ಶ್ರೀನಿವಾಸಪುರ : ಕಳೆದ ವರ್ಷ ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರವು ಧಾವಿಸಿದ್ದು, ಎರಡು ಜಿಲ್ಲೆಗಳಿಗೆ ಒಟ್ಟು 40 ಕೋಟಿ 49 ಲಕ್ಷ ಹಣವನ್ನು ಬಿಡುಗಡೆ ಮಾಡಿದೆ ಎಂದು ಮಾವು ಮಂಡಳಿ ಅಧ್ಯಕ್ಷ ಮುದ್ದುಗಂಗಾಧರ್ ಅವರು ತಿಳಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡುಗಡೆಯಾದ ಈ ಅನುದಾನವನ್ನು ಈಗಾಗಲೇ ನಷ್ಟಕ್ಕೊಳಗಾದ ಮಾವು ರೈತರಿಗೆ ವಿತರಿಸಲಾಗಿದ್ದು, ಪ್ರತಿ ಕ್ವಿಂಟಾಲ್ ಮಾವಿಗೆ 440 ರೂ […]
ಶ್ರೀನಿವಾಸಪುರ : ಪ್ಲಾಸ್ಟಿಕ್ ತೆಗೆಯರಿ, ಪರಿಸರ ಉಳಿಸಿ ಎಂಬ ಘೋಷಣೆ ಮೂಲಕ ನಾಗರೀಕರಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಅರಿವು ಮೂಡಿಸಿದರುಪಟ್ಟಣ ಪುರಸಭೆ ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗು ಸ್ವಚ್ಚತೆ ಜಾಗೃತಿ ಮೂಡಿಸುವ ಸಲುವಾಗಿ ಹೋಟಲ್, ಬೇಕರಿ, ಹಣ್ಣು ತರಕಾರಿ ಹಾಗು ವಾಣಿಜ್ಯ ಅಂಗಡಿಗಳಿಗೆ ದಿಡೀರ್ ಬೇಟಿ ನೀಡಿ ಮಾತನಾಡಿದರು.ಎಂಜಿ ರಸ್ತೆಯಲ್ಲಿನ ಪುಟ್ಪಾತ್ ಅಂಗಡಿಗಳನ್ನು ತೆರವುಗೊಳಿಸಿದರು. ಮುಳಬಾಗಿಲು ವೃತ್ತದಲ್ಲಿ ಕಸ ಹಾಕುವ ಸ್ಥಳದಲ್ಲಿ ರಂಗೋಲಿ ಬಿಡಿಸಿ, ಈ ಸ್ಥಳದಲ್ಲಿ ಗಲೀಜು ಹಾಕದಂತೆ ಅರಿವು ಮೂಡಿಸಿದರು. ಸ್ವಚ್ಚತೆ […]
ಶ್ರೀನಿವಾಸಪುರ: ಸಾರ್ವಜನಿಕರು ಹಲ್ಲಿನ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಅದಕ್ಕೆ ಪೂರಕವಾಗಿ ಅಗತ್ಯವೆನಿಸಿದರೆ ದಂತ ವೈದ್ಯರ ಸಲಹೆ ಪಡೆಯಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಹೊಸ ಪುರಸಭೆ ಕಚೇರಿ ಮುಂಭಾಗದಲ್ಲಿ ಬುಧವಾರ ಏರ್ಪಡಿಸಿದ್ದ ರಾಜೇಶ್ ಡೆಂಟಲ್ ಅಂಡ್ ಇಂಪ್ಲ್ಯಾಂಟ್ ಕೇರ್ ದಂತ ಚಿಕಿತ್ಸಾಲಯದ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ನಾಗರಿಕರ ಸೇವೆಗೆ ನೂತನ ದಂತ ಚಿಕಿತ್ಸಾಲಯ ಪ್ರಾರಂಭಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಹಲ್ಲಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಕಂಡುಬರುತ್ತಿಲ್ಲ. ಹಾಗಾಗಿ […]
ಶ್ರೀನಿವಾಸಪುರ : ಮುಖ್ಯವಾಗಿ ನಮ್ಮ ಸ್ವಂತ ತಾಲೂಕನ್ನು ಭ್ರಷ್ಟಚಾರ ಮುಕ್ತ ಮಾಡುವುದೇ ನನ್ನ ಉದ್ದೇಶ. ನಾವು ಸ್ವರಾಜ್ಯ ಮಾಡಬೇಕು ಎನ್ನುವ ಉದ್ದೇಶ ನಮಗೆ ಆದರೆ ಹಳ್ಳಿಗಳ ಕಡೆ ಕರೆಪ್ಷನ್ ಮಾಡುತ್ತಿದ್ದಾರೆ ಎಂದು ರಾಜ್ಯ ಉಪಲೋಕಾಯುಕ್ತಾ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ವಿವಿಧ ಗ್ರಾ.ಪಂ. ಕಚೇರಿಗಳಿಗೆ ಮಂಗಳವಾರ ಬೇಟಿ ನೀಡಿ ವಿವಿಧ ಕಾಮಗಾರಿಗಳ ಹಾಗು ಇತರೆ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದರು. ಎಲ್ಲಿ ಹೋದರು ನಿಮ್ಮ ತಾಲೂಕು ಸರಿಮಾಡಿ ಎಂದು ಹೇಳುತ್ತಾರೆ ಇದರಿಂದಾಗಿ ಪದೇ ಪದೇ ನಮ್ಮ ತಾಲೂಕುನ್ನು ಸರಿಪಡಿಸಲು ತಾಲೂಕಿಗೆ […]
ಶ್ರೀನಿವಾಸಪುರ : ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಡಕುಟುಂಬಗಳ ಸಂಖ್ಯೆ ಹೆಚ್ಚಿರುವುದರಿಂದ, ಅವರ ಬದುಕಿಗೆ ಬಲವರ್ಧಕ ಯೋಜನೆಗಳನ್ನು ಜಾರಿಗೊಳಿಸುವುದೇ ತಮ್ಮ ಪ್ರಮುಖ ಧ್ಯೇಯವಾಗಿರುವುದಾಗಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿದರು. ತಾಲೂಕಿನ ರೋಣೂರು , ನಾರಮಾಕಪಳ್ಳಿ ಸಂಪರ್ಕ ರಸ್ತೆಯ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಒಆರ್ಎಫ್ ಯೋಜನೆಯಡಿ 3.40 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. ಗೌನಿಪಳ್ಳಿ , ಬಿ.ಕೊತ್ತಕೋಟ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ದ್ವಿಚಕ್ರವಾಹನ ಸವಾರರು, ಸರಕು ವಾಹನ ಚಾಲಕರು, ಬಸ್ […]
ಶ್ರೀನಿವಾಸಪುರ : ಶ್ರೀನಿವಾಸಪುರ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ರಮೇಶ್ ಕುಮಾರ್ ಅವರು ನೀಡಿದ ಕೊಡುಗೆಯನ್ನು ನಿರಾಕರಿಸುವಂತಿಲ್ಲ. ಇಂತಹ ಸಂದರ್ಭದಲ್ಲಿ ಹಾಲಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ನಿರಂತರವಾಗಿ ಅವರ ಹೆಸರನ್ನು ಎತ್ತಿ ಆರೋಪ ಮಾಡುವುದು ಅನಗತ್ಯವಲ್ಲದೆ ಕಾಲಹರಣವೆಂದು ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪಿಎಲ್ಡಿ ಬ್ಯಾಂಕ್ ಕಚೇರಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ವೇದಿಕೆ ಎಂದರೆ ಭಾಷೆಯ ಗೌರವ. ಆದರೆ ಆ ವೇದಿಕೆಯನ್ನೇ ಬಳಸಿ ಮಾಜಿ ಶಾಸಕ ರಮೇಶ್ […]
ಶ್ರೀನಿವಾಸಪುರ : ಈ ಭಾಗದಲ್ಲಿ ಸಂಭವಿಸಿದ ವಿವಿಧ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದೆ ಸಾವನ್ನುತ್ತಿರುವುದು ಆತಂಕಕಾರಿ ಇಂತಹ ದುರ್ಘಟನೆಗಳು ತಪ್ಪಿಸುವ ಉದ್ದೇಶದಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಸಾರ್ವಜನಿಕರಲ್ಲಿ ಎಂದು ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಮನವಿ ಮಾಡಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ಪೊಲೀಸ್ ಇಲಾಖೆ ವತಿಯಿಂದ ಹೆಲ್ಮೆಟ್ ಹಾಕದೆ ಇರುವ ಗಾಡಿಗಳನ್ನು ಹಿಡಿದು ಅರಿವು ಮೂಡಿಸಿದರು. ನಮ್ಮ ಜಿಲ್ಲಾ ರಕ್ಷಣಾಧಿಕಾರಿಗಳಾದ ಬಿ.ನಿಖಿಲ್ರವರು ಕಳೆದ ಒಂದುವಾರದಿಂದಲೂ ಸಹ ಅನೇಕ ಬಾರಿ ಪ್ರತಿಕೆಗಳ ಮೂಲಕ ಮಾಹಿತಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ […]
ಶ್ರೀನಿವಾಸಪುರ : ಭಾಷೆಯ ಕಾಂತಿ ಮಸುಕಾದ ಕಾಲಗಳಲ್ಲಿಯೂ ಜನರನ್ನು ಒಂದೇ ನೆರಳಿಗೆ ಕರೆದೊಯ್ಯುವ ನಾಡಿನ ನಂಟು ಕನ್ನಡದದ್ದು ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಎ. ರಮೇಶ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಚಕೋರ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ‘ಕರ್ನಾಟಕತ್ವ ಮತ್ತು ಕನ್ನಡ ಕವಿತೆ’ ವಿಷಯವಾಗಿ ಉಪನ್ಯಾಸ ನೀಡಿದ ಅವರು, ಆದಿ ಕವಿಗಳಿಂದ ಇಂದಿನ ಪೀಳಿಗೆತನಕ ಎಲ್ಲರೂ ಕಾವ್ಯದ ಮೂಲಕ ಕನ್ನಡದ ಹಿರಿಮೆಯನ್ನು ವಿಶ್ವದ ಅಂಚುಗಳಿಗೆ ಕರೆದುಕೊಂಡು […]
ಶ್ರೀನಿವಾಸಪುರ – 1 ಸಂವಿಧಾನದ ಆಶಯ ಅನುಸರಿಸಬೇಕು: ಡಾ. ಚಂದ್ರಕಳಾಶ್ರೀನಿವಾಸನ್ ಶ್ರೀನಿವಾಸಪುರ: ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳ ನಾಂದಿ. ಎಲ್ಲರೂ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಡಾ. ಚಂದ್ರಕಳಾಶ್ರೀನಿವಾಸನ್ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ದಿನಾಚರಣೆಗೆ ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರ ಸಮರ್ಪಿಸಿ ಚಾಲನೆ ನೀಡಿ ಮಾತನಾಡಿದರು. ವೈವಿಧ್ಯತೆಯ ನಡುವೆಯೂ ದೇಶವನ್ನು ಏಕತೆಯ ನಡಿಗೆಯಲ್ಲಿ ಮುನ್ನಡೆಸುತ್ತಿರುವ ಸಂವಿಧಾನ, ಜನರ ಬದುಕಿಗೆ ಮಾರ್ಗದರ್ಶಕ. ಸಂವಿಧಾನದ ತತ್ವಗಳನ್ನು ಪಾಲಿಸುವ […]

