

ಕುಂದಾಪುರ : ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ವಿದ್ಯಾರಂಗ ಮಿತ್ರ ಮಂಡಳಿ ( ರಿ. ), ಕುಂದಾಪುರ,ಮಹಾಕಾಳಿ ಮಹಿಳಾ ಮಂಡಳಿ(ರಿ.) ಖಾರ್ವಿಕೇರಿ ಇವರ ಜಂಟಿ ಆಶ್ರಯದಲ್ಲಿ ಖಾರ್ವಿಕೇರಿ ನಮ್ಮ ಕ್ಲಿನಿಕ್ ಬಳಿ ಫೈಲೇರಿಯಾ ರಕ್ತ ಲೇಪನಾ ಶಿಬಿರವು ದಿನಾಂಕ 27.11.25ರಂದು ನಡೆಯಿತು.
ಸಂಜೆ 7ಗಂಟೆಯ ನಂತರ ಹಮ್ಮಿಕೊಳ್ಳಲಾದ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಆಗಮಿಸಿ ಫೈಲೇರಿಯಾ ತಪಾಸಣೆಗೆ ಒಳಪಟ್ಟರು. ಸರಕಾರಿ ಆಸ್ಪತ್ರೆಯ ಸಿ. ಎಚ್.ಓ. ಮೇಧಿನಿ, ಕಿರಿಯ ಆರೋಗ್ಯ ನೀರಿಕ್ಷಕ ಚೇತನ್ ಎಲ್.,ಲ್ಯಾಬ್ ಟೇಕ್ನಿಕಲ್ ಅಧಿಕಾರಿ ಶ್ರೀಮತಿ ಕಸ್ತೂರಿ ಶೆಟ್ಟಿ ಶಿಬಿರವನ್ನು ನಡೆಸಿಕೊಟ್ಟರು. ಅನಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಉಷಾ ಕೆ., ಶ್ರೀಮತಿ ಪ್ರೆಮಾ, ಆಶಾ ಕಾರ್ಯಕರ್ತೆಯರಾದ ಶಿಲ್ಪಾ, ಶಶಿಕಲಾರವರು ಸಹಕರಿಸಿದರು.ಮಹಾಕಾಳಿ ಮಹಿಳಾ ಮಂಡಳಿಅಧ್ಯಕ್ಷೆ ವಸಂತಿ ಸಾರಂಗ್, ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷ ದಾಮೋದರ ಖಾರ್ವಿ,ವಿದ್ಯಾನಿಧಿ ಯೋಜನೆಯ ಅಧ್ಯಕ್ಷ ದಿನಕರ ಖಾರ್ವಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.



