ಶ್ರೀನಿವಾಸಪುರ, ಜುಲೈ 15: ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರದಂದು ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ, ಡಿಸಿ ಸಿ ಬ್ಯಾಂಕಿನ ನಿರ್ದೇಶಕಿಯಾಗಿ ಆಯ್ಕೆಯಾದ ನಾಗರತ್ನಮ್ಮ ಹಾಗೂ ಕೋಮುಲ್ ನಿರ್ದೇಶಕರಾಗಿ ಆಯ್ಕೆಯಾದ ಕೆ.ಕೆ. ಮಂಜುನಾಥ್ ರೆಡ್ಡಿ ಮತ್ತು ಎನ್. ಹನುಮೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬೈರಾರೆಡ್ಡಿ ವಹಿಸಿದ್ದರು. ಸಂಘದ ಕಾರ್ಯದರ್ಶಿ ಶಿವಾರೆಡ್ಡಿ, ನಿರ್ದೇಶಕರಾದ ಶಬ್ಬೀರ್ ಅಹ್ಮದ್, ದ್ವಾರಸಂದ್ರದ ಮುನಿವೆಂಕಟರೆಡ್ಡಿ, […]

Read More

ಶ್ರೀನಿವಾಸಪುರ, ಜುಲೈ 12: ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಉರ್ದು ಹಾಗೂ ಇಂಗ್ಲಿಷ್ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್‌ಡಿಎಂಸಿ) ಹಾಗೂ ಪೋಷಕರ ಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ, ನೈತಿಕ ಮೌಲ್ಯಗಳು, ಹಾಗೂ ಶಾಲೆಯ ಮೂಲಭೂತ ಸೌಲಭ್ಯಗಳ ಕುರಿತಾಗಿ ವಿಶ್ಲೇಷಣಾತ್ಮಕ ಚರ್ಚೆ ನಡೆಯಿತು. ಪೋಷಕರು ನೇರವಾಗಿ ಶಿಕ್ಷಕರೊಂದಿಗೆ ಮಕ್ಕಳ ಹಾಜರಾತಿ, ಪಠ್ಯದಲ್ಲಿ ಆಸಕ್ತಿ, ಹಾಗೂ ದಿನನಿತ್ಯದ ಕಾರ್ಯವೈಖರಿಯ ಬಗ್ಗೆ ಮಾತುಕತೆ ನಡೆಸಿದರು. ಪೋಷಕರು ತಮ್ಮ […]

Read More

ಶ್ರೀನಿವಾಸಪುರ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ವರ್ಗಾವಣೆ ಯಾಗಿರುವ ವೈದ್ಯರಾದ ರಂಗರಾವ್, ನಿರಂಜನ್ ರವರನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.ಆಸ್ಪತ್ರೆ ಆಡಳಿತ ಅಧಿಕಾರಿ ಜಿ.ಎಸ್.ಶ್ರೀನಿವಾಸ್, ವೈದ್ಯರಾದ ಉಮಾಶಂಕರ್, ದಿವಾಕರ್, ಸಂಗೀತ, ವರಲಕ್ಷ್ಮಿ, ಫಾರ್ಮಾಸಿಗಳಾದ ಕಲ್ಲೇಶ್ ಕುಮಾರ್, ಮಹ್ಮದ್‍ಆಲಿ, ಮಂಜುನಾಥ್, ಶಿವಕುಮಾರ್, ಸಿಬ್ಬಂದಿಗಳಾದ ಕವಿತಾ, ಉಮಾ ಇದ್ದರು.

Read More

ಶ್ರೀನಿವಾಸಪುರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ಸರಬರಾಜು ಮಾಡುತ್ತಿರುವ ಕೆಸಿ ವ್ಯಾಲಿ ಮತ್ತು ಎಚ್ಚೆನ್ ವ್ಯಾಲಿ ನೀರು ಕಲುಷಿತವಾಗಿದೆ.ಕೊಳಚೆ ನೀರನ್ನು ಸಂಸ್ಕರಿಸಿ ಕುಡಿಯುವ ಶುದ್ಧ ನೀರಾಗಿ ಮಾಡಿಸುವ ತಂತ್ರಜ್ಞಾನ ಇಂಡಿಯಾ ಅಲ್ಲಾ ವಿಶ್ವದ ಯಾವ ದೇಶದಲ್ಲೂ ಇಲ್ಲ.ಆದರೂ ನಮ್ಮ ರಾಜ್ಯ ಸರ್ಕಾರ-ಅದನ್ನು ಶುದ್ಧ ನೀರು ಎಂದು ಕೆರೆಗಳಿಗೆ ಸರಬರಾಜು ಮಾಡುವ ಮೂಲಕ ರೈತರಿಗೆ ಮಂಕು ಬೂದಿ ಎರಚುತ್ತಿದೆ ಎಂದು ಯುವ ಜೆಡಿಎಸ್‌ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.ತಾಲ್ಲೂಕಿನ ಪುಂಗನೂರು ಕ್ರಾಸ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಬೃಹತ್ […]

Read More

ಶ್ರೀನಿವಾಸಪುರ : ಪಟ್ಟಣದ ಪ್ರಮುಖ ಸಾರಿಗೆ ಮಾರ್ಗವೊಂದಾದ ಎಂ.ಜಿ. ರಸ್ತೆ ಮೂಲಕ ಸರ್ಕಾರಿ ಆಸ್ಪತ್ರೆ (ರಾಮಕೃಷ್ಣ ರಸ್ತೆ) ಕಡೆಗೆ ಹೋಗುವ ದಾರಿಯಲ್ಲಿ ಸಾರ್ವಜನಿಕರು ಪ್ರತಿದಿನ ಜಾರುವಿಕೆ, ಪತನ ಮತ್ತು ಗಾಯಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಅನುಮಾನಾಸ್ಪದ ತಿರುವಿನಲ್ಲಿ ನೀರಿನ ಪೈಪ್‌ಗೆ ಸಂಬಂಧಪಟ್ಟಂತೆ ಗೇಟ್ ವಾಲ್ ಅಳವಡಿಸಲಾಗಿದೆ. ಈ ಗೇಟ್‌ವಾಲ್‌ ಸುತ್ತಲೂ ಸರಿಯಾಗಿ ದಾರಿಯ ವ್ಯವಸ್ಥೆ ಇಲ್ಲದಿರುವುದರಿಂದ ಬೈಕ್‌ ಸವಾರರು, ವೃದ್ಧರು, ಶಾಲಾ ವಾಹನಗಳು, ಹಾಗೂ ಆಂಬುಲೆನ್ಸ್‌ಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಗುಣಿಗಳ ಮೇಲೆ ನಿಯಂತ್ರಣ […]

Read More

ಶ್ರೀನಿವಾಸಪುರ: ಪಟ್ಟಣದ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಿ ಗುರುವಾರ ಗುರು ಪೂರ್ಣಿಮಾ ಅಂಗವಾಗಿ ದೇವಾಲಯದ 16ನೇ ವಾರ್ಷಿಕೋತ್ಸವವು ಧಾರ್ಮಿಕ ಸಾನಿಧ್ಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೂಲ ವಿಗ್ರಹಕ್ಕೆ ಹಾಲು, ಗಂಧದಿಂದ ಅಭಿಷೇಕ ನಡೆಸಿ, ವಿಶೇಷ ಅಲಂಕಾರ ಮಾಡಲಾಯಿತು. ಪೂಜಾ ಕಾರ್ಯಕ್ರಮಗಳನ್ನು ಅರ್ಚಕ ಶಿವಂಪಾಂಡ್ಯ ಅವರು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು. ದೇವಾಲಯದ ಧರ್ಮದರ್ಶಿ ಕೆ.ಆರ್. ಕೇದಾರನಾಥ್ ಸೇರಿದಂತೆ ವಾಸವಿ ಸಿಸ್ಟರ್ ಪಿ. ನಾಗಮಣ ಮೋಹನ್, ಅಶ್ವಿನಿ, ಅಶ್ವನಾಥನಾರಾಯಣ ಶೆಟ್ಟಿ, ರಾಮನಾಥ್, ಬಾಬು, ಶ್ರೇಯಸ್, ಕಾರ್ತಿಕ್, ಚಿನ್ಮಯಿ, ಬಾಲಾಜಿ, ಬದ್ರಿ ಮತ್ತು […]

Read More

ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಚೇರಿಯ ಸಭಾಂಗಣದಲ್ಲಿ ಗುರುವಾರ ಖ್ಯಾತ ವಚನಕಾರ ಹಡಪದ ಅಪ್ಪಣ್ಣ ರವರ ಜಯಂತಿಯನ್ನು ಆಚರಣೆ ಮಾಡಲಾಯಿತು.ಕಂದಾಯ ನಿರೀಕ್ಷಕ ಎಸ್.ಶಂಕರ್, ಸದಸ್ಯ ಸಂಜಯ್‍ಸಿಂಗ್, ಸಿಬ್ಬಂದಿಗಳಾದ ಸಂತೋಷ್, ಸುರೇಶ್, ಶಿವಪ್ರಸಾದ್, ನಾಗೇಶ್, ಮಂಜುನಾಥ್, ವೆಂಕಟೇಶಯ್ಯ, ಸೀತಾರಾಮರೆಡ್ಡಿ, ಶ್ರೀನಿವಾಸ್, ಭಾಗ್ಯಮ್ಮ ಇದ್ದರು.

Read More

ಶ್ರೀನಿವಾಸಪುರ : ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡದೇ ಅಧ್ಯಯನ ಮಾಡಬೇಕು .ಅಧ್ಯಯನವನ್ನು ಇಷ್ಟಪಟ್ಟು ಮಾಡಬೇಕು. ಯಾವುದೇ ಕೆಲಸವನ್ನು ಇಷ್ಟವಿಲ್ಲದೇ ಮಾಡಿದರೆ ಅದು ಫಲನೀಡುವುದಿಲ್ಲ. ಹಾಗಾಗಿ ಅಧ್ಯಯನದಲ್ಲಿ ಶ್ರದ್ಧೆ, ಛಲ, ಸಮಯಪಾಲನೆ ಸೇರಿದಂತೆ ಶಿಸ್ತುಬದ್ದ ಜೀವನ ನಡೆಸುವ ಮೂಲಕ ಯಶಸ್ಸುಗಳಿಸಬೇಕು ಎಂದು ದಾನಿ ಕಾಣಿಪಾಕಂ ದೇವಾಲಯದ ಉಪಪ್ರಧಾನ ಅರ್ಚಕ ಎಸ್.ಎಸ್.ಗಣೇಶ್‍ ಗುರುಕುಲ್ ಹೇಳಿದರು.ತಾಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಡಶಾಲೆಯ 136 ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಲೇಖನಿ ಸಾಮಾಗ್ರಿಗಳನ್ನು , ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.ನಾನು ವಿದ್ಯಾಬ್ಯಾಸ ಮಾಡಿರುವ ಶಾಲೆಗೆ ನನ್ನಿಂದಾಗುವ […]

Read More

ಕೋಲಾರ : ಅಲ್ಪಸಂಖ್ಯಾತರ ಸಮುದಾಯಕ್ಕಾಗಿ ಜಾರಿಗೊಳಿಸಲಾಗಿರುವ ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮಗಳ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ವಿವಿಧ ಇಲಾಖೆಗಳಡಿ ಅಲ್ಪಸಂಖ್ಯಾತರಿಗಾಗಿ ಇರುವ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಕೂಡಲೇ ಸಾಧಿಸುವಂತೆ ನಿರ್ದೇಶನ ನೀಡಿದರು. ಶೈಕ್ಷಣಿಕ ಸೌಲಭ್ಯ ಕಲ್ಪಿಸುವುದು, ತಂತ್ರಜ್ಞಾನ ತರಬೇತಿ ಮೂಲಕ ಕೌಶಲ್ಯ ಕಾರ್ಯಕ್ರಮ ತಲುಪಿಸುವುದು, ಆರ್ಥಿಕ ಚಟುವಟಿಕೆ ಬಲಪಡಿಸಲು ಸಾಲ ಸೌಲಭ್ಯ ಕಲ್ಪಿಸುವುದು. ನಾಗರಿಕ ಸೇವೆಗಳ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, […]

Read More
1 31 32 33 34 35 384