

ಶ್ರೀನಿವಾಸಪುರ : ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ವಿಶೇಷ ಕಾರ್ಯಕ್ರಮ ನಡೆಯಿತು. ಓಕೀನವ ಗೋಜೂ ರೈ ಕರಾಟೆ ತರಬೇತಿ ಶಾಲೆಯ ವತಿಯಿಂದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಹಂತಗಳ ಕರಾಟೆ ಬೆಲ್ಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತರಬೇತಿದಾರ ಎಚ್. ಎನ್. ನರಸಿಂಹಯ್ಯ ಅವರು ಬ್ಲಾಕ್ ಬೆಲ್ಟ್ ಜೊತೆಗೆ ಬ್ರೌನ್, ಗ್ರೀನ್, ಪಿಂಕ್, ಆರೇಂಜ್ ಹಾಗೂ ಎಲ್ಲೋ ಬೆಲ್ಟ್ಗಳನ್ನು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರ ಕಂಬಾಲಪಳ್ಳಿ ಶ್ರೀನಿವಾಸ್, ನಿವೃತ್ತ ಶಿಕ್ಷಕ ಶ್ರೀರಾಮರೆಡ್ಡಿ ಹಾಗೂ ಪ್ರಕಾಶ್ ಉಪಸ್ಥಿತರಿದ್ದರು.
ಕರಾಟೆ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ಕೃಷ್ಣತೇಜ ಕೆ., ಇಂದ್ರಸುತನ್ ರೆಡ್ಡಿ, ವಿಲಾಸಿನಿ, ಋಸಿಕ್, ಮೌನಿಷಾ, H.A.6 SFS ಶಾಲೆಯ ಕೆ. ಜಶ್ವಂತ್ ಶ್ರೀನಿವಾಸ್, UKG ಎಲ್. ಮಯುಖೀಶ್ರೀ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪ್ರಶಂಸೆಗೆ ಪಾತ್ರರಾದರು.

