನಗಳನ್ನು ಬರೆದಿರುತ್ತಾರೆ. ಇವರು ಬರೆದ ಕೆಲವು ಲೇಖನಗಳು ನಾಡಿನ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಬಿ ಎಡ್ ನಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ, ಕರ್ನಾಟಕ ಶಿಕ್ಷಕರ ಪರೀಕ್ಷೆ TET ಟೆಟ್ನಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ಇವರು, ಪತ್ರಿಕೋದ್ಯಮ ವಿದ್ಯಾಭ್ಯಾಸವನ್ನು ಪಡೆದಿರುತ್ತಾರೆ. 18 ವರ್ಷಗಳಿಂದ ಶಿಕ್ಷಕಿ ಹಾಗೂ 15 ವರ್ಷಗಳಿಂದ ಅನೇಕ ಕಾರ್ಯಕ್ರಮ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಇತ್ತೀಚೆಗೆ ಅವರು ಮಮತೆಯ ಮಂದಾರ ಹಾಗೂ ಬರಿದಾಗದ ಚಿಲುಮೆ ಎಂಬ ಮಾತೆ ಮರಿಯಾಳ ಆಧ್ಯಾತ್ಮಿಕ ಪುಟ್ಟ ಪುಸ್ತಕಗಳನ್ನು ಬರೆದಿರುವ ಅರಳುವ ಪ್ರತಿಭೆಯಾಗಿದ್ದಾರೆ. ಇವರಿಗೆ ಮಾತೆ ಮರಿಯಾಳ ಮೇಲೆ ಅಗಾಧವಾದ ಪ್ರೀತಿ ಹಾಗೂ ಭಕ್ತಿ. ಸದಾ ತನ್ನನ್ನು ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುವ ಹುಮ್ಮಸ್ಸು ಇವರದ್ದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಹಳ ತರುಣಪ್ರಾಯದಲ್ಲಿ ಪುಟ್ಟ ಪುಟ್ಟ ಸಾಹಿತ್ಯದಲ್ಲಿ ಆಸಕ್ತಿಯನ್ನು ಗಳಿಸಿ ಬಹುಮಾನ ಪಡೆದ ಬಹುಮುಖ ಪ್ರತಿಭೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಅವರು ಜೆಸಿ ಸಿಟಿ ಬೈಂದೂರು ಇದರ ಸದಸ್ಯರಾಗಿಯು ಸೇರ್ಪಡೆಗೊಂಡಿರುತ್ತಾರೆ.
ಈ ತೆರೆಮರೆ ಸಾಧಕೀಯ ಪುಟ್ಟ ಕನಸುಗಳು ನನಸಾಗಲಿ










Release of Vally Vagga’s New Book ‘Vinchnnar Kanniyo’


ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರು ಬರೆದಿರುವ ‘ವಿಂಚ್ಣಾರ್ ಕಾಣಿಯೊ’ ಪುಸ್ತಕದ ಲೋಕಾರ್ಪಣೆ ಸಮಾರಂಭವು 2026ರ ಮೇ 10, ಭಾನುವಾರ ಸಂಜೆ 5:00 ಗಂಟೆಗೆ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಮತ್ತು ಕೊಂಕಣಿ ಸಲಹಾ ಸಮಿತಿ, ಸಾಹಿತ್ಯ ಅಕಾಡೆಮಿ, ಹೊಸ ದೆಹಲಿಯ ಸಂಚಾಲಕರಾದ ಶ್ರೀ ಮೆಲ್ವಿನ್ ರೊಡ್ರಿಗಸ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕೃತಿಯು ‘ಮೈಕಲ್ ಡಿಸೋಜಾ – ವಿಷನ್ ಕೊಂಕಣಿ’ ಸಂಸ್ಥೆಯಡಿಯಲ್ಲಿ ಲೂರ್ಡ್ಸ್ ಪ್ರಕಾಶನದಿಂದ ಪ್ರಕಟಗೊಂಡಿದೆ.
ವಲ್ಲಿ ವಗ್ಗ ಎಂಬುದು ವಲೇರಿಯನ್ ಡಿಸೋಜಾ ಅವರ ಕಾವ್ಯನಾಮವಾಗಿದ್ದು, ಇವರು ಕೊಂಕಣಿ ಸಾಹಿತ್ಯ ಲೋಕದ ಚಿರಪರಿಚಿತ ಬರಹಗಾರರಾಗಿದ್ದಾರೆ. ಇವರ ಸಾಹಿತ್ಯ ಪಯಣವು 1964 ರಲ್ಲಿ ‘ರಾಕ್ಣೊ’ ಪತ್ರಿಕೆಯಲ್ಲಿ ಪ್ರಕಟವಾದ ಮೊದಲ ಕಥೆಯೊಂದಿಗೆ ಪ್ರಾರಂಭವಾಯಿತು. ಕಳೆದ ಹಲವಾರು ದಶಕಗಳಲ್ಲಿ ಅವರು ಸುಮಾರು 150 ಕೊಂಕಣಿ ಕಥೆಗಳು ಮತ್ತು 250 ಕವಿತೆಗಳನ್ನು ರಚಿಸಿದ್ದಾರೆ. ಈಗ ಬಿಡುಗಡೆಯಾಗುತ್ತಿರುವ ‘ವಿಂಚ್ಣಾರ್ ಕಾಣಿಯೊ’ ಇವರ ಹನ್ನೊಂದನೇ ಕೃತಿಯಾಗಿದೆ. ಇವರ ಸಾಹಿತ್ಯ ಕೃಷಿಯು ಕನ್ನಡ ಸಾಹಿತ್ಯ ಲೋಕಕ್ಕೂ ವಿಸ್ತರಿಸಿದ್ದು, ಇವರ ಕಥೆಗಳು ಸುಧಾ ಮತ್ತು ಮಯೂರದಂತಹ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಕೊಂಕಣಿ ಮತ್ತು ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ 2020ರಲ್ಲಿ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಗಿದೆ. ಇದರೊಂದಿಗೆ ಅವರು ಸಂದೇಶ ಸಾಹಿತ್ಯ ಪ್ರಶಸ್ತಿ ಮತ್ತು ಮಥಾಯಸ್ ಕುಟುಂಬ ಕವಿತಾ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಪ್ರಸ್ತುತ ಮೈಸೂರಿನಲ್ಲಿ ತಮ್ಮ ಕುಟುಂಬದೊಂದಿಗೆ ನಿವೃತ್ತ ಜೀವನ ನಡೆಸುತ್ತಿದ್ದಾರೆ.
Release of Vally Vagga’s New Book ‘Vinchnnar Kanniyo’

The book release ceremony of ‘Vinchnnar Kanniyo’, authored by the esteemed writer Vally Vagga, is scheduled for Sunday, May 10, 2026. The event will be hosted at Sahodaya Auditorium, St. Aloysius University, at 5:00 pm. Rev. Dr Praveen Martis, S.J., the Vice Chancellor of St. Aloysius University, and Shri Melvyn Rodrigues, Convenor, Konkani Advisory Board, Sahitya Akademi, New Delhi, will grace the occassion as Chief Guests. This work is published by Lourdes Prakashana under the ‘Michael D’Souza – Vision Konkani’ initiative.
Vally Vagga, the pen name for Valerian D’Souza, is a prolific literary figure whose career began in 1964 with his first story published in Raknno. Over several decades, he has authored approximately 150 Konkani stories and 250 poems, with his latest book ‘Vinchnnar Kanniyo’ marking his eleventh major publication. His reach extends into the Kannada literary world, where his stories have appeared in prominent magazines like Sudha and Mayura. For his extensive contributions to both Konkani and Kannada literature, he was honored with the prestigious Karnataka Rajyotsava Award in 2020, along with numerous other accolades such as the Sandesha Literature Award and the Mathias Family Kavita Puraskar. Beyond his literary life, he served as an engineer for many years before retiring to Mysore, with his family.

ಮಂಗಳೂರು; ಯಾವುದೇ ಭಾಷೆಯ ಸಾಹಿತ್ಯದ ಉಳಿವು ಓದುಗರ ಮೇಲೆ ಅವಲಂಭಿಸಿದೆ. ಕೊಂಕಣಿ ಭಾಷೆಯಲ್ಲಿ ಕ್ಷೀಣಿಸುತ್ತಿರುವ ವಾಚನ ಹವ್ಯಾಸಕ್ಕೆ ಜೀವ ತುಂಬುವ ನಿಟ್ಟಿನಲ್ಲಿ, ಹೊಸ ಮಾಧ್ಯಮದ ಮೂಲಕ ವಿಂಚ್ಣಾರ್ ಮೊತಿಯಾಂ(ಆಯ್ದ ಮುತ್ತುಗಳು) ಎಂಬ ವಿಡಿಯೊ ಸರಣಿ ಕಾರ್ಯಕ್ರಮವನ್ನು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಆರಂಭಿಸುತ್ತಿದೆ. ಕಳೆದ 46 ವರ್ಷಗಳಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಸಂವರ್ಧನೆಗಾಗಿ ದುಡಿಯುತ್ತಿರುವ ಸಂತ ಅಲೊಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಕಳೆದ ಒಂದು ವರ್ಷದಿಂದ ಬೊಲ್ಕಾಂವ್ (ಬಾಲ್ಕನಿ) ಎಂಬ ವಿನೂತನ ಕಾರ್ಯಕ್ರವನ್ನು ಆಯೋಜಿಸುತ್ತಾ ಬಂದಿದ್ದು, ಪ್ರಸ್ತುತ ವಿಂಚ್ಣಾರ್ ಮೊತಿಯಾಂ ಕಾರ್ಯಕ್ರಮದಲ್ಲಿ ಓದುಗರು ತಮಗೆ ಇಷ್ಟವಾದ ಸಾಹಿತ್ಯ ಕೃತಿಯ ಬಗ್ಗೆ ಮಾತನಾಡುತ್ತಾರೆ. ಈ ಕಾರ್ಯಕ್ರಮ ತಿಂಗಳ ಪ್ರತೀ ಮೊದಲ ಹಾಗೂ ಮೂರನೇ ಶನಿವಾರ ವಿಶ್ವವಿದ್ಯಾಲಯದ ಯೂ ಟ್ಯೂಬ್ ಚ್ಯಾನೆಲ್ನಲ್ಲಿ ಪ್ರಸಾರವಾಗುತ್ತದೆ ಮತ್ತು ಅಲ್ಲಿ ಅಧ್ಯಯನಕ್ಕೆ ಲಭ್ಯವಿದೆ. ಇದರಿಂದ ಕೊಂಕಣಿ ಸಾಹಿತ್ಯ ಅಧ್ಯಯನ ಮಾಡುವ ವಿದ್ಯಾರ್ಥಿ ಮತ್ತು ಬೋಧಿಸುವ ಶಿಕ್ಷಕರಿಗೂ ಪ್ರಯೋಜನವಾಗಲಿದೆ” ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ| ಫಾ| ಪ್ರವೀಣ್ ಮಾರ್ಟಿಸ್. ಜೆ.ಸ. ಹೇಳಿದರು.
“ಕಳೆದ 44 ವರ್ಷಗಳಿಂದ ಕೊಂಕಣಿ ಸಂಸ್ಥೆ ಅಮರ್ ಕೊಂಕಣಿ ಎಂಬ ಸಂಶೋಧನಾ ಪತ್ರಿಕೆಯನ್ನೂ ನಡೆಸಿಕೊಂಡು ಬಂದಿದ್ದು, ಡಾ| ಫಾ| ವಿಜಯ್ ಡಿ ಸೊಜಾ ಅವರ ನೇತೃತ್ವದಲ್ಲಿ ಸದ್ಯದಲ್ಲೆ ಕೊಂಕಣಿ ಭಾಷಾ ಸಂಶೊಧನಾ ಕಾರ್ಯ ಆರಂಭವಾಗಲಿದೆ” ಎಂದು ಡಾ| ಫಾ| ಮಾರ್ಟಿಸ್ ತಿಳಿಸಿದರು.
ಡಾ| ಮಾರ್ಟಿಸ್ ಕೊಂಕಣಿ ಸಾಹಿತ್ಯದ ಮೇರು ಕೃತಿಗಳನ್ನು ಓದುಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ತಯಾರಿಸಿಸ ಕೊಂಕಣಿ ಸಂಸ್ಥೆ ತಯಾರಿಸಿದ ವಿಂಚ್ಣಾರ್ ಮೊತಿಯಾಂ (ಆಯ್ದ ಮುತ್ತುಗಳು) ವಿಡಿಯೊ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಸರಣಿ ಕಾರ್ಯಕ್ರಮದ ರೂವಾರಿ, ಕೊಂಕಣಿ ಸಂಸ್ಥೆಯ ಸಲಹೆಗಾರ ಡಾ| ಆಲ್ವಿನ್ ಡೆʼಸಾ ವಿಂಚ್ಣಾರ್ ಮೊತಿಯಾಂ ಕಾರ್ಯಕ್ರಮದ ರೂಪು- ರೇಷೆ ಮತ್ತು ವಿನ್ಯಾಸದ ಕುರಿತು ಕಿರು ಪರಿಚಯ ನೀಡಿದರು. ಈ ಕಾರ್ಯಕ್ರಮ ಸರಣಿಯಿಂದ ವಾಚನ ಹವ್ಯಾಸ ಬೆಳೆಯುವ ಭರವಸೆಯಿದೆ ಎಂದು ಆವರು ಅಭಿಪ್ರಾಯಪಟ್ಟರು. ಇದೇ ಮಾದರಿಯಲ್ಲಿ ಸಾಹಿತ್ಯ ವಿಮರ್ಶೆಯ ಸಿದ್ದಾಂತಗಳನ್ನು ಓದುಗರಿಗೆ ಸರಳವಾಗಿ ಹೇಳುವ ಸರಣಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ಸದ್ಯದಲ್ಲೇ ಪ್ರಸಾರ ಮಾಡಲಾಗುವುದು ಎಂದು ಅವರು ಹೇಳಿದರು.
ಬೊಲ್ಕಾಂವ್ ಕಾರ್ಯಕ್ರಮದ ಸಂಚಾಲಕ ಸಾಹಿತಿ, ಪತ್ರಕರ್ತ ಎಚ್. ಎಮ್. ಪೆರ್ನಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೊಂಕಣಿ ಸಂಸ್ಥೆಯ ಕಾರ್ಯಕ್ರಮ ಸಂಚಾಲಕ ಪಿಂಟೊ ವಾಮಂಜೂರು ವಂದಿಸಿದರು. ಕು| ವನಿತಾ ಸಹಕರಿಸಿದರು.
St Aloysius University Konkani Institute launches ‘Vinchnar Motiyam’ series
“The survival of any language’s literature depends on its readers,” remarked Dr. Fr. Praveen Martis, Vice-Chancellor of St Aloysius University, as he inaugurated the new video series Vinchnar Motiyam (Selected Pearls) at the University’s Konkani Institute.
The initiative aims to revive the declining reading habit in Konkani by introducing a new medium. Through this series, readers will share their reflections on their favorite literary works. Episodes will be broadcast on the University’s official YouTube channel on the first and third Saturday of every month, serving as a valuable resource for students and teachers engaged in Konkani literary studies.
For over 46 years, the Konkani Institute has been dedicated to the promotion of Konkani language and literature. In the past year, it has successfully hosted Bolkawv (Balcony), a unique program that engaged audiences in literary discussions. The new Vinchnar Motiyam series builds on this legacy, offering readers a platform to connect with classic works.
Dr. Martis also highlighted that the Institute has been publishing the research journal Amar Konkani for the past 44 years. Under the leadership of Dr. Fr. Vijay D’Souza, a new Konkani language research project is set to begin shortly.
Introducing the program’s framework, Dr. Alwyn D’Souza, advisor to the Konkani Institute, explained the design and vision behind Vinchnar Motiyam. He expressed confidence that the series would nurture a culture of reading. He further revealed that another upcoming series will simplify literary criticism theories for readers.
The inaugural event was hosted by noted writer and journalist H. M. Pernal, who welcomed the gathering and anchored the program. Pinto Vamanjoor proposed the vote of thanks, with assistance from Ms. Vanitha


ಕುಂದಾಪುರ,ಮೇ. 5; ನಿನ್ನೆ ಸಂಜೆ , ದಾವಣಗೆರೆ ಹಾಗೂ ಬಾಗಲಕೋಟೆ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂದೆ ಕಾಂಗ್ರೆಸ್ ಪಕ್ಷದ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ , ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಭಿಜಿತ್ ಪೂಜಾರಿ , ಐಟಿ ಸೆಲ್ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ , ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ , ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮುನಾಫ್ ಕೋಡಿ , ಇಂಟಕ್ ಘಟಕದ ಅಧ್ಯಕ್ಷರಾದ ಚಂದ್ರ ಅಮೀನ್ , ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಜೋಸೆಫ್ ರೆಬೆಲ್ಲೊ , ಮಾಜಿ ಪುರಸಭಾ ಸದಸ್ಯ ಪ್ರಭಾವತಿ ಶೆಟ್ಟಿ, ನಾಮ ನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ , ಶಶಿಧರ ನಂದಿಬೆಟ್ಟು , ಸದಾನಂದ ಖಾರ್ವಿ, ಹಿರಿಯರಾದ ಅಬ್ದುಲ್ಲಾ ಕೋಡಿ , ರತ್ನಾಕರ ಶೆಟ್ಟಿ , ಶಶಿಕುಮಾರ್ ,ಅರುಣ್ ಪಟೇಲ್ , ವೇಣು ಶಾಂತಿನಿಕೇತನ ,ವೇಲಾ ಬ್ರಗಾಂಜ , ಡಾಲ್ಫಿ ಡಿಕೋಸ್ಟ , ಆಲ್ವಿನ್ ಹೆರಿಕುದ್ರು ಇನ್ನಿತರರು ಉಪಸ್ಥಿತರಿದ್ದರು.



ಕುಂದಾಪುರ,ಮೇ.5; ಕುಂದಾಪುರ ಭಾಗ್ಯೆವಂತೆ ರೋಜರಿ ಮಾತಾ ಚರ್ಚಿನಲ್ಲಿ ಮೇ 1 ರಂದು ಪ್ರಥಮ ಪರಮ ಪ್ರಸಾದದ ಸಂಸ್ಕಾರ ನೆರವೇರಿತು. 5 ಮಕ್ಕಳು ಕ್ರಿಸ್ತ ಪ್ರಸಾದ ಸ್ವೀಕರಿಸಿದರು ಇಗರ್ಜಿಯ ಪ್ರಧಾನ ಗುರುಗಳಾದ ಅ।ವಂ।ಪೌಲ್ ರೇಗೊ ಬಲಿದಾನ ಅರ್ಪಿಸಿ ಪ್ರಥಮ ಕ್ರಿಸ್ತ ಪ್ರಸಾದದ ಧಾರ್ಮಿಕ ವಿಧಿ ನೆರವೇರಿಸಿ ‘ಯೇಸು ಜೀವದಾಯಕ ರೊಟ್ಟಿಯಾಗಿರುವರು, ಪ್ರತೀ ಬಲಿ ಪೂಜೆಯಲ್ಲಿ ಯೇಸು ತನ್ನ ಶರೀರ ಮತ್ತು ತನ್ನ ರಕ್ತವನ್ನು ನಮಗೆ ನೀಡುವ ಮುಖಾಂತರ, ನಮಗೆ ಹೊಸ ಜೀವ ನೀಡುತ್ತಾರೆ, ಕ್ರಿಸ್ತ ಪ್ರಸಾದ, ನಮಗೆ ಆತ್ಮಕ್ಕೆ ಬೇಕಾದ ಮತ್ತು ನಮಗೆ ಮುಕ್ತಿ ಹೊಂದಲು ಬೇಕಾದ ಪ್ರಸಾದವಾಗಿದೆ’ ಎಂದು ಸಂದೇಶ ನೀಡಿ ಪ್ರಥಮ ಭಾರಿ ಪ್ರಸಾದ ಸಂಸ್ಕಾರ ಸ್ವೀಕರಿಸಿದ ಮಕ್ಕಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಸಂತ ಮೇರಿ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ವಂ।ರೊಲ್ವಿನ್ ಫೆರ್ನಾಂಡಿಸ್, ತ್ರಾಸಿ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂ।ಮ್ಯಾಕ್ಸಿಮ್ ಡಿಸೋಜಾ, ಮಕ್ಕಳಿಗೆ ಶಿಕ್ಷಣ ನೀಡಿದ ಧರ್ಮಭಗಿನಿ ಇವ್ಲಾ, ಶಿಕ್ಷಕಿ ಜೂಲಿಯೆಟ್ ಪಾಯ್ಸ್ ಮತ್ತು ಮಕ್ಕಳ ಬಂದು ಮಿತ್ರರು ಈ ಸಂಸ್ಕಾರದಲ್ಲಿ ಭಾಗಿಯಾದರು.

