

ಕುಂದಾಪುರ, ಮಾ.13; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ 5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಧ್ಯಾತ್ಮಿಕ ಬುನಾದಿ ಘಟ್ಟಿಯಾಗಿ ನೆಲೆ ನಿಲ್ಲುಲು “ನಂಬಿಕೆಯೇ ಜೀವನ” ದ ಶಿಬಿರವು ರೋಜರಿ ಮಾತಾ ಚರ್ಚಿನ ಸಭಾಭವನಲ್ಲಿ ಆರಂಭವಾಯಿತು. ಶಿಬಿರರವನ್ನು ಪ್ರಾರ್ಥನೆ ಮತ್ತು ಆಶಿರ್ವಚನ ನೀಡುವ ಮೂಲಕ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಉದ್ಘಾಟಿಸಿ “ಈ ಶಿಬಿರದಲ್ಲಿ ಮಕ್ಕಳು ಚಿಕ್ಕಂದರಿರುವಾಗಲೇ, ನ್ಯಾಯ ನೀತಿ ಧರ್ಮದಿಂದ ನಡೆಯಲು, ದೇವರ ಮೇಲೆ ಅಚಲ ನಂಬಿಕೆ ಇಡಲು, ಯೇಸು ಕ್ರಿಸ್ತರು ನಾನು ನಿಮ್ಮನ್ನು ಪ್ರೀತಿಸಿದಂತೆ ಇತರರನ್ನು ಪ್ರೀತಿಸಬೇಕು ಎಂಬ ವಿಷಯಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಳ್ಳಲು, ಮತ್ತು ಜೀವನಕ್ಕೆ ಉಪಯುಕ್ತವಾದ ಸಂಗತಿಗಳನ್ನು ತಿಳಿಸಲಾಗುತ್ತದೆ, ಮೂರು ದಿನಗಳ ಈ ಶಿಬಿರದಲ್ಲಿ ಒಂದು ದಿನ ಪಿಕ್ನಿಕ್ ಇರುತ್ತದೆ” ಎಂದು ಮಾಹಿತಿ ನೀಡಿದರು.
ಕ್ರೈಸ್ತ ಶಿಕ್ಷಣ ಆಯೋಗದ ಸಂಚಾಲಕಿ ರೇಖಾ ಡಿಆಲ್ಮೇಡಾ ಸ್ವಾಗತಿಸಿದರು, ಧರ್ಮಭಗಿನಿ ಜುಲಿಯೆಟ್, ಪ್ರಾಧ್ಯಪಕರಾದ ಡೊಮೀನಿಕ್ ಬ್ರಗಾಂಝಾ, ಪ್ರೀತಿ ಕ್ರಾಸ್ತಾ, ಶಿಕ್ಷಕರಾದ ವೀಣಾ ಡಿಸೋಜಾ, ಸಾಮ್ಯೂವೆಲ್ ಲುವಿಸ್, ವನಿತಾ ಬಾರೆಟ್ಟೊ, ವೈ.ಸಿ.ಎಸ್. ಸದಸ್ಯೆ ವಿಯೋನ್ನಾ ಡಿಸೋಜಾ ಶಿಬಿರವನ್ನು ನಡೆಸಿಕೊಡುವಲ್ಲಿ ಸಹಕರಿಸಿದರು.

















