ಬ್ರಹ್ಮಾವರ, ಜೂ.20; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಅನುದಾನಿತ ಶಾಲೆಗಳಿಗೆ ಶಾಲೋಪಕರರಣಗಳನ್ನು ನೀಡಿ ಸಹಾಯ ಹಸ್ತ ನೀಡುವ ಎಂ.ಸಿ.ಸಿ. ಬ್ಯಾಂಕ್ ಜೂನ್ 19 ರಂದು ಬ್ರಹ್ಮಾವರ ಕಾಸ್ಮೋಪಾಲಿಟನ್ ಹೈಯರ್ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಿತು. ಬ್ಯಾಗ್ ವಿತರಣೆ ಮಾಡಿ ಮಾತನಾಡಿದ ಬ್ಯಾಂಕಿನ ನಿರ್ದೇಶಕರಾದ ಎಲ್ರಾಯ್ ಕಿರಣ್ ಕ್ರಾಸ್ಟೊ 113 ವರ್ಷಗಳ ಇತಿಹಾಸ ಇರುವ ಎಂ.ಸಿ.ಸಿ. ಬ್ಯಾಂಕ್ ಇವತ್ತು ನಮ್ಮ ಬ್ಯಾಂಕ್ ಲಾಭದ ಒಂದಿಷ್ಟು ಭಾಗ ಸಮಾಜದ ಕಟ್ಟಕಡೆಯಲ್ಲಿರುವರಿಗೆ ಸಹಾಯ ಹಸ್ತ ನೀಡಲು […]
ಕುಂದಾಪುರ, ಜೂ.20; ಶಿಲ್ಪ ಕಲಾಕೃತಿ:- ಮಾನಸಿಕ ಮತ್ತು ದೈಹಿಕವಾದ ಸದೃಢ ಆರೋಗ್ಯಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಚರಿಸಲ್ಪಡುವ ‘ಯೋಗ ದಿನಾಚರಣೆ’ 21.6.2025 ರ ಪ್ರಯುಕ್ತ ಹಳೆಅಳಿವೆ ಕಡಲ ತೀರ ಕೋಟೇಶ್ವರ, ಕುಂದಾಪುರದಲ್ಲಿ ಮರಳು ಶಿಲ್ಪದ ಮೂಲಕ ಜನಜಾಗೃತಿಯನ್ನು ಸಾರುವ ಕಲಾಕೃತಿಯನ್ನು 20.6.2025 ರಂದು ರಚಿಸಲಾಗಿದೆ. ಈ ಕಲಾಕೃತಿಯಲ್ಲಿ ಯೋಗಪಟುವನ್ನು ಕೇಂದ್ರವಾಗಿಸಿ, ಉತ್ತಮ ಆರೋಗ್ಯಕ್ಕಾಗಿ ಎಂಬ ಧ್ಯೇಯದೊಂದಿಗೆ 3 ಅಡಿ ಮತ್ತು 7 ಅಡಿ ಎತ್ತರ ಅಗಲಗಳುಳ್ಳ ಮರಳು ಕಲಾಕೃತಿಯನ್ನು ರಚಿಸಲಾಗಿದೆ. ಮರಳು ಶಿಲ್ಪದ ಹರೀಶ್ ಸಾಗಾ, ಸಂತೋಷ್ […]
ಸೈಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ಯ ಎಐಎಂಐಟಿ ಕೇಂದ್ರದ ಎಂ.ಬಿ.ಎ ವಿಭಾಗವು ಜೂನ್ 19, 2025 ರಂದು ಮಧ್ಯಾಹ್ನ 3.00 ಗಂಟೆಗೆ ಆರ್ಥರ್ ಶೆಣೈ ಆಡಿಯಟೋರಿಯಂನಲ್ಲಿ 2023–2025 ಎಂ.ಬಿ.ಎ ಬ್ಯಾಚ್ ವಿದ್ಯಾರ್ಥಿಗಳಿಗಾಗಿ ಪ್ರಾರ್ಥನಾ ಸೇವೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮ ವಿದ್ಯಾರ್ಥಿಗಳ ಮುಂದಿನ ಹಂತದ ಶುಭ ಕೋರುವ ಕಾರ್ಯಕ್ರಮವಾಗಿತ್ತು.ಡಾ. ಫಾ. ಮನುಜ್ ಎಸ್ಜೆ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಎಲ್ಲರನ್ನೂ ತಮ್ಮ ಆಶೀರ್ವಾದಗಳ ಕುರಿತು ಚಿಂತನೆ ಮಾಡಿಕೊಳ್ಳುವಂತೆ ಆಹ್ವಾನಿಸಿದರು. ಅವರ ಸಂದೇಶ ಧನ್ಯತೆಯ […]
ಬಾರಕೂರು; ಭಾರೀ ಮಳೆ ಮತ್ತು ಅನಿರೀಕ್ಷಿತ ರಜಾದಿನಗಳ ಸರಣಿಯ ನಂತರ, ಅಂತಿಮವಾಗಿ ಆಕಾಶವು ತೆರವುಗೊಂಡಿತು ಮತ್ತು ಸೂರ್ಯ ಪ್ರಕಾಶಮಾನವಾಗಿ ಬೆಳಗಿದನು, ಗುರುವಾರ, ಜೂನ್ 19, 2025 ರಂದು ಬೆಚ್ಚಗಿನ ಮತ್ತು ಹರ್ಷಚಿತ್ತದಿಂದ ಹೊಳೆಯುತ್ತಿದ್ದನು. ಹವಾಮಾನದಲ್ಲಿನ ಈ ಸಕಾಲಿಕ ಬದಲಾವಣೆಯು ರಾಷ್ಟ್ರೀಯ ಪ್ರೌಢಶಾಲೆಯಲ್ಲಿನ ರೋಮಾಂಚಕ ಚೈತನ್ಯವನ್ನು ಪ್ರತಿಬಿಂಬಿಸುವಂತೆ ತೋರುತ್ತಿತ್ತು, ಏಕೆಂದರೆ VIII ರಿಂದ X ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಬಹುನಿರೀಕ್ಷಿತ ಪೋಷಕರು-ಶಿಕ್ಷಕರ ಸಭೆಗಾಗಿ ಕ್ಯಾಂಪಸ್ ಶಕ್ತಿ ಮತ್ತು ನಿರೀಕ್ಷೆಯಿಂದ ಗಿಜಿಗುಡುತ್ತಿತ್ತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಾವತಿ ಪಿ.ಎಸ್. ಮತ್ತು […]
ಕುಂದಾಪುರ: ಮೊಬೈಲ್ ವಿಚಾರವಾಗಿ ಗಲಾಟೆ ಮಾಡಿದ ಪತಿ ಕೋಪಗಂಡು ಪತ್ನಿಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಘಟನೆ ಜೂ.19 ರಾತ್ರಿ ವೇಳೆ ನಡೆದಿದೆ. ಪ್ರಕರಣದ ಆರೋಪಿ ಮೃತರ ಪತಿ ಗಣೇಶ ಪೂಜಾರಿ(42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಮಠ ನಿವಾಸಿ ರೇಖಾ(27) ಕೊಲೆಗೀಡಾದ ಮಹಿಳೆ. ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಹಾಗೂ ರೇಖಾಳಿಗೆ 8 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದರು. ರೇಖಾ ಪೆಟ್ರೋಲ್ ಬಂಕ್ವೊಂದರಲ್ಲಿ ಕೆಲಸಕ್ಕಿದ್ದು ಗಣೇಶ್ […]
ಕುಂದಾಪುರ, ಜೂ.19; ಇಂದು ತಾಲೂಕು ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ , ಯುವ ಕಾಂಗ್ರೆಸ್ ಕುಂದಾಪುರ ಪದಾಧಿಕಾರಿಗಳು ಹಣ್ಣು ಹಂಪಲು ವಿತರಿಸಿ , ಲೋಕಸಭೆಯ ವಿರೋಧ ಪಕ್ಷ ನಾಯಕ , ಸಂಸದ , ರಾಹುಲ್ ಗಾಂಧಿಯವರ ಹುಟ್ಟು ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ , ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಪುರಸಭಾ ನಾಮನಿರ್ದೇಶನ ಸದಸ್ಯರಾದ ಅಶೋಕ್ ಸುವರ್ಣ, ಶಶಿರಾಜ್ ಪೂಜಾರಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ […]
ಕುಂದಾಪುರ; ಐ ಎಂ ಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ನಲ್ಲಿ ಒಂದು ದಿನದ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ರಾದ ಡಾ. ಪದ್ಮಚರಣ ಸ್ವೈನ್ ರವರು ಕಾರ್ಯಾಗಾರದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವೇದಿಕೆಯಲ್ಲಿ ಐ ಎಂ ಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ಉಪ ಪ್ರಾಂಶುಪಾಲರಾದ ಪ್ರೊ. ಸೌಜನ್ಯ, ಆಡಳಿತಾಧಿಕಾರಿಯಾದ […]
ಮಂಗಳೂರು, ಪ್ರತಿಷ್ಠಿತ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯಲ್ಲಿ ಜೂನ್ 17, 2025 ರಂದು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಎಲ್ಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಿ.ಸಿ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ಸಿ ಹಾಶಿರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಈದ್-ಉಲ್-ಅಧಾ ದೇವರಲ್ಲಿ ನಂಬಿಕೆಯುಳ್ಳವರು ಹೊಂದಿರುವ ಆಳವಾದ ಪ್ರೀತಿ ಮತ್ತು ನಂಬಿಕೆಯನ್ನು ಸಂಕೇತಿಸುತ್ತದೆ , ಸೃಷ್ಟಿಕರ್ತನೊಬ್ಬನೇ, ನಾವೆಲ್ಲಾ ಅವನ ಮಕ್ಕಳು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಖ್ಯಾತ […]
ಉಡುಪಿ ; ಅಂತರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆಯಾದ ಜೂನ್ 16 ರಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕಾರ್ಮಿಕರ ಆಯೋಗದಿಂದ ” ಗೃಹ ಕಾರ್ಮಿಕರ ದಿನಾಚರಣೆ” ಯನ್ನು ಉಡುಪಿ ಕಕ್ಕುಂಜೆಯ ಅನುಗೃಹ ಪಾಲನಾ ಕೇಂದ್ರದಲ್ಲಿ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳಾದ ಅತಿ. ವಂದನೀಯ. ಮೊನ್ಸಿಂಜೊರ್. ಫರ್ಡಿನಾಂಡ್ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದಂತಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಯಾಗಿರುವಂತಹ ಶ್ರೀ ಕಮಲ್ ಶಾ ಅಲ್ತಾಫ್ ಅಹ್ಮದ್ ರವರು ಭಾಗವಹಿಸಿ, ತಮ್ಮ ಸಂದೇಶದಲ್ಲಿ ” […]

