

ಬ್ರಹ್ಮಾವರ ;ಉಡುಪಿ ಜಿಲ್ಲೆಯ ಬ್ರಹ್ಮಾವರ ಕಾಲೇಜ್ ಒಂದರ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿನಿಯು ತಾನು ಬೆಂಗಳೂರಿಗೆ ಹೋಗಿದ್ದು ವಾಪಸು ಬರುವುದಾಗಿ ಹೇಳಿರುವುದಾಗಿ ತಿಳಿದುಬಂದಿದೆ. ಹಾಸ್ಟೆಲ್ ನಿಂದ ಕಾಲೇಜಿಗೆ ಹೊರಟಿದ್ದವಳು ಕಾಲೇಜಿಗೆ ಬರದೆ ಮನೆಗೂ ಹೋಗದೆ, ನಾಪತ್ತೆ ಆಗಿರುವ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ವಿದ್ಯಾರ್ಥಿನಿಯೇ ಸ್ವತಃ ತಾನು ಬೆಂಗಳೂರಿಗೆ ಬಂದಿದ್ದು, ವಾಪಸು ಬರುವುದಾಗಿ ತಿಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಇದೀಗ ಪೋಲಿಸ್ ತನಿಖೆಯಿಂದ ಇನ್ನಷ್ಟೆ ತಿಳಿಯ ಬೇಕಾಗಿದೆ.

