ರಿಯಾದ್: ಸೌದಿ ಅರೇಬಿಯಾದ ತೈಫ್ ಬಳಿಯ ಮಹ್ಲುಮಿಯಾದಲ್ಲಿ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಇಬ್ಬರು ಮಲಯಾಳಿಗಳು ಸಾವನ್ನಪ್ಪಿದ್ದಾರೆ. ರಿಯಾದ್‌ನ ಹೋತಾದಿಂದ ಮೆಕ್ಕಾಗೆ ಹೊರಟಿದ್ದ ಬಸ್ ಟೈರ್ ಸ್ಫೋಟಗೊಂಡು ಉರುಳಿಬಿದ್ದಿದೆ. ಮೃತರನ್ನು ಮಲಪ್ಪುರಂನ ನೀಲಂಬೂರು ಮೂಲದ ಇಸ್ಮಾಯಿಲ್ ಮತ್ತು ಕೊಲ್ಲಂನ ಪಠಾಣಪುರಂ ಮೂಲದ ಶೀಬಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸುಮಾರು ಇಪ್ಪತ್ತು ಮಲಯಾಳಿಗಳು ಗಾಯಗೊಂಡಿದ್ದಾರೆ. ಬಸ್‌ನಲ್ಲಿ ವಿವಿಧ ರಾಜ್ಯಗಳ ಅನೇಕ ಜನರು ಇದ್ದರು.

Read More

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಕರ್ನಾಟಕ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಫೆ.೨೩ ರಂದು ಮೊಗವೀರ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ, ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಅರಣ್ಯಹಕ್ಕು ಹೋರಾಟಗಾರರ ವೇದಿಕೆಯ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಗ್ರ ಮಾತುಕತೆ ನಡೆಸಲಾಯಿತು. ಈ ಸಭೆಯಲ್ಲಿ ಸಚಿವರಾದ ಶ್ರೀ ಮಂಕಾಳ ವೈದ್ಯ ಅವರು ಉಪಸ್ಥಿತರಿದ್ದರು.

Read More

ಕುಂದಾಪುರ; “ಸಾಹಿತಿ, ವಾಗ್ಮಿ, ವಿಮರ್ಶಕ, ಅಂಕಣಗಾರರಾಗಿ ಸಾಹಿತ್ಯ ಲೋಕಕ್ಕೆ ಬಹು ದೊಡ್ಡ ಕೊಡುಗೆ ನೀಡಿದವರು ಕೋಣಿ ಶಿವಾನಂದ ಕಾರಂತರು. ಅಧ್ಯಯನಶೀಲರಾಗಿ ತಮ್ಮ ಪಾಂಡಿತ್ಯದಿಂದ ಯುವ ಬರಹಗಾರರಿಗೆ ಪ್ರೇರಣೆ ತುಂಬುತ್ತಿದ್ದ ಕಾರಂತರು ಹಲವಾರು ಲೇಖಕರ ಕೃತಿಗಳ ವಿಮರ್ಶೆ ಮಾಡಿ ತಿದ್ದಿ ಪ್ರೋತ್ಸಾಹಿಸುವ ಮೂಲಕ ಸ್ಫೂರ್ತಿ ತುಂಬುತ್ತಿದ್ದರು. ಅವರ ಪ್ರಕಟಿತ ಕೃತಿಗಳು ಅಮೂಲ್ಯವಾಗಿದ್ದವು. ಗಂಗೊಳ್ಳಿಯಲ್ಲಿ ನಡೆದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ “ಗಂಗಾವಳಿ” ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕೋ. ಶಿವಾನಂದ ಕಾರಂತರ ಕುರಿತು ಪುಸ್ತಕ ಪ್ರಕಟಣೆ ಮಾಡಿದ್ದೆವು. ಅವರ […]

Read More

ಶ್ರೀನಿವಾಸಪುರ ಪಟ್ಟಣದಲ್ಲಿ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳ ಜೊತೆಗೆ ವ್ಯಾಪಾರ ಚಟುವಟಿಕೆಗಳೂ ಗರಿಗೆದರಿವೆ. ವಿಶೇಷವಾಗಿ ಇಫ್ತಾರ್ ವೇಳೆ ಸೇವಿಸುವ ತಿಂಡಿಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಸಮೋಸಗಳಿಗೆ ಅಪಾರ ಬೇಡಿಕೆ ಕಂಡುಬರುತ್ತಿದೆ. ಸಣ್ಣ ಪಟ್ಟಣವಾಗಿದ್ದರೂ ಪ್ರತಿದಿನ ಸರಾಸರಿ 25 ಸಾವಿರದಿಂದ 30 ಸಾವಿರದವರೆಗೆ ಸಮೋಸಗಳು ಮಾರಾಟವಾಗುತ್ತಿರುವುದು ಗಮನಾರ್ಹವಾಗಿದೆ. ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದವರು ಪ್ರಾತಃಕಾಲದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸಿ, ಸಂಜೆ ಮಗರಿಬ್ ನಮಾಜಿನ ಬಳಿಕ ಇಫ್ತಾರ್ ಮೂಲಕ ಉಪವಾಸ ಮುರಿಯುತ್ತಾರೆ. ಖರ್ಜೂರ, ಹಣ್ಣುಹಂಪಲು, ರೂಹ್ ಅಫ್ಜಾ ಪಾನೀಯ, […]

Read More

ತಾಲೂಕು ಆಡಳಿತ ಗ್ರಾಮ ಕಡೆ ಕಾರ್ಯಕ್ರಮಕ್ಕೆ ಚಾಲನೆ : ಅರ್ಹರಿಗೆ ಸವಲತ್ತು ತಲುಪಿಸುವುದು ನನ್ನ ಗುರಿ – ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಶ್ರೀನಿವಾಸಪುರ : ಬಡಬಗ್ಗರ ಪರ ಕಾಳಜಿ ಹೊಂದಿರುವ ನಾನು, ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳು ಅರ್ಹರಿಗೆ ತಲುಪುವಂತೆ ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿದರು. ತಾಲೂಕಿನ ಅಡ್ಡಗಲ್ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ನಡೆದ ತಾಲೂಕು ಆಡಳಿತ ಗ್ರಾಮ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಐದು ಬಾರಿ ಶಾಸಕನನ್ನಾಗಿ ಮಾಡಿದ […]

Read More

ದಿನಾಂಕ 22.2.2026 ರ಼ಂದು ಪಡುಕೋಣೆ ಚರ್ಚ್ಚನಲ್ಲಿ ಕ್ರೆಸ್ತ ಧಾರ್ಮಿಕ ಶಿಕ್ಷಣ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.. ಚರ್ಚನ ಧರ್ಮ ಗುರುಗಳಾದ ವಂದನೀಯ ಫಾ!ಪ್ರಾನ್ಸಿಸ್ ಕರ್ನೆಲಿಯೊ ಮತ್ತು ಡೊನ್ ಬೊಸ್ಕೊ ಸಂಸ್ಥೆಯ ಆಡಳಿತಾಧಿಕಾರಿಯವರಾದ ವಂದನೀಯ ಫಾ! ಅರ್ನೊಲ್ಡ್ ಮಥಾಯಸ್, ದೇವ ಪೀಠದಮಕ್ಕಳು, ಕ್ರೖಸ್ತ ಶಿಕ್ಷಣದ ಮಕ್ಕಳು, ಶಿಕ್ಷಕರು ಹಾಗೂ ಸುಮಾರು 400 ಮಂದಿ ಭಕ್ತರ ಜೊತೆ ಗೂಡಿ ಪವಿತ್ರ್ ಬಲಿ ಪೂಜೆಯನ್ನು ಅರ್ಪಿಸಿದರು,ಫಾ!ಅರ್ನೊಲ್ಡ್ ರವರು ಬಲಿಪೂಜೆಯ ತಮ್ಮ ಸಂದೇಶ ದಲ್ಲಿ ನಾವು ಒಳ್ಳೆ ಯದನ್ನು ಮಾಡುವಾಗ, ಹಾಗೆಯೇ ಪ್ರಾರ್ಥನೆ […]

Read More

ಮದರ್ ತೆರೆಸಾ ಶಾಲೆಯಲ್ಲಿ ದಿನಾಂಕ 14/2/2026ರಂದು ಹಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಕು. ಗ್ರೇಸಿ ಇವರು ನೆರವೇರಿಸಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಸಲುವಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಕುಮಾರಿ ಶಮಿತಾ ರಾವ್ ಹಾಗೂ ರೇನಿಟಾ ಲೋಬೋ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳು,ತೀರ್ಪುಗಾರರೂ ಆಗಿರುವ ಶ್ರೀಮತಿ ಸಂಧ್ಯಾ ರಾವ್( ಕಂಟ್ರಿ ಮ್ಯಾನೇಜರ್ ಅಮೇರಿಕನ್ ಏರ್ ಲೈನ್ಸ್ ) ಶ್ರೀ ಯಶ್ ಆರ್ಯನ್ […]

Read More

ಕುಂದಾಪುರ; ಸಮ್ಮೇಳನವು ಔಪಚಾರಿಕ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು  ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಹೆಯ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಮನೋವೈದ್ಯಶಾಸ್ತ್ರ ನರ್ಸಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ  ಶ್ರೀ ರೆಂಜುಲಾಲ್ ಯೆಶೋಧರನ್ ಅವರು  ದೀಪ ಬೆಳಗಿಸಿ ಉದ್ಘಾಟಿಸಿದರು.ಮುಖ್ಯ ಅತಿಥಿಗಳು ತಮ್ಮ  ಭಾಷಣದಲ್ಲಿ, ವೈದ್ಯಕೀಯ-ಕಾನೂನು ಪ್ರಕರಣಗಳಲ್ಲಿ ದಾದಿಯರ ನಿರ್ಣಾಯಕ ಪಾತ್ರ, ಸಾಕ್ಷ್ಯ ಸಂರಕ್ಷಣೆ, ಸಂತ್ರಸ್ತರ ಆರೈಕೆ ಮತ್ತು ಕ್ಲಿನಿಕಲ್ ಅಭ್ಯಾಸದಲ್ಲಿ ಕಾನೂನು ಜವಾಬ್ದಾರಿಗಳನ್ನು ಒತ್ತಿ ಹೇಳಿದರು. ಅವರ ಭಾಷಣವು ವಿಧಿವಿಜ್ಞಾನ ನರ್ಸಿಂಗ್‌ನ ವಿಸ್ತರಿಸುತ್ತಿರುವ ವ್ಯಾಪ್ತಿ ಮತ್ತು ಅದರ […]

Read More

ಸ್ಮಾರ್ಟ್ ಕ್ಲಾಸ್ ಚಾಲನೆ, 2026–27ರಿಂದ ಉಚಿತ ಪಿಯುಸಿ ವಿಜ್ಞಾನ ಹಾಗೂ ಸ್ಪರ್ಧಾತ್ಮಕ ತರಗತಿಗಳ ಘೋಷಣೆ ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೈಲಾರಪ್ಪ ಅವರು ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಅವರು ಸಮಗ್ರವಾಗಿ ಅವಲೋಕಿಸಿದರು. ಈ ವೇಳೆ ಸರ್ಕಾರದಿಂದ ನೂತನವಾಗಿ ಮಂಜೂರಾದ ಸ್ಮಾರ್ಟ್ ಕ್ಲಾಸ್ […]

Read More
1 11 12 13 14 15 274