

ಕುಂದಾಪುರ, ಜೂ, 7. 2026 : ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 7 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಪೌಲ್ ರೇಗೊ, ಸರ್ವ ಆಯೋಗಗಳ ಸಂಯೋಜಕಿ ಶೋಭ ವಾಜ್, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಶಿಕ್ಷಕ, ಕ್ರೈಸ್ತ ಶಿಕ್ಷಣ ಪಡೆಯುವ ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ರೇಖಾ ಡಿಆಲ್ಮೇಡಾ ಇವರುಗಳು ಹೂ ಗೀಡಗಳಿಗೆ ನೀರು ಎರೆಯುವ ಮೂಲಕ ಕ್ರೈಸ್ತ ಶಿಕ್ಷಣದ ಶಿಕ್ಷಣಕ್ಕೆ ಚಾಲನೆಯನ್ನು ನೀಡಿದರು.
‘ನಮ್ಮ ಮಕ್ಕಳು ನೀತಿವಂತರಾಗಲು ಕ್ರೈಸ್ತ ಶಿಕ್ಷಣ ಅಗತ್ಯವಿದೆ, ಈ ಶಿಕ್ಷಣದಿಂದ ವಂಚೀತರಾಗದಿರಲು ಹೆತ್ತವರು ಶ್ರಮ ಪಡಬೇಕು, ಕ್ರೈಸ್ತ ಶಿಕ್ಷಣ ಪಡೆದವರು ನೀತಿವಂತರಾಗಿ ಬಾಳಲು ಸಹಕಾರಿಯಾಗುತ್ತೆ, ಇಂದಿನ ವರ್ಷ “ವಿಶ್ವಾಸದ ಜೀವನ ಸಾರಿದರೆ ಬಾಳು ಸುಂದರ’ ಎಂಬ ಧ್ಯೇಯ ವಾಕ್ಯವಾಗಿದೆ, ಅದರಂತೆ ನಾವು ನಡೆದುಕೊಳ್ಳೋಣ ಎಂದು ’ ಫಾ।ರೇಗೊ ಸಂದೇಶ ನೀಡಿದರು.
ಶಿಕ್ಷಕ – ಶಿಕ್ಷಕಿಯರು ಪ್ರತಿಜ್ಞಾ ಸ್ವೀಕಾರ ಮಾಡಿದರು. ಅವರನ್ನು ಗುರುಗಳು ಆಶಿರ್ವದಿಸಿದರು. ಶಿಕ್ಷಕಿ ಸೆಲಿನ್ ಬರೆಟ್ಟೊ ಕಾರ್ಯಕ್ರಮ ನಿರ್ವಹಿಸಿದರು.














