

ಬಸ್ರೂರು ; ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನದ ಈಸ್ಟರ್ ಜಾಗರಣೆ ಶನಿವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಜರುಗಿತು ಚರ್ಚಿನ ಸಹಾಯಕ ಗುರುಗಳಾದ ಫಾದರ್ ಶರೂನ್ ರೋಯ್ ಡಿಸೋಜ ಇವರ ನೇತೃತ್ವದಲ್ಲಿ ನಡೆಯಿತು ಚರ್ಚಿನ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ, ಶಾಲಾ ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನೀಲ್ ಮಾರ್ಟಿಸ್ ಉಪಸ್ಥಿತರಿದ್ದರು ಈ ಸಂದರ್ಭ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಹಚ್ಚಿ ಮೆರವಣಿಗೆಯಲ್ಲಿ ಸಾಗಿ ಬಂದು ಪ್ರತಿಷ್ಠಾಪಿಸಲಾಯಿತು ಬಳಿಕ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ನಡೆಯಿತು. ಧರ್ಮ ಗುರುಗಳು ಹೊಸ ಜಲವನ್ನು ಆಶೀರ್ವದಿಸಿ ನೆರೆದ ಭಕ್ತಾದಿಗಳ ಮೇಲೆ ಪ್ರೋಕ್ಷೀಸಿದರು ಬಳಿಕ ನಡೆದ ಬಲಿ ಪೂಜೆಯಲ್ಲಿ ಯೇಸುವಿನ ಕಷ್ಟದ ದಿನಗಳ ಬಳಿಕ ಪುನರುತ್ಥಾನದ ಮೂಲಕ ವಿಶ್ವಾಸ ಸತ್ಯ ಹಾಗೂ ಜಗತ್ತಿಗೆ ಭರವಸೆ ಮತ್ತು ಶಾಂತಿಯ ಸಂಕೇತ ನೀಡಿದರು ಹಾಗೂ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು ಈ ಸಂದರ್ಭದಲ್ಲಿ ಮುಂದಿನ ಸೇವೆಗಾಗಿ ತೆರಳುತ್ತಿರುವ ಫಾದರ್ ಶರೂನ್ ಡಿಸೋಜ ಇವರನ್ನು ಗೌರವಿಸಿ ಬೀಳ್ಕೊಡಲಾಯಿತು ಅಪಾರ ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದು ಈಸ್ಟರ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.







