

ಡಾ|| ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟು ಹಬ್ಬದ ಸಲುವಾಗಿ ಡಾ|| ವಿಷ್ಣುವರ್ಧನ್ ಅಭಿಮಾನಿ ಸಂಘ, ತ್ರಾಸಿ ಇವರ ವತಿಯಿಂದ ನಾರಾಯಣ ವಿಶೇಷ ಮಕ್ಕಳ ಶಾಲೆ, ತಲ್ಲೂರು ಮತ್ತು ಚೈತನ್ಯ ಸ್ಪೆಶಲ್ ಸ್ಕೂಲ್, ವಡೇರ ಹೋಬಳಿ, ಕುಂದಾಪುರ ಇವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಹಾಗೂ ಮೊವಾಡಿ, ತ್ರಾಸಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಘುರಾಮ ದೇವಾಡಿಗ ಸಹಿತ ಅಭಿಮಾನಿಗಳಾದ ಮಿಥುನ್ ಎಂ. ಡಿ. ಬಿಜೂರು, ರವಿ ಶೆಟ್ಟಿಗಾರ್, ತ್ರಾಸಿ., ಪಾಂಡುರಂಗ ದೇವಾಡಿಗ, ಗಣೇಶ ದೇವಾಡಿಗ, ಮಹೇಶ ದೇವಾಡಿಗ, ಕಿರಣ್ ದೇವಾಡಿಗ ಉಪಸ್ಥಿತರಿದ್ದರು.



