

ಪಡುಕೋಣೆ ;24 /12/2025 ರ ಜುಬಿಲಿ ವರ್ಷದ ಕ್ರಿಸ್ಮಸ್ ಹಬ್ಬದ ಆಚರಣೆ ಸಂಜೆ ಗಂಟೆಗೆ ಕ್ರಿಸ್ಮಸ್ ಸಂದೇಶದ ಉತ್ತಮ ದೇವರ ಸುತ್ತಿ ಗೀತೆಗಳನ್ನು ಹಾಡುವಿಕೆಯಿಂದ ಆರಂಭವಾಯಿತು. ನಂತರ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊರವರು ತುಂಬಾ ಸಂಭ್ರಮದಿಂದ ದೇವಪೀಠದ ಮಕ್ಕಳ ಜೊತೆಗೆ ಆಗಮಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಹಾಗೂ ಬಾಲಯೇಸುವಿನ ಜನ್ಮದ ಮಹಿಮೆಯ ಕುರಿತು ಪ್ರಥಮವಾಗಿ ದೇವರು ತಮ್ಮ ಮಗನನ್ನೇ ನಮಗೆ ಅರ್ಪಿಸಿದರು. ಮರಿಯ ಮತ್ತು ಜೋಸೆಫ್ ದೇವಪುತ್ರನನ್ನು ದೇವರ ಮಹಿಮೆಯಿಂದ ಪಾಲನೆ ಪೋಷಣೆ ಮಾಡಿ ನಮಗೆ ಸಮರ್ಪಿಸಿದರು. ಕ್ರಿಸ್ಮಸ್ ಹಬ್ಬ ಅಂದರೆ ಇದ್ದವರಿಗೆ ನಾವು ದಾನ ಮಾಡುವುದಲ್ಲಾ. ಬಡವರಿಗೆ ನಾವು ಸಹಾಯ ಹಸ್ತಾ ನೀಡಬೇಕು. ಸುಮ್ಮನೇ ಏಸು ನಿಮ್ಮನ್ನು ನಾವು ಪ್ರೀತಿಸುತ್ತೇವೆ, ಅಂದರೆ ಅದು ಕ್ರಿಸ್ಮಸ್ ಸಂದೇಶವಲ್ಲಾ. ನಾವು ಏನೂ ಇಲ್ಲದ ಬಡವರಿಗೆ ಪ್ರೀತಿ,ವಿಶ್ವಾಸ, ಸಹಾಯ ಹಸ್ತ ನೀಡುವನೇ ನಿಜವಾದ ಏಸುಕ್ರಿಸ್ತರನ್ನು ಪ್ರೀತಿಸುವ ಕ್ರೈಸ್ತ ಎಂದು ತಮ್ಮ ಪ್ರಸಂಗದಲ್ಲಿ ತಿಳಿಸಿದರು. ಸುಮಾರು 700 ಕ್ಕೂ ಹೆಚ್ಚಿನ ಭಕ್ತರು ಈ ಕ್ರಿಸ್ಮಸ್ ಸಂಭ್ರಮದ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡು ತಮ್ಮ ಮನದಾಳದ ಪ್ರಾರ್ಥನೆ ಕೋರುವಿಕೆ ಬಾಲಯೇಸುವಿನಲ್ಲಿ ಸಮರ್ಪಿಸಿದರು. ಹಾಗೆಯೇ ಬಲಿ ಪೂಜೆಯ ನಂತರ ಬಾಲಯೇಸುವಿನ ಜನುಮದ ಸವಿ ನೆನಪಿನ ಪುಟ್ಟ ವಿಗ್ರಹಕ್ಕೆ ಭಕ್ತಾಧಿಗಳು ನಮನ ಸಲ್ಲಿಸಿದರು.
ತದನಂತರ ಭಕ್ತಾದಿಗಳು ಚರ್ಚಿನ ವಠಾರದಲ್ಲಿ ಪ್ರತ್ಯೇಕವಾಗಿ ಸೂಚಿಸಿದ ತಮ್ಮ 9 ವಾರ್ಡ್ ಗಳಲ್ಲಿ ನಿಂತರು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶುಭ ಸಂದೇಶದ ಗುರುತಾಗಿ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊ, ಪಾಲನ ಮಂಡಳಿಯ ಉಪಾಧ್ಯಕ್ಷ ರಾದ ಪ್ರಭು ಕೆನಡಿ ಪಿರೇರಾ, ಕಾರ್ಯದರ್ಶಿ, ಅಲೆಕ್ಸ್ ಎಂಟನಿ ಡಿ’ಸೋಜ, ಅಯೋಗಾದ ಅಧ್ಯಕ್ಷ ರಾದ ವಿನ್ಸೆಂಟ್ ಡಿ’ಸೋಜ ರವರು ವೇದಿಕೆಯ ಲ್ಲಿದ್ದು ಕೇಕ್ ಕತ್ತರಿಸಿ, ಸರ್ವರಿಗೂ ಹಂಚಿ ಎಲ್ಲಾ ಭಕ್ತಾದಿಗಳು ತಮ್ಮ ಶುಭಾಶಯವನ್ನು ಒಬ್ಬ ರಿಗೊಬ್ಬರು ಕೋರಿದರು. ಈ ಎಲ್ಲಾ ಕಾರ್ಯಕ್ರಮದ ಪ್ರಾಯೋಜಕರು, ಚರ್ಚಿನ ವೈ.ಸಿ.ಎಸ್. ಆಗಿದ್ದು, ಪ್ರತಿ ಕುಟುಂಬಗಳಿಗೂ ವಿವಿಧ ರೀತಿಯ (ಕುಸ್ವಾರ್)ನ್ನು ಹಂಚಿದರು. ಚರ್ಚಿನಲ್ಲಿ ಬಾಲಯೇಸು ಜನಿಸಿದ ರೀತಿಯ ರೂಪಕದ ದನದ ಕೊಟ್ಟಿಗೆಯನ್ನು ಮನಸೆಳೆಯುವಂತೆ ಬ್ರದರ್ ಲಿಸ್ಟ್ ನ್ ಗೊನ್ಸಾಲಿಸ್, ರೈನಿಯರ್ ಬುತ್ತಲ್ಲೊ, ಲೆಸ್ಟರ್ ಆಲ್ಮೇಡಾ, ಸ್ಟೀವನ್ ಫೆರ್ನಾಂಡಿಸ್, ಸ್ಟ್ಯಾಲನ್ ಫೆರ್ನಾಂಡಿಸ್ ರವರ ರಚಿಸಿದ್ದರು.




















