

ಬೈಂದೂರು: ಸಾಧಿಸಿದರೆ ಸಬಲವನ್ನೇ ನುಂಗಬಹುದು ಎನ್ನುವ ಮಾತಿಗೆ ಬೈಂದೂರಿನ ಯಡ್ತರೆ ಗ್ರಾಮದ ಆಶಾ ವೀಣಾ ಡಾಯಸ್ ಅನ್ವಯಿಸುತ್ತಾರೆ. ಶಾಲಾ ಜೀವನದಲ್ಲಿ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಯಲ್ಲಿ ತೋರಿದ ಪ್ರತಿಭೆಗೆ ಸೋಪಾನವೆಂಬಂತೆ , ಉತ್ತಮ ಸಂಯೋಜಕೀ ಪುರಸ್ಕಾರ, 2025-26 ನೇ ಸಾಲಿನ ಐಬಿಬಿಎಸ್ ಬೆಸ್ಟ್ ಟೀಚರ್ ಅವಾರ್ಡ್ ಹಾಗೂ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಇವರು ನಡೆಸಿದ ಆಶುಭಾಷಣ ಸ್ಪರ್ಧೆಯಲ್ಲಿ ಟಾಪ್ ಟೆನ್ನರ ವಿಜೇತೆಯಾಗಿ ಆಯ್ಕೆ.
ಅಂಚೆಕಾಡಿನ ಮನಸ್ಸಿದ್ದರೆ ಮಾರ್ಗ ಮತ್ತು ನಿರ್ಮಲ ಪ್ರೀತಿ ಕಥಾ ಸ್ಪರ್ಧೆಗೆ ದ್ವಿತೀಯ ಸ್ಥಾನ ಗಳಿಸಿದ ಬಹುಮುಖ ಪ್ರತಿಭೆ. ಸಾಹಿತ್ಯ ಕಲೆ ಸಂಸ್ಕೃತಿಯ ಕಣಜವಾಗಿರುವ ಡಯಾಸ್ ಹೈಸ್ಕೂಲು ಹಂತದಲ್ಲಿಯೇ ಇದಕ್ಕಾಗಿ ರಾಜ್ಯ ಜಿಲ್ಲಾ ತಾಲೂಕು ಹಾಗೂ ವಲಯ ಹಂತದಲ್ಲಿ ಪ್ರಶಸ್ತಿ ಗಳಿಸಿದವರು. ಅನೇಕ ಸಂಘ ಸಂಸ್ಥೆಗಳು ಏರ್ಪಡಿಸಿದ ಸುಮಾರು 120ಕ್ಕೂ ಅಧಿಕ ಭಾಷಣ ಸ್ಪರ್ಧೆಯಲ್ಲಿ ಹಾಗೂ ಮೂವತ್ತಕ್ಕೂ ಅಧಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಹೆಗ್ಗಳಿಕೆ ಇವರದ್ದು. ಇಷ್ಟೇ ಅಲ್ಲದೆ ಅನೇಕ ಏಕಪಾತ್ರ ಅಭಿನಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.. ಇವರು ಕಷ್ಟ ಸ್ನೇಹ ಮತ್ತು ಪ್ರೀತಿ ಎಂಬ ಪುಟ್ಟ ಕವನಗಳನ್ನು ಬರೆದಿರುತ್ತಾರೆ. ಇವರು ಬರೆದ ಕೆಲವು ಲೇಖನಗಳು ನಾಡಿನ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಬಿ ಎಡ್ ನಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ, ಕರ್ನಾಟಕ ಶಿಕ್ಷಕರ ಪರೀಕ್ಷೆ TET ಟೆಟ್ನಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ಇವರು, ಪತ್ರಿಕೋದ್ಯಮ ವಿದ್ಯಾಭ್ಯಾಸವನ್ನು ಪಡೆದಿರುತ್ತಾರೆ. 18 ವರ್ಷಗಳಿಂದ ಶಿಕ್ಷಕಿ ಹಾಗೂ 15 ವರ್ಷಗಳಿಂದ ಅನೇಕ ಕಾರ್ಯಕ್ರಮ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಇತ್ತೀಚೆಗೆ ಅವರು ಮಮತೆಯ ಮಂದಾರ ಹಾಗೂ ಬರಿದಾಗದ ಚಿಲುಮೆ ಎಂಬ ಮಾತೆ ಮರಿಯಾಳ ಆಧ್ಯಾತ್ಮಿಕ ಪುಟ್ಟ ಪುಸ್ತಕಗಳನ್ನು ಬರೆದಿರುವ ಅರಳುವ ಪ್ರತಿಭೆಯಾಗಿದ್ದಾರೆ. ಇವರಿಗೆ ಮಾತೆ ಮರಿಯಾಳ ಮೇಲೆ ಅಗಾಧವಾದ ಪ್ರೀತಿ ಹಾಗೂ ಭಕ್ತಿ. ಸದಾ ತನ್ನನ್ನು ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುವ ಹುಮ್ಮಸ್ಸು ಇವರದ್ದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಹಳ ತರುಣಪ್ರಾಯದಲ್ಲಿ ಪುಟ್ಟ ಪುಟ್ಟ ಸಾಹಿತ್ಯದಲ್ಲಿ ಆಸಕ್ತಿಯನ್ನು ಗಳಿಸಿ ಬಹುಮಾನ ಪಡೆದ ಬಹುಮುಖ ಪ್ರತಿಭೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಅವರು ಜೆಸಿ ಸಿಟಿ ಬೈಂದೂರು ಇದರ ಸದಸ್ಯರಾಗಿಯು ಸೇರ್ಪಡೆಗೊಂಡಿರುತ್ತಾರೆ.
ಈ ತೆರೆಮರೆ ಸಾಧಕೀಯ ಪುಟ್ಟ ಕನಸುಗಳು ನನಸಾಗಲಿ











