ಬಿಕರ್ನಕಟ್ಟೆ, ಜನೆವರಿ 8, 2026: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವದ ಸಿದ್ಧತೆಯ ನೊವೇನಾದ ನಾಲ್ಕನೇ ದಿನವನ್ನು ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಈ ದಿನದ ಮುಖ್ಯ ಚಿಂತನೆಯ ವಿಷಯ “ನಿಮ್ಮ ಕರೆಯನ್ನು ದೃಢಪಡಿಸಿಕೊಳ್ಳಲು ಸಕಲ ಪ್ರಯತ್ನ ಮಾಡಿ” ಎಂಬುದಾಗಿತ್ತು. ಸಂತ ಶಿಲುಬೆಯ ಯೋವಾನರ ಆಧ್ಯಾತ್ಮಿಕ ಬರಹಗಳ ಬೆಳಕಿನಲ್ಲಿ, ಕ್ರೈಸ್ತ ಕರೆಯ ಬಗ್ಗೆ ನಿಷ್ಠೆ, ಶಿಸ್ತು ಮತ್ತು ಬದ್ಧತೆಯನ್ನು ಉಳಿಸಿಕೊಳ್ಳುವ ಕುರಿತು ಈ ದಿನದಂದು ವಿಶೇಷ ಪ್ರಬೋಧನೆ ನೀಡಲಾಯಿತು.ಸಂತ ಶಿಲುಬೆಯ ಯೋವಾನರ ಪುಣ್ಯಪಟ್ಟದ 300ನೇ […]
ವರದಿ: ಫಾದರ್ ಅನಿಲ್ ಐವನ್ ಫರ್ನಾಂಡಿಸ್, ಚಿತ್ರಗಳು: ಸ್ಟ್ಯಾನಿ ಬಂಟ್ವಾಳ್ ಮಂಗಳೂರು: ಯೇಸು ಕ್ರಿಸ್ತರ ದೈವದರ್ಶನ ಮಹೋತ್ಸವದ (ಎಪಿಫನಿ) ಪ್ರಯುಕ್ತ ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಭಾನುವಾರ, ಜನವರಿ 4, 2026 ರಂದು ವಾರ್ಷಿಕ ಭವ್ಯ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಿಲಾಗ್ರಿಸ್ ಚರ್ಚ್ನಿಂದ ಆರಂಭಗೊಂಡು ರೊಸಾರಿಯೊ ಕೆಥೆಡ್ರಲ್ ವರೆಗೆ ನಡೆದ ಈ ಮೆರವಣಿಗೆಯು ಭಕ್ತಾದಿಗಳ ಆಧ್ಯಾತ್ಮಿಕ ಉತ್ಸಾಹ ಮತ್ತು ಪ್ರಾರ್ಥನಾ ಒಗ್ಗಟ್ಟನ್ನು ಪ್ರತಿಬಿಂಬಿಸಿತು. ಈ ಕಾರ್ಯಕ್ರಮವು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ […]
ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ, ಬಿಜೆಪಿ ಕಾರ್ಯಕರ್ತೆಯನ್ನು ಬಟ್ಟೆ ಬಿಚ್ಚಿ ಹಲ್ಲೆ ಮಾಡಿರುವ ಆರೋಪಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅರೆಸ್ಟ್ ಮಾಡುವ ವೇಳೆ ತಾನೆ ಬಟ್ಟೆ ಬಿಚ್ಚಿಕೊಂಡು ರಂಪಾಟ ಮಾಡಿದ್ದಾಳೆಂತೆ. ಹೌದು, ದೂರು ನೀಡಿದ ಅನ್ವಯದಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಯನ್ನುಬಂಧನ ಮಾಡುವ ವೇಳೆ ಹೈಡ್ರಾಮಾ ಸೃಷ್ಟಿ ಮಾಡಲು ಪ್ರಯತ್ನ ಮಾಡಿದ್ದಾಳಂತೆ.ತಾನೆ ಬಟ್ಟೆ ಬಿಚ್ಚಿಕೊಂಡು ತಾನು ಅಮಾಯಕ ಅಂತ ಬಿಂಬಿಸುವ ಪ್ರಯತ್ನ ಮಾಡಿದ್ದಾಳೆಂತೆ.ಅಷ್ಟೇ ಅಲ್ದೆ ಸುಜಾತಾ ಮೊಸ್ಟ್ ಕ್ರಿಮಿನಲ್ ಬ್ಯಾಗ್ರೌಂಡ್ 9 ಕೇಸ್ […]
ಬೆಂಗಳೂರು : ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ ಹಾಗೂ ಸುಲಭ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.) ತನ್ನ ಆಯ್ದ ಪ್ರತಿಷ್ಠಿತ ಸಾರಿಗೆಗಳ ಪ್ರಯಾಣದರಗಳಲ್ಲಿ ಶೇಕಡಾ 5ರಿಂದ 15ರವರೆಗೆ ರಿಯಾಯಿತಿ ಘೋಷಿಸಿದೆ ಎಂದು ನಿಗಮದ ವ್ಯವಸ್ಥಾಪಕರು ಅಕ್ರಂ ಪಾಷ ತಿಳಿಸಿದ್ದಾರೆ. ಬೆಂಗಳೂರು–ಮಂಗಳೂರು, ಬೆಂಗಳೂರು–ಕುಂದಾಪುರ, ಬೆಂಗಳೂರು–ಉಡುಪಿ, ಬೆಂಗಳೂರು–ಧರ್ಮಸ್ಥಳ, ಬೆಂಗಳೂರು–ಕುಕ್ಕೆ ಸುಬ್ರಮಣ್ಯ, ಬೆಂಗಳೂರು–ಪುತ್ತೂರು, ಬೆಂಗಳೂರು–ಮಡಿಕೇರಿ/ವಿರಾಜಪೇಟೆ, ಬೆಂಗಳೂರು–ದಾವಣಗೆರೆ, ಬೆಂಗಳೂರು–ಶಿವಮೊಗ್ಗ/ಸಾಗರ, ಬೆಂಗಳೂರು–ಚೆನ್ನೈ, ಬೆಂಗಳೂರು–ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು–ತಿರುಪತಿ, ಬೆಂಗಳೂರು–ಮಂತ್ರಾಲಯ, ಬೆಂಗಳೂರು–ಪುಣೆ/ಮುಂಬೈ, ಬೆಂಗಳೂರು–ವಿಜಯವಾಡ, ಬೆಂಗಳೂರು–ಎರ್ನಾಕುಲಂ, ಬೆಂಗಳೂರು–ಮದುರೈ, ಬೆಂಗಳೂರು–ಕೋಯಿಮತ್ತೂರು ಹಾಗೂ ಬೆಂಗಳೂರು–ತಿಶ್ರೂರು […]
ಚಿಕ್ಕಬಳ್ಳಾಪುರ: ಪ್ರಿಯಕರನ ಬ೦ಡವಾಳ ಬಯಲಾಗುತ್ತಿದ್ದಂತೆ ಆತ ಕಟ್ಟಿದ್ದ ತಾಳಿಯನ್ನೇ ಕಿತ್ತೆಸೆದುಯುವತಿ ಪೋಷಕರ ಜತೆಗೆ ಮರಳಿ ತೆರಳಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಗ೦ಗನಮಿದ್ದೆ ಬಡಾವಣೆಯ ನಿವಾಸಿ, ಪೈಂಟ್ ಕೆಲಸಗಾರ ಸ೦ದೀಪ್ ಎನ್ನುವವ್ಯಕ್ತಿ ಚಿಕ್ಕಬಳ್ಳಾಪುರ ನಗರದ ಕ೦ದವಾರ ಬಡಾವಣೆಯ ಶ್ರೀಮ೦ತ ಕುಟು೦ಬದ 18 ವರ್ಷದ ಯುವತಿಗೆಗಾಳ ಹಾಕಿ ಅವಳ ಜೊತೆ ಪರಾರಿಯಾಗಲು ಯಶಸ್ವಿಯಾಗಿದ್ದ. ಆಕೆಯ ಜೊತೆ ಎರಡು ದಿನಗಳ ಹಿ೦ದೆ ಎಸ್ಕೇಪ್ ಆಗಿದ್ದ ಇವನು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿ೦ತಾಮಣಿಯ ದೇವಸ್ನಾನವೊ೦ದರಲ್ಲಿ ಆಕೆಗೆ ತಾಳಿಯನ್ನೂ ಕಟ್ಟಿದ್ದ. ಬಳಿಕ ಈ […]
Confraternity Sunday & Feast of the Epiphany Celebrated with Deep Faith at Mount Rosary Church. Reported by P Archibald Furtado. Photographs arranged by Praveen Cutinho ಕಲ್ಯಾಣಪುರ; ಮೌಂಟ್ ರೋಸರಿ ಚರ್ಚ್ ತನ್ನ ವಾರ್ಷಿಕ ಹಬ್ಬಕ್ಕೆ, ಮಂಗಳವಾರ, ಜನವರಿ 6 ರಂದು ವೆಸ್ಪರ್ಸ್ ಮತ್ತು ಬುಧವಾರ, ಜನವರಿ 7, 2026 ರಂದು ಪ್ಯಾರಿಷ್ ಹಬ್ಬಕ್ಕೆ ಸಂತೋಷದಿಂದ ಸಿದ್ಧವಾಗುತ್ತಿದ್ದಂತೆ, ಪ್ಯಾರಿಷ್ ಸಮುದಾಯವು ಜನವರಿ 4, 2026 ರಂದು ಕಾನ್ಫ್ರಟರ್ನಿಟಿ ಭಾನುವಾರವನ್ನು […]
Milagres Cathedral unveils and inagurates the logo ‘2026 – Year of the Poor ಉಡುಪಿ, ಜನವರಿ 4: ಉಡುಪಿ ಡಯಾಸಿಸ್ನ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಜನವರಿ 2026 ರ ಭಾನುವಾರದಂದು ದ್ವಿಉತ್ಸವ ಆಚರಿಸಲಾಯಿತು. ಭಗವಂತನ ಎಪಿಫ್ಯಾನಿ ಹಬ್ಬದ ಆಚರಣೆ ಮತ್ತು “2026 – ಬಡವರ ವರ್ಷ”, ‘ಪೋಪ್ ಲಿಯೋ XIV ರ ಮೊದಲ ಅಪೋಸ್ಟೋಲಿಕ್ ಉಪದೇಶ, ಡಿಲೆಕ್ಸಿ ಟೆ (ನಾನು ನಿನ್ನನ್ನು ಪ್ರೀತಿಸುತ್ತೇನೆ)’ ಲೋಗೋ ಉದ್ಘಾಟನೆ. ಯೂಕರಿಸ್ಟಿಕ್ ಪವಿತ್ರ ಬಲಿಪೂಜೆ ಬೆಳಿಗ್ಗೆ 8 […]
ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯ ಮಧ್ಯಪ್ರದೇಶದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ 69ನೇ ನ್ಯಾಶನಲ್ ಸ್ಕೂಲ್ ಗೇಮ್ಸ್ ನ ಸ್ಕೇಟಿಂಗ್ ನಲ್ಲಿ 500 ಮೀ ರಿಂಕ್ ಓಟದಲ್ಲಿ ಮತ್ತು 2000 ಮೀ ರಸ್ತೆ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದು ಅಪೂರ್ವ ಸಾಧನೆಗೈದಿದ್ದಾರೆ. ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ.ರೋಹನ್ ಡಿ ಅಲ್ಮೇಡ ಅವರು ಯುವರಾಜ್ ಅವರ ಈ ಅದ್ಭುತ ಸಾಧನೆಗಾಗಿ ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗದ ಪರವಾಗಿ […]
ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸುಮಾರು 71 ಲಕ್ಷ ರೂಪಾಯಿಗೂ ಅಧಿಕ ಹಣ ಮತ್ತು ಚಿನ್ನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಂಟಿ ವ್ಯವಸ್ಥಾಪಕರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೆರ್ನೆ ಶಾಖೆಯ ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯಂ (30 ವ) ಎಂಬಾತನೇ ವಂಚನೆ ಎಸಗಿದ ಆರೋಪಿ. ಈತ ಬ್ಯಾಂಕ್ನ ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದನು. 2024ರ ಫೆಬ್ರವರಿ 6ರಿಂದ 2025ರ ಡಿಸೆಂಬರ್ 16ರ ಅವಧಿಯಲ್ಲಿ ಎಟಿಎಂಗೆ ನಿಗದಿತ ನಗದನ್ನು ಜಮಾ […]

