

ಕುಂದಾಪುರ, ಜೂ.14; ನಗರದ ಸೈಂಟ್ ಮೇರಿಸ್ ಪ ಪೂ ಕಾಲೇಜಿನಲ್ಲಿ ದೀಪ ಬೆಳಗುವುದ ಮೂಲಕ ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗೋತ್ಸವ ಹಾಗೂ ಶಿಕ್ಷಕ ರಕ್ಷಕ ಸಭೆ ಶಿಕ್ಷಕ ರಕ್ಷಕ ಸಭೆಯ ಕಾರ್ಯಕ್ರಮವನ್ನು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು, ವಿದ್ಯಾ ಸಂಸ್ಥೆಯ ಸಂಚಾಲಕರಾದ ಅ|ವಂ|ಪಾವ್ಲ್ ರೇಗೊ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಅವರು ‘ಪ್ರತಿ ಶೈಕ್ಷಣಿಕ ವರ್ಷವು ಬೆಳೆಯಲು, ಕಲಿಯಲು ಮತ್ತು ಶ್ರೇಷ್ಠತೆಯತ್ತ ಶ್ರಮಿಸಲು ಹೊಸ ಅವಕಾಶಗಳನ್ನು ತರುತ್ತದೆ. ಈ ಕ್ಷಣವು ಹೊಸ ಆರಂಭವನ್ನು ಸೂಚಿಸುತ್ತದೆ – ಹೊಸ ಗುರಿಗಳನ್ನು ಸಾಧಿಸಲು, ಹೊಸ ಸವಾಲುಗಳನ್ನು ನಿವಾರಿಸಲು ನಿಮಗೆ ಸಾಧ್ಯವಾಗಲಿದೆ ನೂತನ ಶೈಕ್ಷಣಿಕ ವರ್ಷವನ್ನು ಕುತೂಹಲ, ದೃಢನಿಶ್ಚಯ ಮತ್ತು ಪರಸ್ಪರ ಗೌರವ ಕೊಟ್ಟು ಶಿಕ್ಷಕರು ಕಲಿಸಿದನ್ನು ಮನದಟ್ಟು ಮಾಡಿಕೊಂಡು ನೀವು ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಬೇಕು. ನಿಮ್ಮ ಮಕ್ಕಳು ಶಿಕ್ಷಣವನ್ನು ಉತ್ತಮವಾಗಿ ಪಡೆಯಬೇಕಾದರೆ, ನೀವು ಕಾರಣಕರ್ತರಾಗಿದ್ದಿರಿ. ನೀವು ನಿಮ್ಮ ಮಕ್ಕಳನ್ನು ಸ್ನೇಹಿತರಂತೆ ಕಂಡುಕೊಳ್ಳಬೇಕು, ಅವರ ಸಮಸ್ಯೆ ಅರಿತು ಪ್ರೀತಿಯಿಂದ ಪರಿಹರಿಸಿ’ ವಿದ್ಯಾರ್ಥಿಗಳಿಗೂ ಶುಭವನ್ನು ಹಾರೈಸಿದರು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಇದರ ವಿದ್ಯಾರ್ಥಿ ಸಲಹೆಗಾರರಾದ ಜೀವನ್ ಲುವಿಸ್ “ಪಾಲಕರು ತಮ್ಮ ಮಕ್ಕಳ ಜೊತೆ ಅನ್ಯೋನ್ಯತೆಯಿಂದ ಇರಬೇಕು. ಮನೆಯಲ್ಲಿ ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಬೇಕು. ತಮ್ಮ ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಸದೇ ಅವರ ಭಾವನೆ ಅರಿತುಕೊಂಡು ನಡೆಯಬೇಕು. ಅವರ ಆಗು ಹೋಗುಗಳನ್ನು ಅರಿತು ಅದರೆಂತೆ ನಡೆಯಿರಿ. ಸಾಮಾಜಿಕ ಜಾಲ ತಾಣ ದೊಂದಿಗೆ ತಮ್ಮ ಮಕ್ಕಳ ವ್ಯವರಿಕೆ ಹೇಗೆ ಎಂದು ಪರಿಶೀಲಿಸಬೇಕು. ಮಕ್ಕಳಿಗೆ ಒತ್ತಡ ರಹಿತ ಜೀವನ ಇರುವಂತೆ ಪಾಲಕರು ಮುತುವರ್ಜಿ ವಹಿಸಬೇಕು. ದಿನದ ಸ್ವಲ್ಪ ಸಮಯ ತಮ್ಮ ಮಕ್ಕಳಿಗಾಗಿ ಮೀಸಲಿಡಿ” ಎಂದು ಅನೇಕ ವಿಚಾರಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅತ್ತ್ಯುತ್ತಮ ಶ್ರೇಣಿಯಲ್ಲಿ ತೆರ್ಗಡೆ ಒಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜೊತೆಗೆ ನೂತನವಾಗಿ ನೇಮಕವಾದ ಅಧ್ಯಾಪಕರನ್ನು ಸ್ವಾಗತಿಸಲಾಯಿತು. ವೇದಿಕೆಯಲ್ಲಿ ನಿವ್ರತ್ತಿ ಹೊಂದಲಿರುವ ವಸಂತ ಶೆಟ್ಟಿ ಎಂ. ಮತ್ತು ಈ ಸಾಲಿನ ಶೈಕ್ಷಣಿಕ ವರ್ಷದ ಮುಖ್ಯಸ್ಥರಾದ ಅಧ್ಯಾಪಕ ನಾಗರಾಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಷ್ಮಾ ಪೆರ್ನಾಂಡಿಸ್ ರವರು ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಅಧ್ಯಾಪಕಿ ಬಿನು ಜಯಚಂದ್ರನ್ ವಂದಿಸಿದರು. ಅಧ್ಯಾಪಕಿ ಪ್ರೀತಿ ಕ್ರಾಸ್ತಾ ನಿರೂಪಿಸಿದರು.










































































































































































































































