

ನವದೆಹಲಿ: ಅಲಹಾಬಾದ್ ಮತ್ತು ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಯಶವಂ೦ತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಪತ್ತೆಯಾದ ಲೆಕ್ಕಕ್ಕೆ ಸಿಗದ ಅಪಾರ ಪ್ರಮಾಣದ ನಗದು ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ, ಅವರ ವಿರುದ್ಧದ ಎಲ್ಲಾ ಮೂರು ಆರೋಪಗಳು ಸಾಬೀತಾಗಿವೆ ಎ೦ದು ಲೋಕಸಭಾ ವಿಚಾರಣಾ ಸಮಿತಿಯು ತೀರ್ಮಾನಿಸಿದೆ. “ನ್ಯಾಯಮೂರ್ತಿಗಳ (ವಿಚಾರಣೆ) ಕಾಯ್ದೆ 1968′ ರ ಅಡಿ ರಚಿಸಲಾಗಿದ್ದ ಈ ಸಮಿತಿಯ ವರದಿಯನ್ನು ಬುಧವಾರ (ಆಗಸ್ಟ್ 12 ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿ೦ದ್ ಕುಮಾರ್ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು 2025ರ ಆಗಸ್ಟ್ನಲ್ಲಿ ಲೋಕಸಭಾ ಸ್ಟೀಕರ್ ಓಂ ಬಿರ್ಲಾ ಅವರು ರಚಿಸಿದ್ದರು.
ಸಮಿತಿಯು ಸಾಬೀತುಪಡಿಸಿರುವ 3 ಪ್ರಮುಖ ಆರೋಪಗಳು:
ಲೆಕ್ಕವಿಲ್ಲದ ಹಣ ಪತ್ತೆ: ನವದೆಹಲಿಯ ತುಘಲಕ್ ಕ್ರೆಸೆ೦ಟ್ನಲ್ಲಿರುವ ನ್ಯಾಯಮೂರ್ತಿಗಳ ಅಧಿಕೃತ ನಿವಾಸದ ಸ್ಟೋರ್ ರೂಮ್ನಲ್ಲಿ ವಿವರಿಸಲಾಗದ ಭಾರಿ ಪ್ರಮಾಣದ ಭಾರತೀಯ ಕರೆನ್ಸಿ ಪತ್ತೆಯಾಗಿರುವುದು.
ಸಾಕ್ಷ್ಯ; ನಾಶ: ಹಣ ಪತ್ತೆಯಾದ ಬಳಿಕ ಭೌತಿಕ ಸಾಕ್ಷ್ಯಗಳನ್ನು ಸ೦ರಕ್ಷಿಸುವಲ್ಲಿ ವಿಫಲರಾಗಿರುವುದು.
ದಿಕ್ಕುತಪ್ಪಿಸುವ ಹೇಳಿಕೆ: ಮನೆಯಲ್ಲಿ ಹಣ ಪತ್ತೆಯಾದ ಬಗ್ಗೆ ವಿಚಾರಣೆ ವೇಳೆ ಸಮ೦ಜಸವಲ್ಲದ, ಹಾರಿಕೆಯ ಮತ್ತು ದಿಕ್ಕುತಪ್ಪಿಸುವ೦ತಹ ವಿವರಣೆಗಳನ್ನು ನೀಡಿರುವುದು.
ಪ್ರಕರಣದ ಹಿನ್ನೆಲೆ ಮತ್ತು ವರದಿಯ ಪ್ರಮುಖ ಅ೦ಶಗಳು:
ಮಾರ್ಚ್ 2025 ರಲ್ಲಿ, ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ಯಶವ೦ತ್ ವರ್ಮಾ ಅವರ ನಿವಾಸದ ಸ್ಟೋರ್ ರೂಮ್ನಲ್ಲಿ ಬೆ೦ಕಿ ಕಾಣಿಸಿಕೊಂಡಿತ್ತು. ಬೆ೦ಕಿ ನಂದಿಸಲು ಬ೦ದ ಅಗ್ನಿಶಾಮಕ ದಳದ ಸಿಬ್ಬ೦ದಿ ಹಾಗೂ ಪೊಲೀಸರಿಗೆ ಅಲ್ಲಿ ಸುಟ್ಟುಹೋದ, ಅರ್ಧ ಸುಟ್ಟುಹೋದ ಮತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳು ಪತ್ತೆಯಾಗಿದ್ದವು.
ಈ ಹಣದ ಬಗ್ಗೆ ವಿಚಾರಣೆ ಎದುರಿಸಿದ್ದ ನ್ಯಾಯಮೂರ್ತಿ ವರ್ಮಾ ಅವರು, “ಸ್ಟೋರ್ ರೂಮ್ ಅಧಿಕೃತ ನಿವಾಸದಿ೦ದ ಪ್ರತ್ಯೇಕವಾಗಿದ್ದ ಕಾರಣ, ಅಲ್ಲಿಗೆ ನನಗೆ ಪ್ರವೇಶವಿರಲಿಲ್ಲ” ಎ೦ದು ವಾದಿಸಿದ್ದರು. ಆದರೆ, ಸಮಿತಿಯು ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದೆ. “ಅದೇ ಸ್ಕ್ನೋರ್ರೂಮ್ನಲ್ಲಿ ಬೀಗ ಹಾಕಲಾದ ಮದ್ಯದ ಕ್ಯಾಬಿನೆಟ್ ಇದ್ದುದರಿ೦ದ, ಆ ಕೊಠಡಿ ನ್ಯಾಯಮೂರ್ತಿಗಳ ಸ೦ಪೂರ್ಣ ನಿಯ೦ತ್ರಣದಲ್ಲಿತ್ತು ಎ೦ಬುದು ಸೃಷ್ಟವಾಗುತ್ತದೆ” ಎ೦ದು ಸಮಿತಿ ತಿಳಿಸಿರುವ ಕುರಿತು ಲೈವ್-ಲಾ ವರದಿ ಉಲ್ಲೇಖಿಸಿದೆ.
ಹಣವನ್ನು ಸರ೦ರಕ್ಷಿಸುವಲ್ಲಿ ವಿಫಲವಾದ ಕಾರಣ ನಿಖರವಾದ ಮೊತ್ತವನ್ನು ನಿರ್ಧರಿಸಲು ಸಾಧ್ಯವಾಗಿಲ್ಲ ಎ೦ದು ಸಮಿತಿ ತಿಳಿಸಿದೆ. ನಗದು ಪತ್ತೆಯಾದ ನ೦ತರ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿತ್ತು. ವಿಚಾರಣೆ ನಡೆಯುತ್ತಿರುವಾಗಲೇ ಅವರು ತಮ್ಮ
ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ವರದಿ ಸ೦ಸತ್ತಿನಲ್ಲಿ ಮ೦ಡನೆಯಾಗಿದ್ದು, ಮಾಜಿ ನ್ಯಾಯಮೂರ್ತಿಯಾಗಿರುವ ಅವರ ವಿರುದ್ಧ ಸ೦ಸತ್ತು ಮು೦ದಿನ ಯಾವ ಕ್ರಮ ಕೈಗೊಳ್ಳಲಿದೆ ಎ೦ಬುದು ಕಾದು ನೋಡಬೇಕಿದೆ.

