

ಕುಂದಾಪುರ :ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ವಡೇರ ಹೋಬಳಿಯ ಫಣಿರಾಜ ನಾವುಡ ತೇರ್ಗಡೆ ಆಗಿರುತ್ತಾರೆ. ಅವರು ಬೆಂಗಳೂರಿನ
A. R. T. S.& Co ಸಂಸ್ಥೆಯಲ್ಲಿ
ಆರ್ಟಿಕಲ್ ಶಿಪ್ ವಿದ್ಯಾರ್ಥಿಯಾಗಿದ್ದರು. ವಡೇರ ಹೋಬಳಿಯ ಉದಯಶಂಕರ ನಾವುಡ ಹಾಗೂ ಮಾಲತಿ ( ಉಷಾ ) ಇವರ ಪುತ್ರರಾಗಿದ್ದು, ಕುಂದಾಪುರದ ಬೋರ್ಡ್ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯಾಗಿರುತ್ತಾರೆ.

